ಬಿಲ್ಡಪ್ ಕೊಡುವ ನಟರ ವಿರುದ್ಧ ಗರಂ ಆದ ನಟ ಜಗ್ಗೇಶ್

ಚಿತ್ರರಂಗದಲ್ಲಿ ಬಿಲ್ಡಪ್, ಶೋ ಎಲ್ಲಾ ಸರ್ವೆಸಾಮಾನ್ಯ. ಒಂದು ಸಿನಿಮಾ ಮಾಡುತ್ತಿದ್ದಂತೆ ಅವರ ಬಿಲ್ಡಪ್ ಬೇರೆ ಆಗಿರುತ್ತೆ. ಅಂತವರ ವಿರುದ್ಧ ನವರಸ ನಾಯಕ ಜಗ್ಗೇಶ್ ಫುಲ್ ಗರಂ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಗಡ್ ಲುಕ್ ನ ಫೋಟೋ ಶೇರ್ ಮಾಡಿ ಬಿಲ್ಡಪ್ ಬಗ್ಗೆಯೂ ಮಾತನಾಡಿದ್ದಾರೆ.

Recommended Video

ನಟ ಜಗ್ಗೇಶ್ 75 ಲಕ್ಷ ರೂಪಾಯಿ ಕಳೆದುಕೊಂಡಿದ್ದು ಯಾಕೆ? ಹೇಗೆ? | Jaggesh | FILMIBEAT KANNADA

ಯಾರ ಹೆಸರನ್ನು ಪ್ರಸ್ತಾಪ ಮಾಡದೆ ಈಗಿನವರು ಕೊಡುವ ಬಿಲ್ಡಪ್ ಬಗ್ಗೆ ಟ್ವಿಟ್ಟರ್ ನಲ್ಲಿ ಬಹಿರಂಗ ಪಡಿಸಿದ್ದಾರೆ. ಆದರೆ ಜಗ್ಗೇಶ್ ಮಾತನಾಡಿದ್ದು ಯಾರ ಬಗ್ಗೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಅಷ್ಟಕ್ಕೂ ಜಗ್ಗೇಶ್ ದಿಢೀರನೆ ಬಿಲ್ಡಪ್ ಬಗ್ಗೆ ಪ್ರಸ್ತಾಪವೆತ್ತಿದ್ದೇಕೆ. ಯಾರ ಬಗ್ಗೆ ಅಷ್ಟು ಬೇಸರದಿಂದ ಮಾತನಾಡಿದ್ದಾರೆ ಎನ್ನುವುದು ಬಹಿರಂಗವಾಗಿಲ್ಲ. ಅಷ್ಟಕ್ಕು ಜಗ್ಗೇಶ್ ಹೇಳಿದ್ದನು? ಮುಂದೆ ಓದಿ..

ಜಗ್ಗೇಶ್ ಟ್ವೀಟ್

ಜಗ್ಗೇಶ್ ಟ್ವೀಟ್

ಜಗ್ಗೇಶ್ ಮಾಡಿರುವ ಟ್ವೀಟ್ ಹೀಗಿದೆ "ಎಂಥ ಕಾಲಘಟ್ಟ ಇಂದು. ರಾಜ್ ವಿಷ್ಣು ಅಂಬಿ ಪ್ರಭಾಕರ್ ಶಂಕರ್ ಜಮಾನ ಕಂಡವರು ನಾವು. ಇಂದು ಜಾಲತಾಣ ಕುಬೇರನ ಬಿಲ್ಡಪ್ ಗಳಿಗೆ ಜೈ ಅನ್ನಬೇಕೇಕಂತೆ. ಅಂದರೆ ಗ್ರೇಟ್ ಇಲ್ಲಾಂದ್ರೆ ಚಿತ್ರಾನ್ನವಂತೆ. ಕರ್ಮೆವೆ ಇದನ್ನ ಮೀರಿ ಬೆಳೆದ ಸಂತತಿ ನಾವು. ಇಂದು ಹುಟ್ಟು ಸಾವು ಬರಿ ಜಾಲತಾಣದಲ್ಲೆ ನಿರ್ದಾರ ಮಾಡದಿರಿ ಅದಮೀರಿ
ಬೆಳೆದ ಸಂತತಿಯವರು ನಾವು. ನಾವು ನೋ ಬಿಲ್ಡಪ್" ಎಂದು ಎಂದಿದ್ದಾರೆ.

ವಾಕರಿಕೆ ಬರುತ್ತಿದೆ ಇತ್ತೀಚಿನ ನಡಾವಳಿಕಂಡು

ವಾಕರಿಕೆ ಬರುತ್ತಿದೆ ಇತ್ತೀಚಿನ ನಡಾವಳಿಕಂಡು

ಮತ್ತೆ ಟ್ವೀಟ್ ಮಾಡಿರುವ ಜಗ್ಗೇಶ್ "ಎಂಥ ಬಿಲ್ಡಪ್ ಕಾಲವಿದು. ಗನ್ ಮ್ಯಾನ್, ಬೌನ್ಸರ್ಸ್ ಇದ್ದವನ ಒಪ್ಪಿ ಉಘೇ ಉಘೇ ಅಂತೆ. ಎಲ್ಲಾ ಇದ್ದು ಸಾಮಾನ್ಯನಂತೆ ಬದುಕುವವ ಎಲ್ಲೂ ಸಲ್ಲದ ಸಾಮಾನ್ಯನಂತೆ. ಯಾಕೆ? ವಾಕರಿಕೆ ಬರುತ್ತಿದೆ ಇತ್ತೀಚಿನ ನಡಾವಳಿಕಂಡು. ತುಂಬಿದ ಕೊಡ ತುಳುಕೋಲ್ಲಾ. ಅರ್ಧ ತುಂಬಿದ ಕೊಡವೆ ಶಬ್ದ ಜಾಸ್ತಿ. ಬಿಲ್ಡಪ್ ಗೆ ಅಳೆಯದಿರಿ ಸಾಧನೆ. ಎಲ್ಲ ಬಿಲ್ಡಪ್ ಕೊಟ್ಟು ಬೋರ್ ಆಗಿದೆ"ಎಂದು ಬಿಲ್ಡಪ್ ಕೊಡುವವ ವಿರುದ್ಧ ಗರಂ ಆಗಿ ಟ್ವೀಟ್ ಮಾಡಿದ್ದಾರೆ.

ಜಗ್ಗೇಶ್ ಹೇಳಿದ್ದು ಯಾರಿಗೆ?

ಜಗ್ಗೇಶ್ ಹೇಳಿದ್ದು ಯಾರಿಗೆ?

"ಕೊರೋನ ಮನುಜನ್ಮ ಜಾಲಾಡಿಸಿ ರುಬ್ಬಿದರು ಎಚ್ಚರ ಆಗುತ್ತಿಲ್ಲಾ ಮನುಜನ್ಮ. ಹೇಗೆ ಅರಿವಾಗುವುದೋ ಕ್ಷಣಿಕ ಸುಖಕದ ಮನುಜನಿಗೆ ನಾ ಕಾಣೆ ದೇವರಾಣೆ" ಎಂದಿದ್ದಾರೆ. ಜಗ್ಗೇಶ್ ಯಾರ ಬಿಲ್ಡಪ್ ಕಂಡು ಕೋಪಗೊಂಡಿದ್ದಾರೆ? ಯಾರ ಬಗ್ಗೆ ಮಾತನಾಡಿದ್ದಾರೆ? ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಅಲ್ಲದೆ ಜಗ್ಗೇಶ್ ಮಾತಿಗೆ ಅನೇಕರು ಬೆಂಬಲ ನೀಡುತ್ತಿದ್ದಾರೆ. 'ನೀವು ಹೇಳಿರುವುದು 100ರಷ್ಟು ಸತ್ಯ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ತೋತಾಪುರಿ ಸಿನಿಮಾದಲ್ಲಿ ಜಗ್ಗೇಶ್

ತೋತಾಪುರಿ ಸಿನಿಮಾದಲ್ಲಿ ಜಗ್ಗೇಶ್

ಜಗ್ಗೇಶ್ ಸದ್ಯ ತೋತಾಪುರಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಹುತೇಕ ಚಿತ್ರೀಕರಣ ಸಹ ಮುಗಿದಿದೆ. ಇದರ ಜೊತೆಗೆ ರಂಗನಾಯಕ ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎರಡೂ ಸಿನಿಮಾಗಳು ಸಹ ಭಾರಿ ನಿರೀಕ್ಷೆ ಹುಟ್ಟುಹಾಕಿದ ಚಿತ್ರಗಳಾಗಿವೆ.

More from Filmibeat

English summary
Actor Jaggesh outrage against buildup actors. Jaggesh shared new look photo viral in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X