ಕೋಮಲ್ 'ಉಂಡೆನಾಮ' ಹಾಕ್ತಾರಾ, ಹಾಕಿಸಿಕೊಳ್ತಾರಾ? ನೋಡೋಕೆ ಬರ್ತಿದ್ದಾರೆ ಜಗ್ಗೇಶ್

ಸೆನ್ಸೇಷನಲ್ ಸ್ಟಾರ್ ಕೋಮಲ್ ನಟನೆಯ 'ಉಂಡೆನಾಮ' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಬಹಳ ದಿನಗಳ ನಂತರ ಕೋಮಲ್ ಈ ಚಿತ್ರದಲ್ಲಿ ಮತ್ತೆ ಬಣ್ಣ ಹಚ್ಚಿದ್ದಾರೆ. ಪಕ್ಕಾ ಕಾಮಿಡಿ ಎಂಟರ್‌ಟೈನರ್‌ ಸಿನಿಮಾ ಇದು. ಈಗಾಗಲೇ ಚಿತ್ರದ ಟ್ರೈಲರ್, ಟೀಸರ್ ರಿಲೀಸ್ ಆಗಿ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿದೆ. ಈ ವಾರ ರಾಜ್ಯಾದ್ಯಂತ ಸಿನಿಮಾ ತೆರೆಗೆ ಬರ್ತಿದೆ.

ಕೆ. ಎಲ್ ರಾಜಶೇಖರ್ 'ಉಂಡೆನಾಮ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಟ ಜಗ್ಗೇಶ್ ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಲಿದ್ದಾರೆ. ನಾಯಕಿಯಾಗಿ ಧನ್ಯಾ ಬಾಲಕೃಷ್ಣ ಕಾಣಿಸಿಕೊಂಡಿದ್ದು ಹರೀಶ್ ರಾಜ್, ತಬಲ ನಾಣಿ, ಬ್ಯಾಂಕ್ ಜನಾರ್ಧನ್, KGF ಸಂಪತ್, ತನಿಷಾ ಕುಪಂದ ಚಿತ್ರದಲ್ಲಿ ನಟಿಸಿದ್ದಾರೆ. ಮದುವೆಯಾಗದ ನಾಯಕ ತನ್ನ ಬಯಕೆ ತೀರಿಸಿಕೊಳ್ಳಲು ಪರ್ಯಾಯ ಮಾರ್ಗ ಕಂಡುಕೊಳ್ಳಲು ಹೋಗಿ ಏನೆಲ್ಲಾ ಸಮಸ್ಯೆಗೆ ಸಿಲುಕಿಕೊಳ್ಳುತ್ತಾನೆ ಅನ್ನೋದು ಸಿನಿಮಾ ಕಥೆ. ಲಾಕ್‌ಡೌನ್ ಸಮಯದಲ್ಲಿ ನಡೆಯುವ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ.

Actor Jaggesh Going to Watch Brother Komal Starrer Undenaama Movie First Day First Show

ಟಿ. ಆರ್ ಚಂದ್ರಶೇಖರ್ ಉಂಡೆನಾಮ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಶ್ರೀಧರ್ ವಿ ಸಂಭ್ರಮ್ ಮ್ಯೂಸಿಕ್ 'ಉಂಡೆನಾಮ' ಚಿತ್ರಕ್ಕಿದೆ. 4 ವರ್ಷಗಳ ಹಿಂದೆ 'ಕೆಂಪೇಗೌಡ'- 2 ಸಿನಿಮಾ ಮೂಲಕ ಕೋಮಲ್ ಆಕ್ಷನ್ ಹೀರೊ ಆಗುವ ಕನಸು ಕಂಡಿದ್ದರು. ಇದೀಗ ಮತ್ತೆ ಕಾಮಿಡಿ ಟ್ರ್ಯಾಕ್‌ಗೆ ಮರಳಿದ್ದಾರೆ. ಇನ್ನು ವಿಡಿಯೋ ಮಾಡಿ ಮಾತನಾಡಿರುವ ಜಗ್ಗೇಶ್ ಸಂತೋಷ್ ಚಿತ್ರಮಂದಿರದಲ್ಲಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡುವುದಾಗಿ ಹೇಳಿದ್ದಾರೆ.

ಮೊದಲಿಗೆ ಈ ಚಿತ್ರಕ್ಕೆ '2020' ಎನ್ನುವ ಟೈಟಲ್ ಇತ್ತು. ನಂತರ ಚಿತ್ರತಂಡ ಟೈಟಲ್ ಬದಲಿಸಿ 'ಉಂಡೆನಾಮ' ಹೆಸರಿನಲ್ಲಿ ಈಗ ಪ್ರೇಕ್ಷಕರ ಮುಂದೆ ಬರ್ತಿದೆ. ಲಾಕ್‌ಡೌನ್‌ ಸಮಯದಲ್ಲಿ ಜನ ಎದುರಿಸಿದ ಸಮಸ್ಯೆಗಳನ್ನು ಚಿತ್ರದಲ್ಲಿ ತಮಾಷೆಯಾಗಿ ತೋರಿಸುವ ಪ್ರಯತ್ನ ನಡೀತಿದೆ. ಜಗ್ಗೇಶ್ ಈ ಬಾರಿ ಸಹೋದರನ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇತ್ತೀಚೆಗೆ ಟ್ರೈಲರ್ ರಿಲೀಸ್ ಮಾಡಿ ತಂಡಕ್ಕೆ ಸಾಥ್ ಕೊಟ್ಟಿದ್ದರು.

More from Filmibeat

English summary
Actor Jaggesh Going to Watch Brother Komal Starrer Undenaama Movie First Day First Show. K L Rajshekar Directed Comedy entertainer Releasing This week entire karnataka, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X