»   » 'ನೀರ್ದೋಸೆ' ನಿರ್ದೇಶಕರ ಮುಂದಿನ ಚಿತ್ರದಲ್ಲಿ ಜಗ್ಗೇಶ್ ಇಲ್ಲ

'ನೀರ್ದೋಸೆ' ನಿರ್ದೇಶಕರ ಮುಂದಿನ ಚಿತ್ರದಲ್ಲಿ ಜಗ್ಗೇಶ್ ಇಲ್ಲ

Posted By:
Subscribe to Filmibeat Kannada

ಕಳೆದ ಕೆಲ ದಿನಗಳಿಂದ ಜಗ್ಗೇಶ್ ಅವರ ಮುಂದಿನ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ. 'ನೀರ್ದೋಸೆ' ಚಿತ್ರದ ನಿರ್ದೇಶಕನ ಮುಂದಿನ ಸಿನಿಮಾ 'ಲೇಡಿಸ್ ಟೈಲರ್' ಚಿತ್ರದಲ್ಲಿ ಜಗ್ಗೇಶ್ ಅಭಿನಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು.

ಆದ್ರೆ, ಈ ಸುದ್ದಿ ಸುಳ್ಳು ಎಂದು ನಟ ಜಗ್ಗೇಶ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನೀರ್ದೋಸೆ' ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಅವರ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಅಭಿನಯಿಸುತ್ತಿಲ್ಲವೆಂಬುದು ಖಚಿತವಾಗಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಜಗ್ಗೇಶ್ ಕೆಲ ವೈಯಕ್ತಿಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

'ಲೇಡಿಸ್ ಟೈಲರ್'ನಲ್ಲಿ ನಾನಿಲ್ಲ

''ಪತ್ರಿಕೆ, ಜಾಲತಾಣದಲ್ಲಿ ನೀರ್ದೋಸೆ ನಿರ್ದೇಶಕನ ಜೊತೆ ನನ್ನ ಮುಂದಿನ ಸಿನಿಮಾ ಎಂದು ನೋಡಿದೆ. ಅದು ಗಾಳಿಸುದ್ದಿ. ನನ್ನ ಮುಂದಿನ ತಯಾರಿ ನಡೆಯುತ್ತಿದೆ ತಿಳಿಸುವೆ'' - ಜಗ್ಗೇಶ್, ನಟ

'ನೀರ್ದೋಸೆ' ನಿರ್ದೇಶಕರ ಜೊತೆ ಜಗ್ಗೇಶ್ ಮತ್ತೊಂದು ಸಾಹಸ

ಪ್ರಚಾರದ ಗಿಮಿಕ್!

''ಇತ್ತೀಚಿಗೆ ಸಿನಿಮಾ ಪ್ರಚಾರಕ್ಕೆ ತುಂಬ ಗಿಮಿಕ್ ಬಳಕೆಯಾಗುತ್ತಿದೆ. ಜಗ್ಗೇಶ್ ಮಾಡಿದರೆ ಚೆನ್ನ ಅಂತ ಗಾಂಧಿನಗರದ ಅನಿಸಿಕೆ ಪ್ರಚಾರವಾಗಿದೆ. ಆಯ್ಕೆಗೆ ನಾನು ತುಂಬ ಒತ್ತು ನೀಡುವೆ'' - ಜಗ್ಗೇಶ್, ನಟ

ಮನಸ್ಸಿಗೆ ತೃಪ್ತಿ ನೀಡುವಂತಹ ಕೆಲಸ ಮಾಡುವೆ

''143 ಸಿನಿಮಾ ಪೂರೈಸಿರುವೆ. ಅಂಕೆಯಾಗುವ ಚಿತ್ರಗಳಿಗಿಂತ. ಮನಸಿಗೆ ತೃಪ್ತಿ ನೀಡುವ ಹಾಗು ಜನ ಮೆಚ್ಚುವ ಕಾರ್ಯ ಮಾತ್ರ ಮಾಡುವೆ. ಜೀವನ ತೃಪ್ತಿಕರವಾಗಿದೆ. ಕಾರ್ಯದಲ್ಲು ತೃಪ್ತಿ ಇರಬೇಕು'' - ಜಗ್ಗೇಶ್, ನಟ

ತಿಳಿಸುವುದು ನನ್ನ ಕರ್ತವ್ಯ

''ನನ್ನ ಇಷ್ಟು ವರ್ಷದ ನನ್ನ ಸಿನಿಮಾ ಕೃಷಿ ಯಶಸ್ಸಿಗೆ ಮಾಧ್ಯಮದ ಸಹಕಾರವೆ ಸಿಂಹಪಾಲು. ಮನಸಿನ ಅನಿಸಿಕೆ ತಿಳಿಸುವುದು ನನ್ನ ಕರ್ತವ್ಯ ತಿಳಿಸಿರುವೆ. ಧನ್ಯವಾದ''- ಜಗ್ಗೇಶ್, ನಟ

ಮುಂದಿನ ಸಿನಿಮಾ ಯಾವುದು?

''ಇತ್ತಿಚೆಗಷ್ಟೇ ಹೊಸ ಚಿತ್ರವನ್ನ ಕೈಗೆತ್ತಿಕೊಂಡಿರುವುದಾಗಿ ತಾವೇ ಟ್ವಿಟ್ಟರ್ ನಲ್ಲಿ ತಿಳಿಸಿದ್ದ ಜಗ್ಗೇಶ್ ಅವರು, ಅದು ಯಾವ ಚಿತ್ರವೆಂದು ಬಿಟ್ಟುಕೊಟ್ಟಿಲ್ಲ. ಹೀಗಾಗಿ, ಜಗ್ಗೇಶ್ ಅವರ ಮುಂದಿನ ಚಿತ್ರ ಯಾವುದು ಎಂಬುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

English summary
Kannada Actor Jaggesh has taken his twitter account to Clarify About His Next Film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada