For Quick Alerts
  ALLOW NOTIFICATIONS  
  For Daily Alerts

  'ಡಿ ಬಾಸ್ ಜೊತೆ ಕೈ ಜೋಡಿಸಿ' ಎಂದ ಅಭಿಮಾನಿಗೆ ಜಗ್ಗೇಶ್ ಹೇಳಿದ್ದೇನು?

  By ಫಿಲ್ಮಿಬೀಟ್ ಡೆಸ್ಕ್
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿವಾದ ಸದ್ಯ ತಣ್ಣಗಾಗಿದೆ. ಮೈಸೂರಿನ ದಿ ಪ್ರಿನ್ಸ್ ಸಂದೇಶ್ ಹೋಟೆಲ್ ನಲ್ಲಿ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದ ಬಳಿಕ ಈ ಪ್ರಕರಣ ಸಾಕಷ್ಟು ಟ್ವಿಸ್ಟ್ ಮತ್ತು ಟರ್ನ್ ಗಳನ್ನು ಪಡೆದು ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು.

  ದರ್ಶನ್ ಗೆ ಸಪೋರ್ಟ್ ಮಾಡಿ ಎಂದ ಅಭಿಮಾನಿಗೆ ಜಗ್ಗೇಶ್ ಕೊಟ್ಟ ಉತ್ತರ ಇದು

  ಬಳಿಕ ನಿರ್ದೇಶಕ ಇಂದ್ರಜಿತ್ ಲಂಕೇಶ್, ದರ್ಶನ್ ಬೆಂಬಲಿಗರು ತನ್ನ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ, ಅಶ್ಲೀಲ ಪದಗಳನ್ನು ಬಳಸಿ ಸಂದೇಶ ಕಳುಹಿಸುತ್ತಿದ್ದಾರೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ಸಹ ದಾಖಲಿಸಿದರು. ಈ ಪ್ರಕರಣದಲ್ಲಿ ದರ್ಶನ್ ಪರ ಅನೇಕ ಕಲಾವಿದರು, ಸ್ನೇಹಿತರು ಜೊತೆ ನಿಂತಿದ್ದಾರೆ.

  ಏನೆ ಆದರೂ ದರ್ಶನ್ ಪರ ನಾವಿದ್ದೀವಿ, ಯಾರಿಂದನೂ ಏನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅನೇಕ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಹೇಳಿದ್ದಾರೆ. ಈ ಬಗ್ಗೆ ನವರಸ ನಾಯಕ ಜಗ್ಗೇಶ್ ಕೂಡ ಪ್ರತಿಕ್ರಿಯೆ ನೀಡಿದ್ದರು. ದರ್ಶನ್ ವಿವಾದದಲ್ಲಿ ಜಗ್ಗೇಶ್ ಹೆಸರು ಕೇಳಿಬಂದಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದೀಗ ಮತ್ತೆ ಜಗ್ಗೇಶ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

   ಜಗ್ಗೇಶ್ ಅಭಿಮಾನಿಯ ಮನವಿ

  ಜಗ್ಗೇಶ್ ಅಭಿಮಾನಿಯ ಮನವಿ

  ಇದೀಗ ದರ್ಶನ್ ಬಗ್ಗೆ ನವರಸನಾಯಕ ಜಗ್ಗೇಶ್ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಯೊಬ್ಬ ಜಗ್ಗೇಶ್ ಅವರಿಗೆ ದರ್ಶನ್ ಜೊತೆ ಕೈ ಜೋಡಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಳಿಕೊಂಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಇನ್ಸ್ಟಾಗ್ರಾಮ್ ಲೈವ್ ಬಂದಿದ್ದ ಜಗ್ಗೇಶ್ ತನ್ನ ಮುಂದಿನ ಸಿನಿಮಾಗಳ ಬಗ್ಗೆ ಬಹಿರಂಗ ಪಡಿಸಿದರು. ಈ ವೇಳೆ ದರ್ಶನ್ ಅಭಿಮಾನಿ ಮನವಿ ಮಾಡಿದ್ದಾರೆ.

  ದರ್ಶನ್ ಜೊತೆ ಕೈ ಜೋಡಿಸಿ ಎಂದ ಅಭಿಮಾನಿ

  ದರ್ಶನ್ ಜೊತೆ ಕೈ ಜೋಡಿಸಿ ಎಂದ ಅಭಿಮಾನಿ

  ಜಗ್ಗೇಶ್ ವಿಡಿಯೋದ ಕಾಮೆಂಟ್ ವಿಭಾಗದಲ್ಲಿ ದರ್ಶನ್ ಅಭಿಮಾನಿ ಮನವಿ ಮಾಡಿ, "ದಯವಿಟ್ಟು ಡಿ ಬಾಸ್ ಪರ ಹೇಳಿಕೆ ಕೊಡಿ. ನಿಮ್ಮ ನಡುವೆ ಮನಸ್ತಾಪ ಇದ್ದರೂ ಅಭಿಮಾನಿಗಳ ಸಲುವಾಗಿ ಡಿ ಬಾಸ್ ಜೊತೆ ಕೈ ಜೋಡಿಸಿ" ಎಂದು ಜಗ್ಗೇಶ್ ಅವರಲ್ಲಿ ಕೇಳಿಕೊಂಡಿದ್ದಾರೆ.

  ಯಾವುದೇ ಮನಸ್ತಾಪವಿಲ್ಲ ಎಂದ ಜಗ್ಗೇಶ್

  ಯಾವುದೇ ಮನಸ್ತಾಪವಿಲ್ಲ ಎಂದ ಜಗ್ಗೇಶ್

  ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್,"ನನಗೂ ದರ್ಶನ್ ಗೆ ಯಾವ ಮನಸ್ತಾಪವಿಲ್ಲ. ಆತ ನನ್ನ ಕಲಾಬಂಧು" ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಮತ್ತು ಜಗ್ಗೇಶ್ ನಡುವೆ ಉತ್ತಮ ಸ್ನೇಹ ಬಾಂಧವ್ಯವಿತ್ತು. ಆದರೆ ಕಳೆದ ಕೆಲವು ತಿಂಗಳ ಹಿಂದೆ ಜಗ್ಗೇಶ್, ದರ್ಶನ್ ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಆಡಿಯೋ ವೈರಲ್ ಆದ ಬಳಿಕ ಇಬ್ಬರ ನಡುವಿನ ವೈಮನಸ್ಸಿಗೆ ಕಾರಣವಾಗಿತ್ತು.

  ಜಗ್ಗೇಶ್ ಸುತ್ತ ಮುತ್ತಿಗೆ ಹಾಕಿದ್ದ ದರ್ಶನ್ ಅಭಿಮಾನಿಗಳು

  ಜಗ್ಗೇಶ್ ಸುತ್ತ ಮುತ್ತಿಗೆ ಹಾಕಿದ್ದ ದರ್ಶನ್ ಅಭಿಮಾನಿಗಳು

  ಇದೇ ವಿಚಾರವಾಗಿ ದರ್ಶನ್ ಅಭಿಮಾನಿಗಳು ಮತ್ತು ಜಗ್ಗೇಶ್ ನಡುವೆ ವೈಮನಸ್ಸು ಮೂಡಿತ್ತು. ದರ್ಶನ್ ಅಭಿಮಾನಿಗಳು ಜಗ್ಗೇಶ್ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಮುತ್ತಿಗೆ ಹಾಕಿ ಕ್ಷಮೆ ಕೇಳಿ ಎಂದು ಧಮ್ಕಿ ಹಾಕಿದ್ದರು. ಬಳಿಕ ಸ್ವತಃ ದರ್ಶನ್ ಅವರೇ ಜಗ್ಗೇಶ್ ಅವರಲ್ಲಿ ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು. ಇದೀಗ ಜಗ್ಗೇಶ್, ದರ್ಶನ್ ಬಗ್ಗೆ ಪ್ರತಿಕ್ರಿಯೆ ನೀಡಿ ಯಾವುದೇ ಮನಸ್ತಾಪವಿಲ್ಲ ಎಂದು ಹೇಳಿದ್ದಾರೆ.

  ಮುಂದಿನ ಸಿನಿಮಾಗಳ ಬಗ್ಗೆ ಜಗ್ಗೇಶ್ ಹೇಳಿದ್ದೇನು?

  ಮುಂದಿನ ಸಿನಿಮಾಗಳ ಬಗ್ಗೆ ಜಗ್ಗೇಶ್ ಹೇಳಿದ್ದೇನು?

  "ಯಾವುದೋ ಯೋಚನೆ ಮಾಡ್ತಾ ಇದ್ದೆ, ಈ ವರ್ಷ ಬೆಸ್ಟ್ 4 ಸ್ಕ್ರಿಪ್ಟ್ ಕೇಳಿದ್ದೀನಿ, 2 ಓಕೆ ಮಾಡಿದ್ದೀನಿ, ಇನ್ನು ಎರಡು ಆನ್ ದಿ ವೇ, ನಿರ್ಧಾರ ಮಾಡುತ್ತಿದ್ದೇನೆ. ಖುಷಿಯಾಗಿರಿ, ನಗುತ್ತಿರಿ" ಎಂದು ಜಗ್ಗೇಶ್ ವಿಡಿಯೋ ಮೂಲಕ ತಮ್ಮ ಮುಂದಿನ ಸಿನಿಮಾದ ಮಾಹಿತಿ ಹಂಚಿಕೊಂಡಿದ್ದಾರೆ.

  English summary
  Actor Jaggesh reaction to fan request about stand with darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X