twitter
    For Quick Alerts
    ALLOW NOTIFICATIONS  
    For Daily Alerts

    ಸ್ವಲ್ಪ ವ್ಯತ್ಯಾಸವಾದರು ಯಾರು ನಿಮ್ಮ ಸಹಾಯಕ್ಕೆ ಬರಲ್ಲ; ಜಗ್ಗೇಶ್ ಎಚ್ಚರಿಕೆ

    |

    ನವರಸನಾಯಕ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟ. ಸಾಕಷ್ಟು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುವ ಜಗ್ಗೇಶ್ ಕೊರೊನಾ ವಿಚಾರದಲ್ಲಿ ಹರಿದಾಡುತ್ತಿರುವ ಫೇಕ್ ವಿಡಿಯೋಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಇತ್ತೀಚಿಗೆ ಮಾಧ್ಯಮದಲ್ಲಿ ಯುವತಿಯೋರ್ವಳು, ಕೊರೊನಾದಿಂದ ತನ್ನ ತಂದೆಯನ್ನು ಕಳೆದುಕೊಂಡ ನೋವನ್ನು ಹೇಳಿಕೊಂಡಿದ್ದಾರೆ. ಯುವತಿಯ ತಂದೆಯ ಚಿಕಿತ್ಸೆಗೆ ಆಸ್ಪತ್ರೆ ಸಿಗದೆ ಪರದಾಡಿ ಕೊನೆಗೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಯವರೂ ಸರಿಯಾದ ಚಿಕಿತ್ಸೆ ನೀಡದೆ ತಂದೆಯನ್ನು ಕೊಲೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಯಾವ ಚಿಕಿತ್ಸೆ ನೀಡುತ್ತಾರೆ ತಿಳಿಯುತ್ತಿಲ್ಲ, ಪಾರದರ್ಶಕ ವ್ಯವಸ್ಥೆ ಆಗಲಿ; ನಟ ಜಗ್ಗೇಶ್ಯಾವ ಚಿಕಿತ್ಸೆ ನೀಡುತ್ತಾರೆ ತಿಳಿಯುತ್ತಿಲ್ಲ, ಪಾರದರ್ಶಕ ವ್ಯವಸ್ಥೆ ಆಗಲಿ; ನಟ ಜಗ್ಗೇಶ್

    ಈ ವಿಡಿಯೋದ ಕೊನೆಯಲ್ಲಿ ವೈದ್ಯರು ರೋಗಿಗಳನ್ನು ಕೊಲೆ ಮಾಡುತ್ತಿರುವ ದೃಶ್ಯಗಳನ್ನು ಎಡಿಟ್ ಮಾಡಿ ಸೇರಿಸಲಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ ಜಾಲತಾಣಕ್ಕೆ ಅದರದೆ ಕಾನೂನಿದೆ, ಒಂದು ವೇಳೆ ಸುಳ್ಳಾದರೆ ಕಾನೂನಿನ ಕುಣಿಕೆ ನಿಮ್ಮ ಬಳಿ ಬರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    Actor Jaggesh says dont share fake video on social media

    'ದಯವಿಟ್ಟು ಹಿರಿಯನಾಗಿ ಸಲಹೆ Factcheck ಮಾಡದೆ ಇಂಥ ವೀಡಿಯೋ share ಮಾಡದಿರಿ. ಒಂದು ವೇಳೆ ಸುಳ್ಳಾಗಿದ್ದರೆ ಕಾನೂನಿನ ಕುಣಿಕೆ ನಿಮ್ಮ ಬಳಿ ಬರುತ್ತದೆ. ಜಾಲತಾಣಕ್ಕೆ ಅದರದೆ ಕಾನೂನಿದೆ. ಸ್ವಲ್ಪ ವ್ಯತ್ಯಾಸವಾದರು ಯಾರು ನಿಮ್ಮ ಸಹಾಯಕ್ಕೆ ಬರರು #covid ಸಮಯದಲ್ಲಿ #caseಬಿದ್ದರೆ ಬಹಳ ಕಷ್ಟಪಡಬೇಕಾಗುತ್ತೆ. ನಿಮ್ಮ ಒಳಿತಿಗೆ ನನ್ನ ಸಲಹೆ ಸಹೋದರ' ಎಂದು ಹೇಳಿದ್ದಾರೆ.

    Recommended Video

    ಮನುಷ್ಯರ ಮೇಲೆ ನಂಬಿಕೆ ಸತ್ತುಹೋಗಿದೆ ಅಂದ್ರು ನಟ ಜಗ್ಗೇಶ್ | Filmibeat Kannada

    ಜಗ್ಗೇಶ್ ಮಾತಿಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ಇನ್ನು ಕೆಲವರು ಉತ್ತಮ ಸಲಹೆ ಎಂದು ಹೊಗಳುತ್ತಿದ್ದಾರೆ. ಜಗ್ಗೇಶ್ ಸದಾ ಒಂದಲ್ಲೊಂದು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕೊರೊನಾ ರೋಗಿ ಅಡ್ಮಿಟ್ ಆದ 2/3ದಿನಕ್ಕೆ ಸಾವು ಸಂಭವಿಸುತ್ತಿದೆ (ಸ್ವಂತ ಅನುಭವ). ಯಾವ ಚಿಕಿತ್ಸೆ ನೀಡುತ್ತಾರೆ ಬಂಧುಗಳಿಗೆ ಹೊರಗೆ ತಿಳಿಯದು. ಸಾವಾಗಿದೆ ಎಂದು ತಿಳಿಸುತ್ತಾರೆ ಮುಖಸಹಿತ ನೋಡಲಾಗದು. ಆಸ್ಪತ್ರೆಯಲ್ಲಿ ಪಾರದರ್ಶಕ ವ್ಯವಸ್ಥೆ ಆಗಲಿ ಎಂದು ಸಿಎಂಗೆ ಮನವಿ ಮಾಡಿ ಟ್ವೀಟ್ ಮಾಡಿದ್ದರು.

    English summary
    Actor Jaggesh says don't share fake video on social media.
    Wednesday, April 28, 2021, 9:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X