For Quick Alerts
  ALLOW NOTIFICATIONS  
  For Daily Alerts

  ಮಗನ ಕಾರು ಅಪಘಾತ: ದುರ್ಘಟನೆ ನಡೆದಿದ್ದು ಹೇಗೆಂದು ತಿಳಿಸಿದ ಜಗ್ಗೇಶ್

  |

  ಹಿರಿಯ ನಟ ಜಗ್ಗೇಶ್ ಪುತ್ರ ಯತಿರಾಜ್ ಚಲಾಯಿಸುತ್ತಿದ್ದ ಕಾರು ಹೈದರಾಬಾದ್ ಹೆದ್ದಾರಿಯಲ್ಲಿ ಅಪಘಾತವಾಗಿದೆ. ಈ ದುರ್ಘಟನೆ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

  ಮಗನ ಕಾರು ಅಪಘಾತ ಆಗಿದ್ದು ಹೇಗೆ ಎಂದು ಹೇಳಿದ ಜಗ್ಗೇಶ್ | Jaggesh | Filmibeat Kannada

  ''ಕೊರೋನ ಬಂದಾಗಿನಿಂದ ಹೊರ ಹೋಗಿಲ್ಲಾ ಹೋಗಿಬರುವೆ ಎಂದು ಅಮ್ಮನಿಗೆ ಹೇಳಿ ಹೊರ ಹೋದ ಮಗ ಯತಿರಾಜ,ಅವನು ಪ್ರತಿಬಾರಿ ಅವನ ಇಷ್ಟದ ರಸ್ತೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಹೋಗಿ ಬರುವಾಗ ಅಡ್ಡ ಬಂದ ನಾಯಿ ರಕ್ಷಿಸಲು ಹೋಗಿ ರಸ್ತೆ ವಿಭಜಕ್ಕೆ ಹೊಡೆದು ಕಾರು ಪಕ್ಕದ ರಸ್ತೆಗೆಬಿದ್ದಿದೆ!ರಾಯರದಯೇ ಹಾಗು ನಿಮ್ಮ ಶುಭಹಾರೈಕೆ ಯತಿರಾಜನಿಗೆ ಸಣ್ಣ ಗಾಯವು ಇಲ್ಲ!'' ಎಂದಿದ್ದಾರೆ ಜಗ್ಗೇಶ್.

  ರಾಯರು ನನ್ನಜೊತೆ ಸದ ಇರುತ್ತಾರೆ ಇದ್ದಾರೆ!ಇಂಥ ಘಟನೆಗಳು ಚಮತ್ಕಾರ ನನ್ನ ಬದುಕಲ್ಲಿ ನಡೆವುದೆ ನಾನಿದ್ದೀನೋ ಇರುತ್ತೀನೋ ನಿನ್ನ ಜೊತೆ ಯಾವಾಗಲು ಎಂದು ರಾಯರು ಅವರ ಪವಾಡ ನಿರೂಪಿಸಲು!ನೆನ್ನೆ ಪೂಜೆಯಲ್ಲಿ ಕುಟುಂಬದ ರಕ್ಷಣೆಗೆ ಪ್ರಾರ್ಥಿಸಿದ್ದೆ!
  ಸದ ಅವರ ಸ್ಮರಣೆಯಲ್ಲೆ ಬದುಕುವ ನನಗೆ ಇದು ಮತ್ತೊಂದು ಪವಾಡ!ನಂಬಿ ಕೆಟ್ಟವರಿಲ್ಲಾ ಗುರುರಾಯರ! ಎಂದು ಗುರುರಾಯರ ನೆನೆದಿದ್ದಾರೆ ಜಗ್ಗೇಶ್.

  ಜಗ್ಗೇಶ್ ನೀಡಿರುವ ಮಾಹಿತಿಯಂತೆ ಕಾರಿಗೆ ಅಡ್ಡಬಂದ ನಾಯಿಯನ್ನು ತಪ್ಪಿಸಲು ಸ್ಟೀರಿಂಗ್ ವ್ಹೀಲ್ ತಿರುಗಿಸಿದ ಪರಿಣಾಮ ಕಾರು ರಸ್ತೆ ವಿಭಜಗಕ್ಕೆ ಢಿಕ್ಕಿಯಾಗಿದೆ. ಯತಿರಾಜ್‌ಗೆ ಯಾವುದೇ ಗಾಯಗಳಾಗಿಲ್ಲ ಎಂದು ಸಹ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.

  ಯತಿರಾಜ್ ತಮ್ಮ ಬಿಎಂಡಬ್ಲು ಕಾರನ್ನು ಚಾಲಿಯಿಸಿಕೊಂದು ಚಿಕ್ಕಬಳ್ಳಾಪುರ ಸಮೀಪದ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

  ಅಪಘಾತವಾದ ಸಂದರ್ಭದಲ್ಲಿ ಯತಿರಾಜ್ ಒಬ್ಬರೇ ಕಾರಿನಲ್ಲಿದ್ದರು ಎನ್ನಲಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ.

  English summary
  Actor Jaggesh gives clarification on his son Yathiraj car accident. according to Jaggesh his son Yathiraj is completely safe.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X