twitter
    For Quick Alerts
    ALLOW NOTIFICATIONS  
    For Daily Alerts

    'ಪುಣ್ಯ ಮಾಡಿರೋರು 9-6 ಕೆಲಸ ಮಾಡ್ತಾರೆ' ಎಂದ ಅಭಿಮಾನಿಗೆ ಜಗ್ಗೇಶ್ ನೀಡಿದ ಉತ್ತರ

    |

    ''ಪುಣ್ಯ ಮಾಡಿರೋರು 9-6 ಕೆಲಸ ಮಾಡ್ತಾರೆ'' ಎಂದ ಅಭಿಮಾನಿಗೆ ನವರಸ ನಾಯಕ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ''ಸರಿಗಮಪ ಮಹಾ ಸಂಗಮದಲ್ಲಿ ಇದ್ದ ನೀವು ಕಾಮಿಡಿ ಕಿಲಾಡಿಗಳು ಬಂದಾಗ ನೀವು ಅಲ್ಲಿರಬೇಕಿತ್ತು'' ಎಂದು ನಿರಾಸೆ ವ್ಯಕ್ತಪಡಿಸಿದ ಅಭಿಮಾನಿಗೆ ಜಗ್ಗೇಶ್ ಅವರು ತಮ್ಮ ಸಮಯ ಪಾಲನೆ ಬಗ್ಗೆ ತಿಳಿಸಿದ್ದಾರೆ.

    ''ನಾನು ನನ್ನ ಕಾರ್ಯ ಸಮಯ ಬೆಳಿಗ್ಗೆ 9ರಿಂದ ಸಂಜೆ6ಕ್ಕೆ ಸೀಮಿತ! ಇದು ನನ್ನ 30 ವರ್ಷದ ಪಾಲನೆ ಹಾಗು ನನ್ನ ಹಿರಿಯರು ಕಲಿಸಿದ ಸಮಯಪ್ರಜ್ನೆ!ಎಷ್ಟೇ ಗಳಿಕೆ ಬಂದರು ನನ್ನ ಕಾರ್ಯಸಮಯ ಬದಲಾವಣೆಯಿಲ್ಲಾ! ಕಾರಣ ನನ್ನ ದೈನಂದಿನ ನಿಗದಿತ ದಿನಚರಿ! ಇಂದು ಈ ಶಿಸ್ತು ಎಲ್ಲಾ ಕ್ಷೇತ್ರದಲ್ಲು ಕಣ್ಮರೆ! ಅಂದು ಈ ಕಾರ್ಯಕ್ರಮ ರಾತ್ರಿ 2 ಘಂಟೆವರೆಗೆ ಇತ್ತು!'' ಎಂದು ಉತ್ತರಿಸಿದ್ದಾರೆ.

    ವಯಸ್ಸಿನ ಬಗ್ಗೆ ಚಿಂತಿಸುವ ಸ್ನೇಹಿತರಿಗೆ ಜಗ್ಗೇಶ್ ಹಿತನುಡಿವಯಸ್ಸಿನ ಬಗ್ಗೆ ಚಿಂತಿಸುವ ಸ್ನೇಹಿತರಿಗೆ ಜಗ್ಗೇಶ್ ಹಿತನುಡಿ

    ಇದಕ್ಕೆ ಮತ್ತೊಬ್ಬ ವ್ಯಕ್ತಿ ಕಾಮೆಂಟ್ ಮಾಡಿ ''ಪುಣ್ಯ ಮಾಡಿರೋರು 9-6 ಕೆಲಸ ಮಾಡ್ತಾರೆ. ಇನ್ನು ಹಲವು IT Professionals ನೈಟ್ ಡ್ಯೂಟಿ ಮಾಡ್ತಾರೆ. ಏಕೆಂದರೆ ಅವರಿಗೆ ಬೇರೆ ದೇಶದ ಕಾರ್ಯಸಮಯ ಕಾಪಾಡಬೇಕು. ಇದೇ ಜೀವನ'' ಎಂದಿದ್ದಾರೆ.

    Actor Jaggesh Comments About His Working Hours

    ಇವರ ಪ್ರತಿಕ್ರಿಯೆ ಪುನಃ ಜಗ್ಗೇಶ್ ಅವರು ಟ್ವೀಟ್ ಮಾಡಿ ''ಮನುಷ್ಯನಿಗೆ ತಾಯಿ ಗರ್ಭ ಆ ಗರ್ಭದ ಧರ್ಮ ಅ ಜೀವನಿಗೆ ದೇವರಿಂದ ನಿಯೋಜನೆಯಾದ ಕಾರ್ಯ ಜನ್ಮಾಂತರ ಪಲವಾಗಿ ನಿಗದಿ ಆಗಿರುತ್ತದೆ! ಪಾಲಿಗೆ ಬಂದದ್ದು ದೈವ ಪ್ರಸಾದವೆಂದು ಆ ಕಾರ್ಯ ಆನಂದಿಸಿ ಆಸ್ವಾಧಿಸಿ ಬದುಕಬೇಕು! ಆತ್ಮಸಂತೋಷಕ್ಕೆ ಕ್ರಮವಿದು! ಹೇಳಬೇಕು ಅನ್ನಿಸಿತು ಶುಭಮಸ್ತು!'' ಎಂದಿದ್ದಾರೆ.

    Recommended Video

    ಇವನ ಬೆನ್ನು ತಟ್ಟಿ ಆಶೀರ್ವಾದ ಮಾಡಿ | NodidavaruEnantare | Umapathy Srinivas | Filmibeat Kannada

    ಜಗ್ಗೇಶ್ ಅವರ ಅಭಿಪ್ರಾಯ ತಲೆದೂಗಿದ ಆ ಅಭಿಮಾನಿ ''ನಿಜವಾದ ಮಾತು ಅಣ್ಣಾ... ಹೊಟ್ಟೆಪಾಡು ಹಾಗೂ ದೈವ ಸಂಕಲ್ಪ. ನಮ್ಮದೇನಿದೆ. ಆಸ್ವಾದಿಸುವುದಷ್ಟೇ. ನಿಮ್ಮ ಮಾತುಗಳು ನಮ್ಮನ್ನು ಪ್ರೋತ್ಸಾಹ ಮಾಡುತ್ತದೆ'' ಎಂದಿದ್ದಾರೆ.

    English summary
    Kannada actor Jaggesh has comments about his working hours in present life.
    Sunday, November 8, 2020, 10:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X