ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ಜಗ್ಗೇಶ್; ಸುದೀರ್ಘ ಪಯಣ ನೆನೆದು ಭಾವುಕರಾದ ನವರಸನಾಯಕ
ಸ್ಯಾಂಡಲ್ ವುಡ್ ನ ಹಿರಿಯ ನಟ, ನವರಸನಾಯಕ ಜಗ್ಗೇಶ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 40 ವರ್ಷಗಳು ಪೂರೈಸಿದೆ. ನವೆಂಬರ್ 17, 1980ರಲ್ಲಿ ಜಗ್ಗೇಶ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. 40 ವರ್ಷದ ಪಯಣದ ಅನುಭವ ಹಂಚಿಕೊಳ್ಳುವ ಸಲುವಾಗಿ ಜಗ್ಗೇಶ್ ಇಂದು (ನವೆಂಬರ್ 24) ಮಾಧ್ಯಮ ಗೋಷ್ಠಿ ಆಯೋಜಿಸಿದ್ದರು.
Recommended Video
ರೇಣುಕಾಂಬ ಚಿತ್ರಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಗ್ಗೇಶ್ 40 ವರ್ಷದ ಪಯಣವನ್ನು ಮೆಲುಕು ಹಾಕಿದ್ರು. ನಾನು ಯಾರು ಅಂತಾನೇ ಯಾರಿಗೂ ಗೊತ್ತಿರಲಿಲ್ಲ. ಆಗ ನನ್ನನ್ನು ಗುರುತಿಸಿದ್ದು ಮಾಧ್ಯಮ. ಅಲ್ಲಿಂದ ನನಗೆ ಅವಕಾಶ ಸಿಗೋಕೆ ಆರಂಭ ಆಯ್ತು ಎಂದು ಜಗ್ಗೇಶ್ ಹೇಳಿದ್ದಾರೆ. ಮುಂದೆ ಓದಿ..

ವೀರಸ್ವಾಮಿ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟರು
ವೀರ ಸ್ವಾಮಿ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟರು. ನನ್ನ ಫೋಟೋ ನೋಡಿ ರಜನಿಕಾಂತ್ ತರ ಕಾಣಿಸ್ತೀಯ ಅಂತ ಹೇಳಿದ್ರು. ಅಮೇಲೆ ರಣಧೀರ ಸಿನಿಮಾ ಆಫರ್ ಸಿಕ್ಕಿತು. ನಂತರ ಮದ್ರಾಸ್ ಗೆ ತೆರಳಿದೆ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

ಎರಡು ಪಾತ್ರಗಳು ದೊಡ್ಡ ತಿರುವು ಕೊಟ್ಟಿದೆ
ಜೀವನದಲ್ಲಿ ಬಂದ ಎರಡು ಪಾತ್ರ ನನಗೆ ದೊಡ್ಡ ತಿರುವು ಕೊಟ್ಟಿದೆ. ಒಂದು ರಣರಂಗ ಸಿನಿಮಾ, ಮತ್ತೊಂದು ಧ್ವಾರಕೀಶ್ ನೀಡಿದ ಪಾತ್ರ. ಅಂಬರೀಶ್ ಅವರ ರೌಡಿ ಎಮ್ ಎಲ್ ಎ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತು. ಬಳಿಕ ಬಂಡ ನನ್ನ ಗಂಡ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡೆ. ಈ ಸಿನಿಮಾ ಬಿಡುಗಡೆ ಮಾಡೋಕೆ ಯಾರು ಮುಂದೆ ಬರಲಿಲ್ಲ. ಆಗ ಅಂಬರೀಶ್ ಸಹಾಯದಿಂದ ಈ ಸಿನಿಮಾ ರಿಲೀಸ್ ಆಗಿ ಉತ್ತಮ ಕಲೆಕ್ಷನ್ ಮಾಡಿತು ಎಂದು ಹೇಳಿದ್ದಾರೆ.

ಆಕಸ್ಮಿಕವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಜಗ್ಗೇಶ್
ಸಿನಿಮಾ ಜೊತೆಗೆ ಇದೀಗ ಜಗ್ಗೇಶ್ ರಾಜಕೀಯರಂಗದಲ್ಲೂ ಸಕ್ರೀಯರಾಗಿದ್ದಾರೆ. ರಾಜಕೀಯ ಪ್ರವೇಶದ ಬಗ್ಗೆಯೂ ಜಗ್ಗೇಶ್ ಮಾತನಾಡಿದ್ದಾರೆ. ಆಕಸ್ಮಿಕವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವುದಾಗಿ ಹೇಳಿರುವ ಜಗ್ಗೇಶ್, ಈಗಲೂ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೀನಿ, ನಾನು ಹೃದಯದಿಂದ ಬಂದ ರಾಜಕಾರಣಿ ಅಗಿಲ್ಲ ಎಂದರು.

ಡಿಕೆಶಿಯಿಂದ ರಾಜಕೀಯ ಪ್ರವೇಶ
ಒಂದು ಸಮಾರಂಭಕ್ಕೆ ಡಿ ಕೆ ಶಿವಕುಮಾರ್ ಜಗ್ಗೇಶ್ ರನ್ನು ಆಹ್ವಾನ ಮಾಡಿದ್ದರಂತೆ. ಅದೇ ಸಂದರ್ಭದಲ್ಲಿ ರಾಜಕೀಯದ ಮಾತು ಬಂತು, ಆಗ ರಾಜಕೀಯ ಸೇರಿಕೊಂಡೆ. ಅಲ್ಲಿಂದ ರಾಜಕೀಯ ಪಯಣ ಪ್ರಾರಂಭವಾಯ್ತು ಎಂದು ಜಗ್ಗೇಶ್ ಹೇಳಿದ್ದಾರೆ.

40 ವರ್ಷದ ಜರ್ನಿ ನೆನೆದು ಭಾವುಕರಾದ ಜಗ್ಗೇಶ್
ಇನ್ನೂ ಚಿತ್ರರಂಗದಲ್ಲಿ 40 ವರ್ಷದ ಸವೆಸಿದ ಜಗ್ಗೇಶ್ ತನ್ನ ಜರ್ನಿಯಲ್ಲಿ ಬೆನ್ನಿಗೆ ನಿಂತ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ಸಾಕಷ್ಟು ಪ್ರೀತಿ ಕೊಟ್ಟು, 40 ವರ್ಷ ನಡೆಸಿಕೊಂಡು ಬಂದಿದ್ದಾರೆ ಎನ್ನುತ ಭಾವುಕರಾದರು. ಸಿನಿಮಾರಂಗದಲ್ಲಿ ನನ್ನನ್ನು 40 ವರ್ಷ ಪೂರೈಸುವಂತೆ ಆ ದೇವರು ಮಾಡಿರುವುದು. ಜೊತೆಗೆ ಸಾಕಷ್ಟು ಜನ ಸಹಾಯ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.


Click it and Unblock the Notifications