Don't Miss!
- News
ಬೆಂಗಳೂರಿನಲ್ಲಿ ಇಂದು ಬುಧವಾರ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ
- Lifestyle
ಪ್ಲಾಸ್ಟಿಕ್ ಸರ್ಜರಿ ಕುರಿತ 10 ಆಸಕ್ತಿಕರ ಸಂಗತಿಗಳು
- Sports
ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್
- Finance
ಮೇ 17ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಮಾಹಿತಿ ಬಹಿರಂಗ: 528 ಕಿ.ಮೀ ರೇಂಜ್, ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್
- Technology
ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಬಿಡುಗಡೆ! ಡೌನ್ಲೋಡ್ ಮಾಡುವುದು ಹೇಗೆ?
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ರಾಘವೇಂದ್ರ ಸ್ಟೋರ್ಸ್' ಚಿತ್ರೀಕರಣ ವೇಳೆ ಕಾಡಿತು ಅಪ್ಪು ನೆನಪು: ಮುಂದೇನಾಯ್ತು?
ನಟ ಪುನೀತ್ ರಾಜ್ಕುಮಾರ್ ಅವರು ದಿನಗಳೂ ಕಳೆಯುತ್ತಿವೆ. ತಿಂಗಳುಗಳು ಉರುಳುತ್ತಿವೆ. ಆದರೆ ಅಪ್ಪು ಅವರನ್ನು ನೆನೆದಾಗಲೆಲ್ಲಾ ಬಹುತೇಕರ ಜೀವ ಮತ್ತೆ, ಮತ್ತೆ ಮರುಗುತ್ತೆ. ಅಪ್ಪು ಇಲ್ಲ ಎನ್ನುವುದನ್ನು ಒಪ್ಪಿಕೊಂಡು, ಅಪ್ಪು ನೆನಪುಗಳು ಅಜರಾಮರ ಆಗಿರಲು ಕರುನಾಡು ಮುಂದಾಗಿದೆ.
ಆದರಂತೆ ಪುನೀತ್ ರಾಜ್ ಕುಮಾರ್ ಅವರನ್ನು ಹತ್ತಿರದಿಂದ ಬಲ್ಲವರು ಯಾರೂ ಕೂಡ ಅವರ ನೆನಪುಗಳನ್ನು ಅಷ್ಟು ಸುಲಭಕ್ಕೆ ಮರೆಯುವಂತೆ ಕಾಣಿಸುತ್ತಿಲ್ಲ. ಯಾಕೆಂದರೆ ಪುನೀತ್ ರಾಜ್ಕುಮಾರ್ ಅಂದರೇನೆ ಹಾಗೆ ಅವರು ಎಲ್ಲರನ್ನೂ ಮನಸಾರೆ ಪ್ರೀತಿ ಮಾಡುತ್ತಿದ್ದರು.
ಈಗ ಮತ್ತೆ ಅಪ್ಪು ಹೀಗೆ ಮಾತನಾಡಲು ಕಾರಣ ನವರಸ ನಾಯಕ ಜಗ್ಗೇಶ್ ಅವರು. ಜಗ್ಗೇಶ್ ಮತ್ತು ಪುನೀತ್ ರಾಜ್ಕುಮಾರ್ ಅವರ ನಡುವೆ ಕೂಡ ವಿಶೇಷ ನಂಟಿದೆ. ಅದನ್ನು ಅವರು ಈ ಹಿಂದೆ ಹೇಳಿಕೊಂಡಿದ್ದು ಉಂಟು. ಆದರೆ ಈಗ ಇದ್ದಕ್ಕಿದ್ದ ಹಾಗೆ ಅಪ್ಪುವನ್ನು ನೆನೆದು ಜಗ್ಗೇಶ್ ಜೊತೆಗೆ ಚಿತ್ರ ತಂಡ ಕೂಡ ಕಣ್ಣೀರು ಹಾಕಿದೆ.

ಗಳಗಳನೇ ಅತ್ತ ಸಂತೋಷ್ ಆನಂದ್ ರಾಮ್, ಜಗ್ಗೇಶ್!
ನವರಸ ನಾಯಕ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಏನೇ ಇದ್ದರು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಸದ್ಯ ಅವರು ರಾಘವೇಂದ್ರ ಸ್ಟೋರ್ಸ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರೀಕರಣ ಮುಗಿದ ಬಳಿಕ ಅಪ್ಪು ಅವರ ಕುರಿತು ಚಿತ್ರ ತಂಡ ಮಾತನಾಡಲು ಶುರುವಾಡಿತಂದೆ. ಆಗ ಅಪ್ಪು ಬಗ್ಗೆ ಮಾತನಾಡುತ್ತಾ ನಿರ್ದೇಶಕ ಸಂತೋಷ್ ಆನಂದ್ ರಾಮ್, ಜಗ್ಗೇಶ್ ಮತ್ತು ರವಿಶಂಕರ್ ಗೌಡ ಅವರು ಗಳಗಳನೆ ಅತ್ತು ಬಿಟ್ಟರಂತೆ. ಈ ವಿಚಾರವನ್ನು ಜಗ್ಗೇಶ್ ಅವರು ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.
|
ಟ್ವೀಟ್ನಲ್ಲಿ ಬಾವುಕ ನುಡಿಗಳನ್ನು ಬರೆದ ಜಗ್ಗೇಶ್!
ಘಟನೆ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ಅವರು "ಮೊನ್ನೆ ರಾತ್ರಿ 'ರಾಘವೇಂದ್ರ ಸ್ಟೋರ್ಸ್' ಚಿತ್ರೀಕರಣ ಮುಗಿದು ಊಟಕ್ಕೆ ಕೂತಾಗ ಈ ನನ್ನ ಮುದ್ದು ನೆನಪಾಗಿ ನಾನು ಸಂತೋಷ ಆನಂದರಾಮ, ನಟ ರವಿಗೌಡ ಹುಚ್ಚರಂತೆ ಅತ್ತು ಬಿಟ್ಟೆವು. ನಮ್ಮ ಮನಸ್ಸಿಗೆ ಪುನೀತ್ ಇಲ್ಲಾ ಅಂತ register ಆಗುತ್ತಿಲ್ಲಾ" ಎಂದು ಬರೆದು ಕೊಂಡಿದ್ದಾರೆ. ಜೊತೆಗೆ ಅಪ್ಪು ಅವರ ಜೊತೆಗೆ ಇರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಪ್ಪು ಇಲ್ಲ ಎನ್ನುವುದು ಅಭಿಮಾನಿಗಳು, ಸಾಮಾನ್ಯ ಜನರಿಗೆ ಅರಗಿಸಿಕೊಳ್ಳಲು ಸಾಧ್ಯ ಇಗಿಲ್ಲ. ಹಾಗಿದ್ದ ಮೇಲೆ ಅಪ್ಪು ಅವರನ್ನು ಹತ್ತಿರದಿಂದ ಬಲ್ಲವರಿಗೆ ದುಃಖ ಮರೆಯಾಗುವುದು ಅಷ್ಟು ಸುಲಭ ಅಲ್ಲ.

'ರಾಘವೇಂದ್ರ ಸ್ಟೋರ್ಸ್' ಚಿತ್ರೀಕರಣದಲ್ಲಿ ಜಗ್ಗೇಶ್ ತಂಡ!
ಸದ್ಯಕ್ಕೆ ನಟ ಜಗ್ಗೇಶ್ ಅವರು ರಾಘವೇಂದ್ರ ಸ್ಟೋರ್ಸ್ ಚಿತ್ರದ ಶೂಟಿಂಗ್ನಲ್ಲಿ ತೊಡಗಿಸಿ ಕೊಂಡಿದ್ದಾರೆ. ತೀರ್ಥಹಳ್ಳಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಆಗಾಗ ನಟ ಜಗ್ಗೇಶ್ ಅವರು ಶೂಟಿಂಗ್ ಕುರಿತ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಮೇಕಿಂಗ್ ಬಗ್ಗೆ ಒಂದಷ್ಟು ಸುಳಿವುಗಳನ್ನು ಕೂಡ ಬಟ್ಟು ಕೊಡುತ್ತಾ ಇರುತ್ತಾರೆ.

ಯುವ ರಾಜ್ಕುಮಾರ್ಗೆ ಸಂತೋಷ್ ಆನಂದ್ ರಾಮ್ ನಿರ್ದೇಶನ!
ಇನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೂ ಅಪ್ಪು ಅವರ ಜೊತೆಗೆ ಹೆಚ್ಚಿನ ಒಡನಾಟ ಇದೆ. ಹಾಗಾಗಿ ಮುಂದೆ ಇಬ್ಬರು ಮತ್ತಷ್ಟು ಸಿನಿಮಾಗಳನ್ನು ಮಾಡಬೇಕಿತ್ತು. ಈಗ ಅದು ಸಾಧ್ಯ ಇಲ್ಲ. ಹಾಗಾಗಿ ಅವರು ಅಪ್ಪುಗಾಗಿ ಮಾಡಬೇಕಾಗಿದ್ದ ಚಿತ್ರವನ್ನು ಯುವರಾಜ್ಕುಮಾರ್ಗೆ ಮಾಡಲು ಮುಂದಾಗಿದ್ದಾರೆ.