'ರಾಘವೇಂದ್ರ ಸ್ಟೋರ್ಸ್' ಹೇಗಿದೆ: ಜಗ್ಗೇಶ್ ತೋರಿಸಿದ್ದಾರೆ ನೋಡಿ!
ಕನ್ನಡ ಸಿನಿಮಾರಂಗದಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಭರವಸೆ ಮೂಡಿಸುತ್ತಿವೆ. ಇನ್ನು ಇತ್ತೀಚೆಗೆ ವಿಭಿನ್ನ ಕಥಾ ಹಂದರವುಳ್ಳ ಚಿತ್ರಗಳು ಚಿತ್ರಗಳು ಜನರ ಮೆಚ್ಚುಗೆ ಪಡೆದು ಕೊಳ್ಳುತ್ತಿವೆ. ಈ ಸಾಲಿಗೆ ಈಗ ಹೊಸ ಸಿನಿಮಾ ಸೇರಿಕೊಳ್ಳುತ್ತಿದೆ. ಅದುವೇ ನಟ ಜಗ್ಗೇಶ್ ಅಭಿನಯದ 'ರಾಘವೇಂದ್ರ ಸ್ಟೋರ್ಸ್'.
'ರಾಘವೇಂದ್ರ ಸ್ಟೋರ್ಸ್' ಚಿತ್ರಕ್ಕೆ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಸಂತೋಷ್ ಆನಂದ್‌ರಾಮ್ ಸಿನಿಮಾ ಅಂದರೆ ಅಲ್ಲಿ ನಿರೀಕ್ಷೆ ಇರುತ್ತವೆ. ಮೊದಲ ಪೋಸ್ಟರ್ ರಿಲೀಸ್ ಆದೇ ಸಾಕಷ್ಟು ನಿರೀಕ್ಷೆ ಹುಟ್ಟಿತ್ತು.
ನಟ ಜಗ್ಗೇಶ್ ಕೂಡ ನಾಯಕ ಪ್ರಧಾನ ಚಿತ್ರಗಳನ್ನು ಬಿಟ್ಟು ಸದಭಿರುಚಿ, ಪ್ರಯೋಗಾತ್ಮಕ ಮತ್ತು ಕಥೆಯೆ ಹೀರೋ ಆಗಿರುವಂತಹ ಚಿತ್ರಗಳನ್ನು ಮಾಡುತ್ತಿದ್ದಾರೆ. ಆ ಸಾಲಿಗೆ ಈ 'ರಾಘವೇಂದ್ರ ಸ್ಟೋರ್ಸ್ ' ಸೇರಿಕೊಂಡಿದೆ.
ಮೈಸೂರಿನಲ್ಲಿ ರಾಘವೇಂದ್ರ ಸ್ಟೋರ್ಸ್ ಚಿತ್ರೀಕರಣ ಆರಂಭ!
'ರಾಘವೇಂದ್ರ ಸ್ಟೋರ್ಸ್' ಚಿತ್ರದ ಶೂಟಿಂಗ್ ಆರಂಭ ಆಗಿದೆ. ಚಿತ್ರದ ಮೊದಲ ಹಂತದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಈ ಚಿತ್ರಕ್ಕಾಗಿ ಮೈಸೂರಿನ ಚೌಟ್ರಿ ಒಂದರಲ್ಲಿ ಸೆಟ್ ಹಾಕಲಾಗಿದೆ. 'ರಾಘವೇಂದ್ರ ಸ್ಟೋರ್ಸ್' ಎನ್ನುವ ಶೀರ್ಷಿಕೆಯನ್ನು ದ್ವಾರಕ್ಕೆ ಅಡ್ಡಲಾಗಿ ಹಾಕಲಾಗಿದೆ. ನಟ ಜಗ್ಗೇಶ್ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಗ್ಗೇಶ್ ಮೊದಲ ದಿನದ ಶೂಟಿಂಗ್ ವೀಡಿಯೋ ಹಂಚಿಕೊಂಡಿದ್ದಾರೆ. ಜಗ್ಗೇಶ್ ಅವರು ಹಂಚಿಕೊಂಡ ಈ ವೀಡಿಯೋ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ರಾಘವೇಂದ್ರ ಸ್ಟೋರ್ಸ್ ಬಗ್ಗೆ ಕುತೂಹಲ ಮೂಡಿಸಿದ ಜಗ್ಗೇಶ್!
ರಾಘವೇಂದ್ರ ಸ್ಟೋರ್ಸ್ ದ್ವಾರದ ಬಳಿ ನಟ ಜಗ್ಗೇಶ್ ಪಂಚೆಯುಟ್ಟು, ಮೇಕಪ್ ಹಾಕಿಕೊಂಡು ನಿದ್ದೆಗಣ್ಣಿನಲ್ಲಿ ಕೂತಿದ್ದಾರೆ. ಮುಂಜಾನೆ ಶೂಟಿಂಗ್‌ನಲ್ಲಿ ಜಗ್ಗೇಶ್ ಅವರು ಭಾಗವಹಿಸಿದ ಸಂದರ್ಭ ಇದು. ಈ ಸಿನಿಮಾ ಈ ರಾಘವೇಂದ್ರ ಸ್ಟೋರ್ಸ್ ಸುತ್ತಲು ನಡೆಯುತ್ತದೆ ಎನ್ನುವುದು ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಹಾಗಾಗಿ ಈ ಸ್ಟೋರ್ ಒಳಗೆ ಏನೆಲ್ಲಾ ಇರುತ್ತದೆ ಎನ್ನುವ ಕುತೂಹಲ ಮೂಡಿದೆ. ಪೋಸ್ಟ್ ಹಂಚಿಕೊಂಡ ನಟ ಜಗ್ಗೇಶ್ ಅವರು "ರಾಘವೇಂದ್ರ ಸ್ಟೋರ್ಸ್ ಚಿತ್ರೀಕರಣದಲ್ಲಿ, ಶುಭದಿನ" ಎಂದು ಬರೆದುಕೊಂಡಿದ್ದಾರೆ.

ಸಂತೋಷ್ ಆನಂದ್ ರಾಮ್- ಜಗ್ಗೇಶ್ ಕಾಂಬಿನೇಷನ್!
ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಂತೋಷ್ ಆನಂದ್ ರಾಮ್ ಅವರ ಜರ್ನಿಯಲ್ಲಿ ಇದು ವಿಭಿನ್ನ ಸಿನಿಮಾ. ಸಂತೋಷ್ ಆನಂದ್ ರಾಮ್ ಅವರು ನಿರ್ದೇಶನ ಮಾಡಿರುವ 'mr & mrs ರಾಮಾಚಾರಿ', 'ರಾಜಕುಮಾರ', 'ಯುವರತ್ನ' ಸಿನಿಮಾಗಳನ್ನು ನೋಡಿದರೆ ಅವು ಮಾಸ್ ಕಥೆಯ ಜೊತೆಗೆ ಸ್ಟಾರ್ ಕಾಸ್ಟ್ ಪ್ರಧಾನವಾಗಿರುವ ಸಿನಿಮಾ. ಆದರೆ ರಾಘವೇಂದ್ರ ಸ್ಟೋರ್ಸ್ ಕೊಂಚ ವಿಭಿನ್ನ ಎನಿಸುತ್ತದೆ. ಈ ಚಿತ್ರದಲ್ಲಿ ನಟ ಜಗ್ಗೇಶ್ ನಾಯಕ ನಟ. ಆದರೆ ಇಲ್ಲಿ ಸ್ಟಾರ್‌ಗಿರಿಗಿಂತಲೂ ಹೆಚ್ಚಾಗಿ ಕಥೆ ಪ್ರಾಮುಖ್ಯತೆ ಪಡೆದಿದೆ ಎನ್ನುವುದು ಗೊತ್ತಾಗುತ್ತದೆ. ಇಂಥಹ ಚಿತ್ರಗಳಲ್ಲಿ ಪಾತ್ರಗಳ ಮೂಲಕ ಜಗ್ಗೇಶ್ ಅಂತಹ ಹಿರಿಯ ನಟರು ತಿಳಿಸುವ ವಿಚಾರಗಳು ಮುಖ್ಯ ಆಗುತ್ತವೆ.

'ರಾಘವೇಂದ್ರ ಸ್ಟೋರ್ಸ್'ಗೂ ಜಗ್ಗೇಶ್‌ಗೂ ಅವಿನಾಭಾವ ಸಂಬಂಧ!
ಈ ಚಿತ್ರದಲ್ಲಿ ನಟ ಜಗ್ಗೇಶ್ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಮಾತ್ರ ಚಿತ್ರ ತಂಡ ರಿಲೀಸ್ ಮಾಡಿದೆ. ಆದರೆ ಈ 'ರಾಘವೇಂದ್ರ ಸ್ಟೋರ್ಸ್' ಮತ್ತು ಜಗ್ಗೇಶ್ ಅವರಿಗೆ ಒಂದು ನಂಟು ಇದೆ. ಎಷ್ಟೊ ಮಂದಿಗೆ ಗೊತ್ತಿಲ್ಲ, ಬೆಂಗಳೂರಿನ ಮಲ್ಲೇಶ್ವರಂನಲ್ಲಿ 'ರಾಘವೇಂದ್ರ ಸ್ಟೋರ್ಸ್' ಎನ್ನುವ ಹೋಟೆಲ್ ಇದೆ. ಹಲವು ವರ್ಷಗಳ ಇತಿಹಾಸ ಈ ಹೋಟೆಲ್‌ಗೆ ಇದೆ. ಈ ರಾಘವೇಂದ್ರ ಸ್ಟೋರ್ಸ್ ಜಗ್ಗೇಶ್ ಅವರ ಮನೆಯ ಹಿಂಬಾಗದಲ್ಲೇ ಇರೋದು. ನಟ ಜಗ್ಗೇಶ್ ಅವರಿಗೆ ಈ ರಾಘವೇಂದ್ರ ಸ್ಟೋರ್ಸ್‌ನ ಇಡ್ಲಿ, ವಡೆ ಅಂದರೆ ಬಲು ಇಷ್ಟ. ಬಹುಶಃ ಇದೇ ಹೋಟೆಲ್ ಹೆಸರನ್ನು ಚಿತ್ರಕ್ಕೆ ಇಟ್ಟಿರಬಹುದು. ಆದರೆ ಚಿತ್ರದ ಬಗ್ಗೆ ಈ ಟೈಟಲ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ.


Click it and Unblock the Notifications











