'ದ್ವೇಷಿಸುವವರನ್ನು ಗೌರವಿಸುವೆ, ಇಷ್ಟವಾಗದಿದ್ದರೆ ಅವರಿಂದ ದೂರ ಉಳಿಯುವೆ!: ಎಂದಿದ್ದೇಕೆ ನಟ ಜಗ್ಗೇಶ್!
"ನನ್ನ ಬದುಕಲ್ಲಿ ನನಗೆ ಯಾರನ್ನು ನೋಯಿಸುವ ಗುಣವಿಲ್ಲಾ! ನನ್ನ ದ್ವೇಷಿಸುವವರನ್ನು ಗೌರವಿಸುವೆ.... ಒಂದು ವೇಳೆ ಇಷ್ಟವಾಗದಿದ್ದರೆ ಅವರಿಂದ ದೂರ ಉಳಿಯುವೆ...!" ಹೀಗೆ ನೋವಿನಿಂದ ಹೇಳಿಕೊಂಡಿರುವುದು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್. ಇದಕ್ಕೆ ಕಾರಣ ಕೂಡ ಇದೆ. ಅದೇ ಸಾಮಾಜಿಕ ಮಾಧ್ಯಮದಲ್ಲಿ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ವೈರಲ್ ಪೋಸ್ಟ್‌ಗಳು!.
ಎಸ್... ನಟ ಜಗ್ಗೇಶ್ ಈ ಹಿಂದೆ ಡ್ರೋನ್ ಪ್ರತಾಪ್ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದರು. ಬಳಿಕ ಅವರು ಡ್ರೋನ್ ಬಗ್ಗೆ ಇಷ್ಟು ವರ್ಷ ಹೇಳಿದ್ದೇಲ್ಲಾ ಸುಳ್ಳು ಎಂದು ತಿಳಿದ ಬಳಿಕ ಅವರ ವಿರುದ್ಧ ದೂರುಗಳು ದಾಖಲಾಗಿದ್ದವು. ಈ ವೇಳೆ ನಟ ಜಗ್ಗೇಶ್ ಕೂಡ ಪ್ರತಾಪ್ ಬಗ್ಗೆ ಬೇಸರ ಹೊರಹಾಕಿದ್ದರು. ಈತನ ಮಾತನ್ನು ನಂಬಿ ಕೆಟ್ಟೆ ಎಂದು ಹೇಳಿದ್ದರು. ಸದ್ಯ ಜಗ್ಗೇಶ್ ಅವರ ಹೆಸರಿನಲ್ಲಿ ಹಲವು ಸ್ಕ್ರೀನ್ ಶಾಟ್‌ಗಳು ಹೊರಬಂದಿದ್ದು, ವೈರಲ್ ಆಗುತ್ತಿವೆ.

ಬಿಗ್ ಬಾಸ್ ಮನೆಗೆ ಬಂದು ಸುದ್ದಿಯಲ್ಲಿರುವ ಡ್ರೋನ್ ಪ್ರತಾಪ್ !
ತಮ್ಮ ಮಾತುಗಳು ಸುಳ್ಳು ಎಂದು ಅನೇನರಿಗೆ ತಿಳಿಯುತ್ತಿದ್ದಂತೆ ಡ್ರೋನ್ ಪ್ರತಾಪ್ ಕಾಣೆಯಾಗಿದ್ದರು. ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ಬಂದು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಈಗಾಗಲೇ ಅವರನ್ನು ಮನೆಯಲ್ಲಿ ನೋಡಿ ಜನ ಅವರನ್ನು ಇಷ್ಟಪಡುತ್ತಿದ್ದಾರೆ. ಅದಕ್ಕೆ ಅವರು ಇನ್ನೂ ಮನೆಯಲ್ಲಿರುವುದೇ ಸಾಕ್ಷಿ. ಇದರ ಬೆನ್ನಲ್ಲೆ ನಟ, ರಾಜಕಾರಣಿ ಜಗ್ಗೇಶ್ ಪ್ರತಾಪ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಆಗಿ ಪೋಸ್ಟ್‌ಗಳನ್ನು ಹಾಕಿದ್ದಾರೆ ಎಂದು ಫೋಟೋಗಳು ಹರಿದಾಡುತ್ತಿವೆ.
'ಇವನೊಬ್ಬ ಡೋಂಗಿ. ಭಯಂಕರ ಡೋಂಗಿ.... ಎಚ್ಚರ... ಈ ಮನುಷ್ಯ ಡೋಂಗಿ ಮಾಡಿ ಎಲ್ಲರನ್ನೂ ನಂಬಿಸಿ ಬದುಕಲು ಯತ್ನಿಸುತ್ತಾನೆ. ಇವನ ಪ್ಲ್ಯಾನ್ ಬೇರೆ ಇರುತ್ತದೆ. ನನ್ನ ಬದುಕಲ್ಲಿ ನಾನು ಕಂಡ ಮೋಸ್ಟ್ ಎಜುಕೇಟಿವ್ ಫ್ರಾಡ್ ಇವನು" ಎಂದು ಜಗ್ಗೇಶ್ ಹೇಳಿದ್ದಾರೆ ಎಂಬ ಸ್ಕ್ರೀನ್ ಸಾಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದಕ್ಕೆ ನಟ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.
ನಾನ್ಯಾಕೆ ನನ್ನ ಮಕ್ಕಳ ವಯಸ್ಸಿನವರೊಂದಿಗೆ ತರ್ಕ ಮಾಡುವೆ?
ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪಷ್ಟನೆ ನೀಡಿರುವ ನಟ ಜಗ್ಗೇಶ್, "ಮಿತ್ರರೆ ನನ್ನ ಇನ್ಸ್ಟಗ್ರಾಮ್ ಹಿಂದಿನ ಮುಖಪುಟ photoshot ಬಳಸಿ ಯಾರೋ ಒಬ್ಬ ವ್ಯಕ್ತಿಯ ಬಗ್ಗೆ ನಾನು ನೆಗೆಟಿವ್ ಪೋಸ್ಟ್ ಹಾಕಿದಂತೆ ಮಾಡಿದ್ದಾರೆ. ಕ್ಷಣಿಕ ಖುಷಿ ಅವರಿಗೆ ಸಿಗಬಹುದು. ನೆನಪಿಡಿ ಸಿಕ್ಕಿಬಿದ್ದರೆ ನಿಮ್ಮ ಜನ್ಮ ಸಾಕು ಎನ್ನುವಂತೆ ಮಾಡುತ್ತದೆ ಇಂದಿನ ಕಾನೂನು..!" ಎಂದು ಎಚ್ಚರಿಸಿದ್ದಾರೆ.
"ಸ್ನೇಹಿತರೆ... ನನ್ನ ಬದುಕಲ್ಲಿ ನಾನು ಯಾರನ್ನು ನೋಯಿಸುವಂತ ಗುಣವಿಲ್ಲಾ! ನನ್ನ ದ್ವೇಷಿಸುವವರನ್ನು ಗೌರವಿಸುವೆ. ಒಂದು ವೇಳೆ ಇಷ್ಟವಾಗದಿದ್ದರೆ ಅವರಿಂದ ದೂರ ಉಳಿಯುವೆ!. ನನಗೀಗ 61 ನಾನ್ಯಾಕೆ ನನ್ನ ಮಕ್ಕಳ ವಯಸ್ಸಿನವರೊಂದಿಗೆ ತರ್ಕ ಮಾಡುವೆ!. ನನ್ನ ಮೇಲೆ ನಂಬಿಕೆಯಿರಲಿ ಅಂತ ಫೋಸ್ಟ್‌ಗಳು ಬಂದರೆ share ಮಾಡಿ... I will handle thankyou" ಎಂದು ಬರೆದುಕೊಂಡಿದ್ದಾರೆ.
ಜಗ್ಗೇಶ್ ಸ್ಪಷ್ಟನೆಗೆ ಅಭಿಮಾನಿಗಳ ಪ್ರತಿಕ್ರಿಯೆ
ಜಗ್ಗೇಶ್ ಸ್ಪಷ್ಟನೆಗೆ ಅಭಿಮಾನಿಗಳು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. "ಸಾರ್ ನೀವು ನಾ ಕಂಡ ಒಳ್ಳೆ ಕಲಾವಿದ ಡ್ರೋನ್ ಪ್ರತಾಪ್ ಅವರು ನಿಮಗೆ ಮಾಡಿದ್ದು ತಪ್ಪು. ನಾನು ಖಂಡಿಸುತ್ತೇನೆ.. ಒಳ್ಳೆಯದನ್ನು ಮಾಡಿದವನಿಗೆ ಅವರು ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಆದರೂ ನೀವು ಅವರಿಗೆ ಒಳ್ಳೇದ್ದೇನೆ ಬಯಸಿದ್ದೀರಿ. ನೀವು ತುಂಬಾ ಹೃದಯವಂತರು ಕನ್ನಡ ಇಂಡಸ್ಟ್ರಿಗೆ ಒಬ್ಬರೇ ಜಗ್ಗೇಶ್ ಇನ್ನು 10 ಶತಮಾನಗಳು ಕಳೆದರು ನಿಮ್ಮಂಥ ಒಬ್ಬ ಕಲಾವಿದ ಅಂದರೆ ಜಗ್ಗೇಶ್ ಅವತಾರದಲ್ಲಿ ನವರಸ ನಾಯಕನಾಗಿ ಯಾರು ಬರಲ್ಲ. ಜೈ ಜಗ್ಗೇಶ್" ಎಂದಿದ್ದಾರೆ.
'ಹೌದು ..ಪ್ರತಾಪನ ವಿರುದ್ದದ ಕಾಮೆಂಟ್ ಮಾಡಿದ್ದೀರ ಎಂದು ಇಲ್ಲ ಸಲ್ಲದ ಟ್ರೋಲ್ ಗಳುನಿಮ್ಮ ಮೇಲೆ ಆಗುತ್ತಿವೆ.....ಇದಕ್ಕೆ ಸ್ಪಷ್ಟನೆ ನೀಡಿದ್ದು ಇವಾಗ ಒಳ್ಳೆಯದಾಯಿತು .ಕೆಲವರಿಗೆ ನಿಮ್ಮ ಬಗ್ಗೆ ಇದ್ದ ಕೀಳಿರಿಮೆ ಕ್ಲಿಯರ್ ಆಗಿದೆ..." ಎಂದು ಜಗ್ಗೇಶ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











