ಮೋಹಕ ತಾರೆ ರಮ್ಯಾ ಮದುವೆ ಸುದ್ದಿ ಕೇಳಿ ನಟ ಜಗ್ಗೇಶ್ ಹೇಳಿದ್ದೇನು?

Recommended Video

ರಮ್ಯಾ ಮದುವೆ ಬಗ್ಗೆ ಬಾಯ್ಬಿಟ್ಟ ಜಗ್ಗೇಶ್..? | FILMIBEAT KANNADA

ಸ್ಯಾಂಡಲ್ ವುಡ್ ನ ಖ್ಯಾತ ನಟಿ ಮೋಹಕ ತಾರೆ ರಮ್ಯಾ ಮದುವೆ ವಿಚಾರ ಈಗ ಮತ್ತೆ ಸದ್ದು ಮಾಡುತ್ತಿದೆ. ಕಳೆದ ಕೆಲವು ದಿನಗಳಿಂದ ರಮ್ಯಾ ಮದುವೆ ಆಗ್ತಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಸಕ್ಸಸ್ ಫುಲ್ ನಟಿಯಾಗಿ ಚಂದನವನದಲ್ಲಿ ದೀರ್ಘಕಾಲ ಆಳ್ವಿಕೆ ಮಾಡಿದ್ದ ರಮ್ಯಾ, ನಂತರ ರಾಜಕೀಯ ಪ್ರವೇಶಿಸಿದ್ದರು. ಬಣ್ಣದ ಲೋಕದಿಂದ ದೂರ ಸರಿದ ನಂತರ ರಮ್ಯಾ ಸಿನಿಮಾರಂಗದ ಕಡೆ ಮುಖ ಮಾಡಲಿಲ್ಲ. ಆದ್ರೀಗ ರಾಜಕೀಯದಲ್ಲೂ ಸಕ್ರೀಯರಾಗಿಲ್ಲ. ಹಾಗಾಗಿ ರಮ್ಯಾ ಮದುವೆ ಆಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ವಿಚಾರ ಕೇಳಿ ನಟ ಜಗ್ಗೇಶ್ ಹೀಗೆ ಹೇಳಿದ್ದಾರೆ.

ರಮ್ಯಾ ಮದುವೆಗೆ ಶುಭ ಕೋರಿದ ಜಗ್ಗೇಶ್

ರಮ್ಯಾ ಮದುವೆಗೆ ಶುಭ ಕೋರಿದ ಜಗ್ಗೇಶ್

ನಟಿ ರಮ್ಯಾ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ನೋಡಿ ಜಗ್ಗೇಶ್ "ದೀರ್ಘಸುಂಮಗಲಿಯಾಗಿ ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ. ದೇವರು ಒಳ್ಳೆದು ಮಾಡಲಿ" ಎಂದು ಶುಭಹಾರೈಸಿದ್ದಾರೆ. ರಮ್ಯಾ ಮತ್ತು ಜಗ್ಗೇಶ್ ನಡುವಿನ ಕಿತ್ತಾಟ ಇವತ್ತು ನಿನ್ನೆಯದಲ್ಲ. ನೀರ್ ದೋಸೆ ಸಿನಿಮಾ ಸಮಯದಿಂದನು ಜಗ್ಗೇಶ್ ಮತ್ತು ರಮ್ಯಾ ನಡುವೆ ವಾರ್ ನಡೆಯುತ್ತಲೆ ಇದೆ.

ಮಾಜಿ ಗೆಳೆಯ ರಾಫೆಲ್ ಜೊತೆ ಮದುವೆ?

ಮಾಜಿ ಗೆಳೆಯ ರಾಫೆಲ್ ಜೊತೆ ಮದುವೆ?

ಪೋರ್ಚುಗಲ್ ದೇಶದ ಉದ್ಯಮಿ ರಾಫೆಲ್ ನನ್ನು ಪ್ರೀತಿಸುತ್ತಿದ್ದರು ರಮ್ಯಾ. ಆದ್ರೆ ಆ ನಂತರ ರಾಫೆಲ್ ನಿಂದ ದೂರ ಆಗಿ ರಾಜಕೀಯದಲ್ಲಿ ಬ್ಯುಸಿಯಾಗಿದ್ದರು. ಈಗ ಮತ್ತೆ ಅದೇ ರಾಫೆಲ್ ಜೊತೆ ರಮ್ಯಾ ಹಸೆಮಣೆ ಏರುತ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಈಗಾಗಲೆ ಮದುವೆಗೆ ಎಲ್ಲಾ ತಯಾರಿಗಳು ನಡೆಯುತ್ತಿವೆಯಂತೆ.

ದುಬೈನಲ್ಲಿ ಮದುವೆ

ದುಬೈನಲ್ಲಿ ಮದುವೆ

ರಮ್ಯಾ ಮತ್ತು ರಾಫೆಲ್ ಇಬ್ಬರ ಮದುವೆ ದೂರದ ದುಬೈನಲ್ಲಿ ನಡೆಯಲಿದೆಯಂತೆ. ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿದ್ದ ರಮ್ಯಾ ಸಾಮಾಜಿಕ ಜಾಲತಾಣದಿಂದನೂ ದೂರ ಸರಿದಿದ್ದಾರೆ. ಆದ್ರೀಗ ರಮ್ಯಾ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ ಎನ್ನುವುದು ಅವರ ಆಪ್ತ ವಲಯದವರ ಬಳಿಯು ಉತ್ತರ ಇಲ್ಲ. ಆದ್ರೆ ಮದುವೆ ವಿಚಾರ ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

'ನಾಗರಹಾವು' ಕೊನೆಯ ಸಿನಿಮಾ

'ನಾಗರಹಾವು' ಕೊನೆಯ ಸಿನಿಮಾ

2016ರಲ್ಲಿ ತೆರೆಕಂಡ ನಾಗರಹಾವು ರಮ್ಯಾ ಅಭಿನಯದ ಕೊನೆಯ ಸಿನಿಮಾ. ಆ ನಂತರ ರಮ್ಯಾ ಯಾವ ಸಿನಿಮಾದಲ್ಲು ಕಾಣಿಸಿಕೊಂಡಿಲ್ಲ. ಬಣ್ಣ ಹಚ್ಚುವುದಿರಲಿ ಸಿನಿಮಾ ರಂಗದಿಂದನೆ ಅಂತರ ಕಾಯ್ದುಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಅಭಿ ಸಿನಿಮಾದ ಮೂಲಕ ರಮ್ಯಾ ಸ್ಯಾಂಡಲ್ ವುಡ್ ಪ್ರವೇಶಿಸಿದ್ದರು. ರಮ್ಯಾ ವಿರುದ್ಧ ಎಷ್ಟೆ ಮಾತುಗಳು ಕೇಳಿ ಬಂದರು ಅವರು ಮತ್ತೆ ಬಣ್ಣಹಚ್ಚಲಿ ಎನ್ನುವುದೆ ಅಭಿಮಾನಿಗಳ ದೊಡ್ಡ ಆಸೆ.

More from Filmibeat

English summary
Kannada actor Jaggesh reaction to hear the news of actress and politician Ramya marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X