twitter
    For Quick Alerts
    ALLOW NOTIFICATIONS  
    For Daily Alerts

    ಜಗ್ಗೇಶ್ ಸ್ಪೂರ್ತಿ: ಅಂದು ಚಪ್ಪಲಿ ಕಾಯುವ ಕಾಯಕ, ಇಂದು ಆಟೋ ಮಾಲೀಕ

    By Bharath Kumar
    |

    ಸಿನಿಮಾ ನಟರು ಅಂದ್ರೆ ಕೇವಲ ತೆರೆಮೇಲೆ ಮಾತ್ರ ಅಬ್ಬರಿಸಿ ಮನರಂಜಿಸುತ್ತಾರೆ. ಕೇವಲ ಸಿನಿಮಾಗಳಲ್ಲಿ ಮಾತ್ರ ಹೀರೋಯಿಸಂ ತೋರಿಸುತ್ತಾರೆ. ತೆರೆಮೇಲೆ ಮಾತ್ರ ಸಾಮಾನ್ಯರಿಗೆ ಮಾದರಿಯಾಗಿರುತ್ತಾರೆ ಎಂಬ ಮಾತಿದೆ. ಆದ್ರೆ, ಈ ವಿಷ್ಯದಲ್ಲಿ ನವರಸ ನಾಯಕ ಜಗ್ಗೇಶ್ ವಿಭಿನ್ನವಾಗಿ ನಿಲ್ಲುತ್ತಾರೆ.[ಏಳು ಬೀಳು ನಡುವಿನ ನಟ ಜಗ್ಗೇಶ್ ಪಯಣ]

    ಹೌದು, ಜಗ್ಗೇಶ್ ಅವರ ಸಿನಿಮಾಗಳು ಅದೇಷ್ಟೋ ಜನರಿಗೆ ಸ್ಫೂರ್ತಿಯ ಸೆಲೆಯಾಗಿವೆ. ಸಿನಿಮಾದ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಜಗ್ಗೇಶ್‌, ನಿಜ ಜೀವನದಲ್ಲಿಯೂ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅದಕ್ಕೊಂದು ತಾಜಾ ಉದಾಹರಣೆ ಈ ಆಟೋ ಡ್ರೈವರ್ ಕಥೆ.['ವೀಕೆಂಡ್' ವೇದಿಕೆ ಮೇಲೆ ನಿಂತು ಸ್ಯಾಂಡಲ್ ವುಡ್ ಗೆ ಸಂದೇಶ ಕೊಟ್ಟ ಜಗ್ಗೇಶ್!]

    Actor Jaggesh Motivate To Auto Driver

    ಕೆಲ ವರ್ಷಗಳ ಹಿಂದೆ ಅಣ್ಣಮ್ಮ ದೇವಸ್ಥಾನದ ಎದುರು ಚಪ್ಪಲಿ ಕಾಯುತ್ತಿದ್ದ ವಿಕಲಚೇತನೊಬ್ಬನನ್ನ ಜಗ್ಗೇಶ್‌ ಭೇಟಿಯಾಗಿದ್ದರಂತೆ. ಅವರ ಪರಿಸ್ಥಿತಿ ನೋಡಿ ಜಗ್ಗೇಶ್‌, ಅವರಿಗೆ ಚೈತನ್ಯ ತುಂಬಿದ್ದರಂತೆ. ಜಗ್ಗೇಶ್‌ ಅವರು ಕೊಟ್ಟ ಆ ಸ್ಫೂರ್ತಿಯ ನುಡಿ, ಇಂದು ಆ ವ್ಯಕ್ತಿಯನ್ನ ತನ್ನ ಸ್ವಂತ ಕಾಲಿನ ಮೇಲೆ ತಾನು ನಿಂತು ಜೀವನ ನಡೆಸುವಂತೆ ಮಾಡಿದೆ. ಈ ಸಂತಸದ ಸಂಗತಿಯನ್ನು ಜಗ್ಗೇಶ್‌ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.[ಅವಮಾನ ಸಹಿಸದೆ ನಾನ್ ವೆಜ್ ಮುಟ್ಟಲ್ಲ ಅಂತ ಶಪಥ ಮಾಡಿದ್ದ ಜಗ್ಗೇಶ್.!]

    Actor Jaggesh Motivate To Auto Driver

    ''ಬಹು ವರ್ಷದ ಹಿಂದೆ ಅಣ್ಣಮ್ಮ ದೇವಾಲಯದಲ್ಲಿ ಚಪ್ಪಲಿ ಕಾಯುವ ಕಾಯಕ ಮಾಡುತ್ತಿದ್ದ ಅಂಗವಿಕಲನ ಹುರಿದುಂಬಿಸಿದ್ದೆ ! ಇಂದು ಆತ ಒಬ್ಬ ಆಟೋ ಒಡೆಯ ! ಆಕಸ್ಮಿಕ ಭೇಟಿಯಾದ ! ಸಾರ್ಥಕತೆ ಬದುಕು''....- ಜಗ್ಗೇಶ್, ನಟ

    English summary
    Jaggesh Shares his Good Experience With Auto Driver in Past Years.
    Monday, April 10, 2017, 10:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X