For Quick Alerts
  ALLOW NOTIFICATIONS  
  For Daily Alerts

  'ರಮ್ಯಾರನ್ನು ಬಹಳ ಇಷ್ಟಪಡುತ್ತೇನೆ, ಈಕೆ ಮತ್ತೆ ನಟಿಸಬೇಕು' ಎಂದ ಸ್ಯಾಂಡಲ್ ವುಡ್ ಸ್ಟಾರ್ ನಟ

  |

  ಸ್ಯಾಂಡಲ್ ವುಡ್ ಕ್ವೀನ್ ಎಂದೇ ಖ್ಯಾತಿ ಗಳಿಸಿದ್ದ ನಟಿ ರಮ್ಯಾ ಮತ್ತೆ ನಟಿಸಬೇಕು, ತೆರೆ ಮೇಲೆ ಮಿಂಚಬೇಕು ಎನ್ನುವುದು ಬಹುತೇಕರ ಆಸೆ. ರಮ್ಯಾರನ್ನು ಸಿನಿಮಾದಲ್ಲಿ ನೋಡಲು ಅನೇಕರು ಕಾತರರಾಗಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸ್ಟಾರ್ ನಟರು ಸಹ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರಲಿ ಎಂದು ಬಯಸುತ್ತಿದ್ದಾರೆ.

  ಈಗ ಸಾಲಿಗೆ ನಟ ಜಗ್ಗೇಶ್ ಕೂಡ ಸೇರಿದ್ದಾರೆ. ಹೌದು, ಇತ್ತೀಚಿಗೆ ರಮ್ಯಾ ಬಗ್ಗೆ ಮಾತನಾಡಿರುವ ಜಗ್ಗೇಶ್ 'ಈಕೆ ನನಗೆ ತುಂಬ ಇಷ್ಟವಾದ ನಟಿ, ಮತ್ತೆ ಚಿತ್ರರಂಗಕ್ಕೆ ಬರಲಿ' ಎಂದು ಹೇಳಿದ್ದಾರೆ. ಜಗ್ಗೇಶ್ ದಿಢೀರನೆ ರಮ್ಯಾ ಬಗ್ಗೆ ಮಾತನಾಡಿದ್ದೇಕೆ?ಮುಂದೆ ಓದಿ...

  ರಮ್ಯಾ ವಿರುದ್ಧ ವಾಗ್ದಾಳಿ ನಡೆಸಿದ್ದ ಜಗ್ಗೇಶ್

  ರಮ್ಯಾ ವಿರುದ್ಧ ವಾಗ್ದಾಳಿ ನಡೆಸಿದ್ದ ಜಗ್ಗೇಶ್

  ಕೆಲವು ಸಮಯದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಮತ್ತು ಜಗ್ಗೇಶ್ ನಡುವೆ ದೊಡ್ಡ ವಾರ್ ನಡೆದಿತ್ತು. ಇತ್ತೀಚಿಗಷ್ಟೆ ರಮ್ಯಾ ನರೇಂದ್ರ ಮೋದಿಯನ್ನು ಟೀಕಿಸಿದ್ದಕ್ಕೆ, ಜಗ್ಗೇಶ್ ಟ್ವಿಟ್ಟರ್ ನಲ್ಲಿ ರಮ್ಯಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೀಗ ರಮ್ಯಾ ಬಗ್ಗೆ ಹೊಗಳಿ ದಿಢೀರ್ ಪೋಸ್ಟ್ ಮಾಡಿರುವುದು ಅಚ್ಚರಿಯ ಜೊತೆಗೆ ರಮ್ಯಾ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

  ಕೋಟ್ಯಧಿಪತಿಯಲ್ಲಿ ಭಾಗಿಯಾಗಿದ್ದ ರಮ್ಯಾ

  ಕೋಟ್ಯಧಿಪತಿಯಲ್ಲಿ ಭಾಗಿಯಾಗಿದ್ದ ರಮ್ಯಾ

  ಜಗ್ಗೇಶ್ ಹೀಗೆ ಹೇಳಲು ಕಾರಣ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಕನ್ನಡ ಕೋಟ್ಯಧಿಪತಿ ಕಾರ್ಯಕ್ರಮ. ಈ ಹಿಂದೆ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ರಮ್ಯಾ ಭಾಗಿಯಾಗಿದ್ದರು. ಆಗ ಪುನೀತ್ ರಾಜ್ ಕುಮಾರ್ ಜಗ್ಗೇಶ್ ಅವರ ಮಿಮಿಕ್ರಿ ಮಾಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

  ರಮ್ಯಾ ಬಗ್ಗೆ ಜಗ್ಗೇಶ್ ಹೇಳಿದ್ದೇನು?

  ವಿಡಿಯೋಗೆ ಕಮೆಂಟ್ ಮಾಡಿರುವ ಜಗ್ಗೇಶ್ ರಮ್ಯಾ ಮತ್ತೆ ಚಿತ್ರರಗಂಕ್ಕೆ ಬರಲಿ ಎಂದು ಹೇಳಿದ್ದಾರೆ. ತನ್ನ ಇನ್ಸ್ಟಾಗ್ರಾಮ್ ಪೇಜ್ ಈ ವಿಡಿಯೋವನ್ನು ಶೇರ್ ಮಾಡಿ "ಲಾಬಂಧು ಪುನೀತ್ ರಾಜ್ ಕುಮಾರ್ ನನ್ನ imitate ಮಾಡಿದ vedio ಖುಷಿ ಕೊಟ್ಟಿತು. ಕೆಲ ವೈಯಕ್ತಿಕ ಸಿದ್ಧಾಂತ ಒಡೆದ ಹಾಲಾಯಿತು ಮನಸ್ಸು. ವೈಯಕ್ತಿಕವಾಗಿ ನಾನು ಈಕೆಯನ್ನು ಬಹಳ ಇಷ್ಟಪಡುವೆ. ಈಕೆ ಒಳ್ಳೆ ನಟಿ. ಮತ್ತೆ ಈಕೆ ನಟಿಸಲಿ ಎಂದು ಹಾರೈಸುವೆ. come back ರಮ್ಯ.God bless..."ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

  ಆದರೆ ರಮ್ಯಾ ಈಗ ಎಲ್ಲಿದ್ದಾರೆ?

  ಆದರೆ ರಮ್ಯಾ ಈಗ ಎಲ್ಲಿದ್ದಾರೆ?

  ಆದರೆ ರಮ್ಯಾ ಈಗ ಎಲ್ಲಿದ್ದಾರೆ? ಏನ್ಮಾಡುತ್ತಿದ್ದಾರೆ? ಎನ್ನುವ ಬಗ್ಗೆ ಯಾರಿಗೂ ಗೊತ್ತಿಲ್ಲ. ಸಿನಿಮಾರಂಗದಿಂದ ದೂರ ಆಗಿ ಅನೇಕ ವರ್ಷಗಳೆ ಆಗಿದೆ. ಆದರೀಗ ರಾಜಕೀಯದಲ್ಲಿಯೂ ಸಕ್ರೀಯರಾಗಿಲ್ಲ. ಮತ್ತೆ ಚಿತ್ರರಂಗಕ್ಕೆ ಬರ್ತಾರಾ ಅಥವಾ ರಾಜಕೀಯದಲ್ಲಿಯೆ ಮುಂದುವರೆಯುತ್ತಾರಾ ಎನ್ನುವ ಬಗ್ಗೆ ರಮ್ಯಾ ಅವರೆ ಸ್ಪಷ್ಟನೆ ನೀಡಬೇಕು.

  English summary
  Kannada Actor Jaggesh said Actress Ramya come back to Film Industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X