twitter
    For Quick Alerts
    ALLOW NOTIFICATIONS  
    For Daily Alerts

    ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ನಟ ಜಗ್ಗೇಶ್ ದೂರು

    |

    ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸ್ಯಾಂಡಲ್ ವುಡ್ ನಟ ಜಗ್ಗೇಶ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಜಗ್ಗೇಶ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸುಳ್ಳು ವಿಚಾರಗಳನ್ನು ಪೋಸ್ಟ್ ಮಾಡುತ್ತಿರುವವರ ವಿರುದ್ಧ ಅಸಮಾಧಾನ ಹೊರಹಾಕಿರುವ ಜಗ್ಗೇಶ್, ಇದೀಗ ಆನ್ ಲೈನ್ ಮೂಲಕ ದೂರು ದಾಖಲಿಸಿದ್ದಾರೆ.

    ಸೆಲೆಬ್ರಿಟಿಗಳ ಹೆಸರಿನಲ್ಲಿ ಸಾಕಷ್ಟು ನಕಲಿ ಖಾತೆಗಳು ಹುಟ್ಟಿಕೊಂಡಿರುತ್ತವೆ. ಈ ಮೂಲಕ ಸುಳ್ಳು ಸುದ್ದಿ ಪ್ರಚಾರ ಮಾಡುತ್ತಾ, ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುತ್ತಾರೆ. ಸಾಕಷ್ಟು ನಕಲಿ ಖಾತೆಗಳು ಆಕ್ವೀಟ್ ಆಗಿವೆ. ಇದೀಗ ನಟ ಜಗ್ಗೇಶ್ ಅವರಿಗೂ ನಕಲಿ ಖಾತೆಯ ಕಾಟ ಶುರುವಾಗಿದ್ದು ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ. ಮುಂದೆ ಓದಿ..

    ಇನ್ನಾದರು ನಮ್ಮವರು, ನಮ್ಮವರಿಗೆ ಜೈ ಎನ್ನುವ: ಜಗ್ಗೇಶ್ ಟ್ವೀಟ್ ಮರ್ಮವೇನು?ಇನ್ನಾದರು ನಮ್ಮವರು, ನಮ್ಮವರಿಗೆ ಜೈ ಎನ್ನುವ: ಜಗ್ಗೇಶ್ ಟ್ವೀಟ್ ಮರ್ಮವೇನು?

    ಜಗ್ಗೇಶ್ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಿಡಿಗೇಡಿಗಳು

    ಜಗ್ಗೇಶ್ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಿಡಿಗೇಡಿಗಳು

    ಇತ್ತೀಚಿಗೆ ಜಗ್ಗೇಶ್ ಹೆಸರಿನಲ್ಲಿ ಹಿಂದಿ ಹೇರಿಕೆ ವಿಚಾರವಾಗಿ ಒಂದು ಪೋಸ್ಟ್ ವೈರಲ್ ಆಗಿತ್ತು. ಪೋಸ್ಟ್ ನಲ್ಲಿ "ಹಿಂದಿ ಹೇರಿಕೆ ಬಗ್ಗೆ ಅಭಿಪ್ರಾಯ ಹೇಳಿ ಎಂದು ಜನರ ಒತ್ತಾಯಕ್ಕೆ ಹೇಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ನನ್ನ ಮನಃಸಾಕ್ಷಿ ಅರಿತು ಈ ಮಾತು ಹೇಳುತ್ತಿದ್ದೇನೆ. ಕರ್ನಾಟಕ ಮತ್ತು ಕನ್ನಡಕ್ಕಿಂತ ಹೆಚ್ಚಾಗಿ ಯಾವುದೂ ಇಲ್ಲ, ಯಾರು ಇಲ್ಲ. ಆದರೆ ರಾಜಕೀಯ ಮತ್ತು ಪಕ್ಷ ಮತ್ತು ಐಟಿ ಈಡಿಗೆ ಹೆದರಿ ಬಹಳಷ್ಟು ನಟರುಗಳ ಹಾಗೆ ನಾನು ಮೂಕನಾಗಬೇಕಾಯಿತು ಕ್ಷಮಿಸಿ" ಎಂದು ಕನ್ನಡದ ಬಗ್ಗೆ ಇರುವ ಪೋಸ್ಟ್ ಜಗ್ಗೇಶ್ ಹೆಸರಿನಲ್ಲಿ ವೈರಲ್ ಆಗಿದೆ.

    ದೂರು ನೀಡಿರುವ ಜಗ್ಗೇಶ್

    ದೂರು ನೀಡಿರುವ ಜಗ್ಗೇಶ್

    ಇಗೀದ ಸೈಬರ್ ಪೊಲೀಸರಿಗೆ ದೂರು ನೀಡಿರುವ ಜಗ್ಗೇಶ್ "Online complaint ಕೊಟ್ಟಿರುವೆ. ಈ ರೀತಿಯ ಯತ್ನಗಳಿಗೆ ನಾನು ಹೆದರುವುದಿಲ್ಲ. ನನ್ನ ಅಭಿಮಾನಿಗಳು ನಂಬುವುದಿಲ್ಲ. ನಿಮ್ಮ ಕಾರ್ಯ ನೀವು ಮುಂದುವರಿಸಿ ನಮ್ಮ ಕಾರ್ಯ ನಾವು ಮಾಡುತ್ತೇವೆ. ಒಟ್ನಲ್ಲಿ ತಂತ್ರಜ್ಞಾನ ಬಳಕೆ ಮಜವಾಗಿದೆ. best of luck ಭೇಟಿಯಾಗುವ" ಎಂದು ಟ್ಟೀಟ್ ಮಾಡಿದ್ದಾರೆ.

    'ಕಲಾವಿದರನ್ನು ಚಪ್ಪಾಳೆಗಾಗಿ 2 ಗಂಟೆ ಬಳಸಿ ಆನಂದಿಸಿ ಮರೆತುಬಿಡಿ'- ಜಗ್ಗೇಶ್'ಕಲಾವಿದರನ್ನು ಚಪ್ಪಾಳೆಗಾಗಿ 2 ಗಂಟೆ ಬಳಸಿ ಆನಂದಿಸಿ ಮರೆತುಬಿಡಿ'- ಜಗ್ಗೇಶ್

    ಸೆಲೆಬ್ರಿಟಿಗಳಿಗೆ ಮುಜುಗರ ಉಂಟು ಮಾಡುವುದು ದಂಧೆಯಾಗಿದೆ

    ಸೆಲೆಬ್ರಿಟಿಗಳಿಗೆ ಮುಜುಗರ ಉಂಟು ಮಾಡುವುದು ದಂಧೆಯಾಗಿದೆ

    ಜಗ್ಗೇಶ್ ಹೆಸರಿನಲ್ಲಿ ಇರುವ ಪೋಸ್ಟ್ ನೋಡಿ ಅಚ್ಚರಿಗೊಂಡ ನಟ, "ಕೆಲವರಿಗೆ ಹೀಗೆ ಸೆಲೆಬ್ರಿಟಿ ಪೇಜ್ ಹಾಗು ಅವರಿಗೆ ಮುಜುಗರ ಉಂಟುಮಾಡುವುದು ದಂಧೆಯಾಗಿದೆ. ಖುಷಿಯಾಗಿರಿ. ಸೈಬರ್ ಕ್ರೈಮ್ ಇದೆ. ನನ್ನ ವೈಯಕ್ತಿಕ ದೂರು ಎಂದು ಭಾವಿಸಿ ಈ ಕೃತ್ಯಕ್ಕೆ ಕಾನೂನು ಕ್ರಮಕ್ಕೆ ಮುಂದಾಗುವೆ" ಎಂದು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದರು.

    Recommended Video

    ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
    IP Adress ಗೊತ್ತಾಗಿದೆ, ಅಮಾಯಕರು retweet ಮಾಡಿ

    IP Adress ಗೊತ್ತಾಗಿದೆ, ಅಮಾಯಕರು retweet ಮಾಡಿ

    "ಈ ನಕಲಿ ವಿಷಯದ ಹಿಂದೆ ಇರುವವರ IP Adress ಬಹುತೇಕ ಗೊತ್ತಾಗಿದೆ. ದಯಮಾಡಿ ಅಮಾಯಕರು retweet ಮಾಡಿ ಅನಾವಶ್ಯಕವಾಗಿ ಸೈಬರ್ ಸಮಸ್ಯೆಗೆ ನೀವು ಸಿಲುಕಬೇಡಿ. ಪ್ರೀತಿಯಿಂದ ಮಾಹಿತಿ." ಎಂದಿದ್ದಾರೆ. "ಇಂತಹ ಸಣ್ಣ ಮಕ್ಕಳ ಆಟ ನನಗೆ ಬಹಳ ಖುಷಿ. ಒಂದೆ ಕೆಲಸ ಬೊರ್ ಆಗಿತ್ತು ಈ ಹೊಸ ಆಟ ಮಜಕೊಡ್ತಿದೆ. let's enjoy new game." ಎಂದು ಹೇಳಿದ್ದಾರೆ.

    English summary
    Actor Jaggesh files a complaint against fake account creator. Fake news spreading against jaggesh in social media.
    Friday, September 18, 2020, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X