ಪಿಯುಸಿ ವಿದ್ಯಾರ್ಥಿಗಳ ಪೋಷಕರಿಗೆ ಜಗ್ಗೇಶ್ ಮನವಿ
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಇಂದು ಬಂದಿದೆ. ಈ ವಿಶೇಷವಾಗಿಯೇ ಪಿಯುಸಿ ವಿದ್ಯಾರ್ಥಿಗಳ ಪೋಷಕರಲ್ಲಿ ನಟ ಜಗ್ಗೇಶ್ ಒಂದು ಮನವಿ ಮಾಡಿದ್ದಾರೆ.
''ಪಿಯುಸಿ ಫಲಿತಾಂಶ ಆತ್ಮೀಯ ಪೋಷಕ ಬಂಧುಗಳೆ ಅಕಸ್ಮಾತ್ ಮಕ್ಕಳ ಅಂಕೆ ಅಥವಾ ಫಲಿತಾಂಶ ಏರುಪೇರು ಆದರೆ ಮಕ್ಕಳ ಹಂಗಿಸಬೇಡಿ!. ಬದಲಿಗೆ ಮರಳಿ ಯತ್ನ ಮಾಡಿ ಎಂದು ಹುರಿದುಂಬಿಸಿ. ಫಲಿತಾಂಶಕ್ಕಿಂತ ನಮ್ಮ ಮಕ್ಕಳೆ ನಮ್ಮ ಆಸ್ತಿ! ನಲ್ಮೆಯ ದೇಶದ ಹೆಮ್ಮೆಯ ಮಕ್ಕಳಿಗೆ ಪಿಯುಸಿ ಫಲಿತಾಂಶಕ್ಕೆ ಮುಂಗಡ ಶುಭಹಾರೈಕೆ..God bless ಕಂದಮ್ಮಗಳೆ.'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಓದುವ ಮಕ್ಕಳು ಕಡಿಮೆ ಅಂಕ ಪಡೆದಿರೆ ಕೆಲವು ಮನೆಗಳಲ್ಲಿ ಅವರನ್ನು ಹಂಗಿಸುತ್ತಾರೆ. ಬಂದ ನೆಂಟರು ''ನಿನ್ನ ಮಾರ್ಕ್ಸ್ ಎಷ್ಟು..?'' ಎಂದು ಕೇಳಿ ಕೇಳಿ ಮಕ್ಕಳನ್ನು ಮಾನಸಿಕವಾಗಿ ಹಿಂಸೆ ನೀಡುತ್ತಾರೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿಗೆ ಪ್ರಥಮ ಸ್ಥಾನ
ಈ ರೀತಿ ಮಾಡದೆ ಇರಲು ಜಗ್ಗೇಶ್ ಕಿವಿ ಮಾತು ಹೇಳಿದ್ದಾರೆ. ಫಲಿತಾಂಶಕ್ಕಿಂತ ನಮ್ಮ ಮಕ್ಕಳೆ ನಮ್ಮ ಆಸ್ತಿ ಎಂದು ಹೇಳಿ ಪೋಷಕರಿಗೆ ಹಾಗೂ ಮಕ್ಕಳ ನಡುವಿನ ಬಾಂದವ್ಯವನ್ನು ತಿಳಿಸಿದ್ದಾರೆ.


Click it and Unblock the Notifications











