»   » ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನ ಖಂಡಿಸಿದ ನಟ ಜಗ್ಗೇಶ್

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನ ಖಂಡಿಸಿದ ನಟ ಜಗ್ಗೇಶ್

Posted By:
Subscribe to Filmibeat Kannada
Jaggesh, Kannada Actor condemns Gauri Lankesh Demise | Filmibeat Kannada

ಹಿರಿಯ ಪತ್ರಕರ್ತೆ, ಚಿಂತಕಿ, ಲಂಕೇಶ್ ಪತ್ರಿಕೆ ಸಂಪಾದಕಿ ಗೌರಿ ಲಂಕೇಶ್(55) ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಈ ಹತ್ಯೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಇದೀಗ, ನಟ ಜಗ್ಗೇಶ್ ಅವರ ಕೂಡ ಈ ಬಗ್ಗೆ ತಮ್ಮ ಆಕ್ರೋಶವನ್ನ ಹೊರ ಹಾಕಿದ್ದಾರೆ.

ಗೌರಿ ಲಂಕೇಶ್ ಅವರ ಹತ್ಯೆಯ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಜಗ್ಗೇಶ್ '' ಇದೊಂದು ಹೇಯಕೃತ್ಯ, ಪೊಲೀಸರು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಬೇಕು'' ಎಂದಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಪ್ರಾಥಮಿಕ ತನಿಖೆಯ ಮುಖ್ಯಾಂಶಗಳು

Actor Jaggesh Condemned journalist Gauri Lankesh Death

ಜಗ್ಗೇಶ್ ಅವರು ಮಾಡಿರುವ ಟ್ವೀಟ್ ಇಲ್ಲಿದೆ ನೋಡಿ

''ಗೌರಿ ಲಂಕೇಶ್ ಹತ್ಯೆ ಹೇಯಕೃತ್ಯ. ಬೆಂಗಳೂರಿಗೆ ಗನ್ ಚಾಕು ಚೂರಿ ಸಂಸ್ಕೃತಿ ತುಂಬ ಅಪಾಯಕಾರಿ. ಇದನ್ನ ಸರ್ಕಾರ ಆರಕ್ಷಕರು ಈಗಲೆ ಮಟ್ಟ ಹಾಕದಿದ್ದರೆ ಕಿಡಿ ಕಾಡ್ಗಿಚ್ಚಾಗುವುದು'' - ಜಗ್ಗೇಶ್, ನಟ

ಅಪರೂಪದ ಪತ್ರಕರ್ತೆ ಗೌರಿ ಲಂಕೇಶ್ ವ್ಯಕ್ತಿ ಪರಿಚಯ

ಸದ್ಯ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗೌರಿ ಲಂಕೇಶ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಸಾರ್ವಜನಿಕ ದರ್ಶನದ ನಂತರ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು.

ಮೋದಿ, ಬ್ರಾಹ್ಮಣರ ಕಂಡರೆ ಉರಿದುಬೀಳುತ್ತಿದ್ದ ಗೌರಿ

English summary
Kannada Actor Jaggesh Condemns the brutal killing of journalist Gauri Lankesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada