ಇನ್ಮುಂದೆ ಡಬ್ಬಿಂಗ್ ವಿರೋಧದ ಹೋರಾಟ ಮಾಡಲ್ವಂತೆ ನಟ ಜಗ್ಗೇಶ್

Recommended Video

ನಟ ಜಗ್ಗೇಶ್ ಡಬ್ಬಿಂಗ್ ವಿರೋಧಿ ಹೋರಾಟದಿಂದ ಹೊರಕ್ಕೆ | FILMIBEAT KANNADA

ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಡ ಎಂದು ಹೋರಾಟ ಮಾಡ್ತಿದ್ದ ಕಲಾವಿದರಲ್ಲಿ ನವರಸ ನಾಯಕ ಜಗ್ಗೇಶ್ ಪ್ರಮುಖರು. ಡಬ್ಬಿಂಗ್ ವಿರೋಧಿಸಿದ್ದಕ್ಕಾಗಿ ದಂಡ ಕೂಡ ಹಾಕಿಸಿಕೊಂಡಿದ್ದರು. ಆದ್ರೂ ಪಟ್ಟು ಬಿಡದ ಜಗ್ಗೇಶ್, ನಮ್ಮ ಕಲಾವಿದರು, ತಂತ್ರಜ್ಞರಿಗಾಗಿ ಈ ಹೋರಾಟ ಅಗತ್ಯ ಎನ್ನುತ್ತಿದ್ದರು.

ಆದ್ರೀಗ, ಡಬ್ಬಿಂಗ್ ವಿರೋಧಿ ಹೋರಾಟ ಮಾಡಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮುಕ್ತವಾಗಿ ಬರೆದುಕೊಂಡಿರುವ ಜಗ್ಗೇಶ್ '''ಡಬ್ಬಿಂಗ್ ಹೋರಾಟಕ್ಕೂ ನನಗೂ ಇನ್ನು ಮುಂದೆ ಸಂಭಂದವಿಲ್ಲ. ಕನ್ನಡಿಗರು ಅವರಿಗೆ ಇಷ್ಟವಾದುದನ್ನು ಪಡೆಯಬಹುದು' ಎಂದು ಹೇಳಿದ್ದಾರೆ.

ಇದು ಸಹಜವಾಗಿ ಅಚ್ಚರಿ ಉಂಟು ಮಾಡಿದೆ. ಅಂದು ಡಾ ರಾಜ್ ಕುಮಾರ್ ಅವರೇ ಡಬ್ಬಿಂಗ್ ವಿರೋಧಿಸಿದ್ದರು. ಅಣ್ಣಾವ್ರ ಮಾರ್ಗದಂತೆ ನಾವು ನಡೆಯುತ್ತಿದ್ದೇವೆ ಎಂದು ಜಗ್ಗೇಶ್, ಡಾ ಶಿವರಾಜ್ ಕುಮಾರ್, ಸಾರಾ ಗೋವಿಂದು, ವಾಟಳ್ ನಾಗರಾಜ್ ಸೇರಿದಂತೆ ಹಲವರು ಡಬ್ಬಿಂಗ್ ವಿರೋಧ ಮಾಡುತ್ತಾ ಬಂದಿದ್ದರು. ಬಟ್, ಇನ್ಮುಂದೆ ಜಗ್ಗೇಶ್ ಈ ಹೋರಾಟಕ್ಕೆ ನಾನಿಲ್ಲ ಎಂದಿದ್ದಾರೆ. ಹಾಗಿದ್ರೆ, ಜಗ್ಗೇಶ್ ಬರೆದಿರುವ ಪತ್ರದಲ್ಲಿ ಏನಿದೆ.? ಮುಂದೆ ಓದಿ....

ನನ್ನ ಪ್ರಾಮಾಣಿಕ ಅನಿಸಿಕೆ

ನನ್ನ ಪ್ರಾಮಾಣಿಕ ಅನಿಸಿಕೆ

''ಮಾನ್ಯರೆ 36 ವರ್ಷ ಕನ್ನಡ ಚಿತ್ರರಂಗದಲ್ಲಿ ದುಡಿದ ನಾನು ಚಿತ್ರರಂಗದ ಸಮಸ್ಯೆಗೆ ಸ್ಪಂದಿಸುವುದು ನನ್ನ ಕರ್ತವ್ಯ. ಉದ್ಯಮ ಕರೆದ ಡಡಬ್ಬಿಂಗ್ ವಿರುದ್ಧದ ಸಭೆಗೆ ನಾನು ಹೋದದ್ದು ನಿಜ. ನಮ್ಮ ಆಕ್ರೋಶವು ನಿಜ. ಆದರೆ ಅದಷ್ಟು ನಿಮ್ಮ ಕಲಾವಿದರು, ತಂತ್ರಜ್ಞರಿಗಾಗಿ ಮಾತ್ರವೆ ವಿನಃ ಯಾವ ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ'' ಎಂದು ಜಗ್ಗೇಶ್ ಹೇಳಿದ್ದಾರೆ.

ನನಗೂ ಡಬ್ಬಿಂಗ್ ಗೂ ಸಂಬಂಧವಿಲ್ಲ

ನನಗೂ ಡಬ್ಬಿಂಗ್ ಗೂ ಸಂಬಂಧವಿಲ್ಲ

''ಸಂವಿದಾನವೇ ಸರಿ ಅಂದ ಮೇಲೆ ನಮ್ಮದೇನು ಇಲ್ಲಾ. ಕನ್ನಡಿಗರಿಗೆ ಏನು ಇಷ್ಟೊವೋ ಅದನ್ನ ನೋಡಲು ಪಡೆಯಲು ಕನ್ನಡಿಗರು ಸರ್ವಸ್ವತಂತ್ರರು. ಇನ್ನು ಮುಂದೆ ನನಗು ಡಬ್ಬಿಂಗ್ ಗು ಯಾವ ಸಂಬಂಧವು ಇರುವುದಿಲ್ಲಾ'' ಎಂದು ಹೇಳುವ ಮೂಲಕ ಡಬ್ಬಿಂಗ್ ವಿರೋಧದ ಹೋರಾಟಗಾರರಿಗೆ ಶಾಕ್ ನೀಡಿದ್ದಾರೆ.

ನಿಮಗೆ ನೋವಾಗಿದ್ದರೆ ಕ್ಷಮೆಯಿರಲಿ

ನಿಮಗೆ ನೋವಾಗಿದ್ದರೆ ಕ್ಷಮೆಯಿರಲಿ

''ನಾನಾಯಿತು ನನ್ನ ಕಲಾಕರ್ತವ್ಯವಾಯಿತು. ನನ್ನ ಹಿಂದಿನ ನಡಾವಳಿಗೆ ನಿಮಗೆ ನೋವಾಗಿದ್ದರೆ ಕ್ಷಮೆಯಿರಲಿ. ನಾನು ನಿಮ್ಮವನು ವಯಸ್ಸಿನಲ್ಲಿ ಹಿರಿಯನಾದರೆ ಸಹೋದರನು ಎಂದು ಭಾವಿಸಿ. ನಗುತ ಸಂತೋಷವಾಗಿ ಬಾಳಿ. ಶುಭಹಾರೈಕೆ ಕನ್ನಡದ ಮನಗಳಿಗೆ'' ಎಂದು ಮನವಿ ಮಾಡಿಕೊಂಡಿದ್ದಾರೆ ಜಗ್ಗೇಶ್.

ಎಲ್ಲವನ್ನ ಮರೆತು ಬಿಡಿ ಎಂದ ಜಗ್ಗೇಶ್

ಎಲ್ಲವನ್ನ ಮರೆತು ಬಿಡಿ ಎಂದ ಜಗ್ಗೇಶ್

ನಾನು ಬದುಕಿನಲ್ಲಿ ಶ್ರಮದಿಂದ ಮುಂದೆ ಬಂದವನು. ಕನಸಿನಲ್ಲಿಯು ಯಾರಿಗು ಕೆಟ್ಟದ್ದು ಬಯಸಿಲ್ಲ, ಬಯಸೋಲ್ಲಾ. ರಾಯರ ಭಕ್ತರು ತಪ್ಪು ಮಾಡುವರಲ್ಲಾ. ನನಗೆ ನನ್ನ ಕನ್ನಡ ಭಾಷೆ ಕನ್ನಡ ಜನರೆ ದೇವರು ಎಂದು ಭಾವಿಸಿ ಶ್ರದ್ಧೆಯಿಂದ ಯಾವ ತಪ್ಪು ಮಾಡದೆ ಬದುಕಿರುವೆ. ನನ್ನ ಮೇಲಿನ ಅಪಾರ್ಥ ಸರಿಪಡಿಸಲು ಈ ಬರಹ. ಓದಿ ಭಿನ್ನಾಭಿಪ್ರಾಯ ಇದ್ದರೆ ಮರೆತುಬಿಡಿ !ವಿನಂತಿ'' ಎಂದು ಜಗ್ಗೇಶ್ ಕೇಳಿಕೊಂಡಿದ್ದಾರೆ.

ಜಗ್ಗೇಶ್ ಈ ನಿರ್ಧಾರಕ್ಕೆ ಕಾರಣವೇನು.?

ಜಗ್ಗೇಶ್ ಈ ನಿರ್ಧಾರಕ್ಕೆ ಕಾರಣವೇನು.?

ಅಷ್ಟಕ್ಕೂ, ಜಗ್ಗೇಶ್ ದೀಢಿರ್ ಅಂತ ಈ ನಿರ್ಧಾರ ಯಾಕೆ ತೆಗೆದುಕೊಂಡರು ಎಂಬ ಕುತೂಹಲ ಕಾಡುತ್ತಿದೆ. ಸದ್ಯಕ್ಕೆ ಡಬ್ಬಿಂಗ್ ಕುರಿತ ಯಾವುದೇ ಬೆಳವಣಿಗೆ ನಡೆದಿಲ್ಲ. ಅಂಬರೀಶ್ ಅವರ ನಿಧನದ ಶಾಕ್ ನಲ್ಲಿಯೇ ಇಡೀ ಚಿತ್ರರಂಗವಿದೆ. ಬಟ್ ಯಾಕೆ ಎಂದು ಜಗ್ಗೇಶ್ ಅವರೇ ಹೇಳಬೇಕು.

More from Filmibeat

English summary
Actor jaggesh is out from anti dubbing movement. He wrote letter in twitter and said he keeping distance from dubbing protest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X