For Quick Alerts
  ALLOW NOTIFICATIONS  
  For Daily Alerts

  ತಿಂಗಳುಗಳ ಬಳಿಕ ತಮ್ಮನನ್ನು ಭೇಟಿಯಾದ ಖುಷಿಯಲ್ಲಿ ನಟ ಜಗ್ಗೇಶ್

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀಟ್ ಆಗಿರುವ ನಟ. ಪ್ರತಿಯೊಂದು ವಿಚಾರಗಳನ್ನು ಜಗ್ಗೇಶ್ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಜಗ್ಗೇಶ್ ತಿಂಗಳ ಬಳಿಕ ತನ್ನ ಪ್ರೀತಿಯ ಸಹೋದರನನ್ನು ಭೇಟಿಯಾದ ಖುಷಿಯನ್ನು ಹಂಚಿಕೊಂಡಿದ್ದಾರೆ.

  ಹೌದು, ಜಗ್ಗೇಶ್ ಪ್ರೀತಿಯ ತಮ್ಮ ರಾಮಚಂದ್ರ ಅವರು ಜಗ್ಗೇಶ್ ನೋಡಲು ಬಂದಿದ್ದಾರೆ. ತಿಂಗಳುಗಳ ಬಳಿಕ 55 ವರ್ಷದ ಮಾತು ಬಾರದ ದೇವರ ಮಗ ತಮ್ಮನನ್ನು ನೋಡಿ ಸಂತಸ ಪಟ್ಟಿದ್ದಾರೆ ಜಗ್ಗೇಶ್. ಕೊರೊನಾ ಕಾರಣದಿಂದ ಸಹೋದರನನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲವಂತೆ. ಆದರೀಗ ತಮ್ಮನೆ ಅಣ್ಣನನ್ನು ನೋಡಲು ಬಂದಿದ್ದಾರೆ.

  ಅಮೆರಿಕಾದಲ್ಲಿ ರಾಯರ ದರ್ಶನ ಮಾಡಿದ ಮೇಘನಾ: ಧನ್ಯವಾದ ಹೇಳಿದ ಜಗ್ಗೇಶ್

  ತಮ್ಮನ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ, ದರಿದ್ರ ಕೊರೊನಾ ಬಂಧವನ್ನು ದೂರ ಮಾಡಿದೆ. ಈ ರೋಗ ಬೇಗ ತೊಲಗಲಿ ಎಂದು ಹೇಳಿದ್ದಾರೆ.

  "4 ತಿಂಗಳ ನಂತರ ಅಣ್ಣನ ಕಾಣಲು ಬಂದ ತಮ್ಮ ರಾಮಚಂದ್ರ. 55ವರ್ಷದ ಮಾತು ಬಾರದ ದೇವರ ಮಗ. ನನ್ನ ಮುದ್ದಿನ ತಮ್ಮ. ದರಿದ್ರ ಕೊರೊನಾ ಬಂಧನವನ್ನು ದೂರ ಮಾಡಿದೆ. ರಾಯರದಯಿಂದ ಬೇಗ ತೊಲಗಲಿ ವಿಶ್ವದಿಂದ ಈ ರೋಗ" ಎಂದು ಬರೆದುಕೊಂಡಿದ್ದಾರೆ.

  ಜಗ್ಗೇಶ್ ಅವರಿಗೆ ಮತ್ತೊಬ್ಬ ಸಹೋದರನಿದ್ದಾರೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ನಟ ಕೋಮಲ್ ಸಿನಿಮಾರಂಗಲ್ಲಿ ಆಕ್ವೀಟ್ ಆಗಿರುವುದರಿಂದ ಎಲ್ಲರಿಗೂ ಚಿರಪರಿಚಿತ. ಆದರೆ ರಾಮಚಂದ್ರ ಅವರು ಅಷ್ಟಾಗಿ ಪರಿಚಯವಿಲ್ಲ. ಅಂದ್ಹಾಗೆ ಈ ಹಿಂದೆ ಜಗ್ಗೇಶ್ ರಾಮಚಂದ್ರ ಪುತ್ರನಿಗೆ ಹೆಣ್ಣು ಮಗುವಾದ ಸಂತಸವನ್ನು ಹಂಚಿಕೊಂಡಿದ್ದರು.

  ಜಗ್ಗೇಶ್ ಗೆ ಇಬ್ಬರು ಗಂಡು ಮಕ್ಕಳು. ಪುತ್ರ ಗುರುರಾಜ್ ಗೂ ಗಂಡು ಮಗು. ಹೆಣ್ಣು ಮಕ್ಕಳೆಂದರೆ ಜಗ್ಗೇಶ್ ಗೆ ಪ್ರೀತಿ. ಹಾಗಾಗಿ ಅಣ್ಣನಿಗೆ ಮೊಮ್ಮಗಳಾದ ಸಂತಸವನ್ನು ಹಂಚಿಕೊಂಡು, ಹೆಣ್ಣು ಮಗುವಿನ ತಾತನಾದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

  English summary
  Actor Jaggesh Met His Brother Ramachandra after 4 Months Due to Covid-19. He shares a photo with his brother.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X