ನಟ ಜಗ್ಗೇಶ್ ಜೀವನವನ್ನೇ ಬದಲಿಸಿತ್ತು ಮಾರ್ಚ್ 22: ಏನದು?

ನಟ ಜಗ್ಗೇಶ್ ದಂಪತಿಗೆ ಇಂದು ವಿಶೇಷವಾದ ದಿನ. ನವರಸನಾಯಕ ಜೀವ ಜೀವನವನ್ನೆ ಬದಯಾಲಿಸಿದ ದಿನವಿದು. ಹೌದು, ಜಗ್ಗೇಶ್ ದಾಂಪತ್ಯ ಜೀನವನಕ್ಕೆ ಕಾಲಿಟ್ಟ ದಿನವಿದು. ಅಂದ್ಹಾಗೆ ಎಲ್ಲರಂತೆ ಅದ್ದೂರಿಯಾಗಿ ಧಾಂ ಧೂಂ ಆಗಿ ಹಸೆಮಮೆ ಏರಿಲ್ಲ. ಜಗ್ಗೇಶ್ ಮದುವೆ ಸುಪ್ರೀಂ ಕೋರ್ಟ್ ನಲ್ಲಿ ಇಂದಿಗೂ ಲ್ಯಾಂಡ್ ಮಾರ್ಕ್ ಆಗಿ ಉಳಿದಿದೆ. ಜಗ್ಗೇಶ್ ಮತ್ತು ಪರಿಮಳ ಅವರ ಲವ್ ಸ್ಟೋರಿ ಯಾವ ಸಿನಿಮಾಗಿಂತ ಕಮ್ಮಿಯಿಲ್ಲ.

ಸಿನಿಮಾಗಳಲ್ಲಿ ಬರುವಂತೆ ಲವ್, ಫೈಟ್, ಪೊಲೀಸ್, ಕೇಸ್ ಹೀಗೆ ಎಲ್ಲವೂ ಜಗ್ಗೇಶ್ ಅವರ ಬಾಳಲ್ಲಿ ನಡೆದಿದೆ. ಇದೆಲ್ಲವನ್ನ ಎದುರಿಸಿ, ಪ್ರೀತಿಸಿದವರ ಕೈಹಿಡಿದು 36 ವರ್ಷಗಳ ಕಾಲ ಸುಖಕರ ಜೀವನ ಮಾಡಿದ್ದಾರೆ ನಟ ಜಗ್ಗೇಶ್. ಇಂದು ಜಗ್ಗೇಶ್ ದಂಪತಿ 36ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಯಾವ ಸಿನಿಮಾಗಿಂತ ಕಮ್ಮಿ ಇಲ್ಲದ ಜಗ್ಗಣ್ಣನ ಮದುವೆ ಕಥೆ ಹೀಗಿದೆ..ಮುಂದೆ ಓದಿ.....

2 ಸಾವಿರ ರೂಪಾಯಿಲ್ಲಿ ಮದುವೆ ಆಗಿದ್ದ ಜಗ್ಗೇಶ್

2 ಸಾವಿರ ರೂಪಾಯಿಲ್ಲಿ ಮದುವೆ ಆಗಿದ್ದ ಜಗ್ಗೇಶ್

ಮಾರ್ಚ್ 22, 1984ರಲ್ಲಿ ನಟ ಜಗ್ಗೇಶ್ ಅವರು ಪರಿಮಳ ಜೊತೆ ಸಪ್ತಪದಿ ತುಳಿದರು. ಆಗ ಮದುವೆಗಾಗಿ ಖರ್ಚು ಮಾಡಿದ್ದು ಕೇವಲ 2 ಸಾವಿರ. ಈಗಿನ ಸಮಯಕ್ಕೆ ಅದು ಲಕ್ಷಕ್ಕೆ ಸಮ ಎನ್ನಬಹುದು. ಕಷ್ಟದ ಜೀವನ ಆರಂಭಿಸಿ ಇಂದು ರಾಯರ ಆಶೀರ್ವಾದಿಂದ ಸಂತೋಷವಾಗಿರುವುದಾಗಿ ಜಗ್ಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ.

ಪೋಷಕರ ಕಣ್ತಪ್ಪಿಸಿ ಪರಿಮಳಾಗೆ ತಾಳಿ ಕಟ್ಟಿದ್ದ ಜಗ್ಗೇಶ್

ಪೋಷಕರ ಕಣ್ತಪ್ಪಿಸಿ ಪರಿಮಳಾಗೆ ತಾಳಿ ಕಟ್ಟಿದ್ದ ಜಗ್ಗೇಶ್

ಜಗ್ಗೇಶ್ ಮತ್ತು ಪರಿಮಳ ಅವರು ಮೊದಲ ಸಲ ಭೇಟಿಯಾದಾಗ ಜಗ್ಗಣ್ಣನಿಗೆ 19 ವರ್ಷ ಮತ್ತು ಪರಿಮಳ ಅವರಿಗೆ 14 ವರ್ಷ ವಯಸ್ಸಂತೆ. ಜಗ್ಗೇಶ್ ಮೊದಲ ವರ್ಷ ಡಿಗ್ರಿ, ಪರಿಮಳ ಅವರು ಒಂಭತ್ತನೇ ತರಗತಿ. ಪ್ರೀತಿಯನ್ನು ಮನೆಯವರು ಒಪ್ಪದ ಕಾರಣ, 22 ಮಾರ್ಚ್ 1984ರಲ್ಲಿ ಪೋಷಕರ ಕಣ್ತಪ್ಪಿಸಿ ರಿಜಿಸ್ಟರ್ ಮದುವೆ ಆದರಂತೆ. ಪರಿಮಳ ಅವರು ಆಗ ಅಪ್ರಾಪ್ತ ವಯಸ್ಸಿನಲ್ಲಿದ್ದ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಜಗ್ಗೇಶ್ ಮೇಲೆ ಕಿಡ್ನ್ಯಾಪ್ ಕೇಸ್ ದಾಖಲಾಗಿತ್ತು

ಜಗ್ಗೇಶ್ ಮೇಲೆ ಕಿಡ್ನ್ಯಾಪ್ ಕೇಸ್ ದಾಖಲಾಗಿತ್ತು

ಪರಿಮಳ ಅವರನ್ನ ಅವರ ಮನೆಯಿಂದ ಜಗ್ಗೇಶ್ ಅವರು ಕರೆದುಕೊಂಡು ಬಂದುಬಿಟ್ಟಿದ್ದರು. ಆ ಸಮಯದಲ್ಲಿ ಅವರ ಮೇಲೆ ಕಿಡ್ನ್ಯಾಪ್ ಕೇಸ್ ದಾಖಲಾಗಿತ್ತು. 'ಚಿತ್ರನಟನಿಂದ ಕಿಡ್ನ್ಯಾಪ್' ಎಂದು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು.ಈ ಪ್ರಕರಣ ಸುಪ್ರೀಂ ಕೋರ್ಟ್ ವರೆಗೂ ಹೋಗಿತ್ತು.

ಸುಪ್ರೀಂ ಕೋರ್ಟ್ ನಲ್ಲಿ ಮಹತ್ವದ ತೀರ್ಪು

ಸುಪ್ರೀಂ ಕೋರ್ಟ್ ನಲ್ಲಿ ಮಹತ್ವದ ತೀರ್ಪು

ಅಪ್ರಾಪ್ತ ಯುವತಿಯನ್ನ ಅಪಹರಣ ಮಾಡಿ, ಮದುವೆ ಆಗಿರುವ ಬಗ್ಗೆ ನಟ ಜಗ್ಗೇಶ್ ವಿರುದ್ಧ ದಾಖಲಾಗಿದ್ದ ಪ್ರಕರಣ, ಸುಪ್ರೀಂ ಕೋರ್ಟ್ ನಲ್ಲಿ ತೀರ್ಮಾನವಾಗಿತ್ತು. ಅಂದು ಮಾನವೀಯತೆಯ ಆಧಾರದ ಮೇಲೆ, ಜಗ್ಗೇಶ್-ಪರಿಮಳ ಪ್ರೇಮಕ್ಕೆ ಬೆಲೆಕೊಟ್ಟ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸಂವಿಧಾನದ ವಿರುದ್ಧ ಹೋಗಿ ಪ್ರೇಮಿಗಳ ಪರ ತೀರ್ಪು ಕೊಟ್ಟರು. ಅಂದು ಎದುರಿಸಿದ ಕಷ್ಟಗಳಿಗೆ ಉತ್ತರ ಕೊಡಬೇಕೆಂದು ತೀರ್ಮಾನಿಸಿದ ಜಗ್ಗೇಶ್ ದಂಪತಿ ಇಂದು ಅನೇಕರಿಗೆ ಮಾದರಿಯಾಗಿದ್ದಾರೆ. ಜಗ್ಗೇಶ್ ಸ್ಯಾಂಡಲ್ ವುಡ್ ನ ಖ್ಯಾತ ನಟರಾಗಿ ಬೆಳೆದಿದ್ದಾರೆ. ಸಿನಿಮಾರಂಗ ಮಾತ್ರವಲ್ಲದೆ, ರಾಜಕೀಯದಲ್ಲೂ ಸಕ್ರೀಯರಾಗಿದ್ದಾರೆ.

More from Filmibeat

English summary
Kannada Actor jaggesh and his wife parimala celebrating their 36th wedding anniversary. they married at 1984 march 22nd.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X