ನಟನ ಮಕ್ಕಳಾದರೂ ಸಾಮನ್ಯರಂತೆ ಬದುಕುತ್ತಿದ್ದಾರೆ; ಮಕ್ಕಳ ಬಗ್ಗೆ ಜಗ್ಗೇಶ್ ಹೆಮ್ಮೆಯ ಮಾತು

ನವರಸನಾಯಕ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟ ಎನ್ನುವುದು ಗೊತ್ತಿರುವ ವಿಚಾರ. ಜಗ್ಗೇಶ್ ಸದಾ ಒಂದಲ್ಲೊಂದು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಜಗ್ಗೇಶ್ ಮಾತುಗಳು ವಿವಾದಕ್ಕೆ ಸಿಲುಕಿ ರಂಪಾಟ ಆದ ಉದಾಹರಣೆಯೂ ಸಾಕಷ್ಟಿದೆ ಇದೆ.

ಆಧ್ಯಾತ್ಮ, ಪ್ರಚಲಿತ ಬೆಳವಣಿಗಳ ಬಗ್ಗೆ, ಹಿಂದಿನ ಕಾಲದ ಚಿತ್ರರಂಗದ ಬಗ್ಗೆ ಹೀಗೆ ಅನೇಕ ವಿಚಾರಗಳ ಬಗ್ಗೆ ಜಗ್ಗೇಶ್ ಟ್ವಿಟ್ಟರ್ ನಲ್ಲ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಈ ನಡುವೆ ಆಗಾಗ ಕುಟುಂಬದ ಬಗ್ಗೆಯೂ ಇಂಟರೆಸ್ಟಿಂಗ್ ಮಾಹಿತಿ ಬಹಿರಂಗ ಪಡಿಸುತ್ತಾರೆ. ಇದೀಗ ನವರಸನಾಯಕ ತನ್ನ ಇಬ್ಬರು ಮಕ್ಕಳ ಬಗ್ಗೆ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. ಮುಂದೆ ಓದಿ..

ಮಕ್ಕಳು ಸಾಮಾನ್ಯರಂತೆ ಶ್ರದ್ಧೆಯಿಂದ ಬದುಕುತ್ತಿದ್ದಾರೆ

ಮಕ್ಕಳು ಸಾಮಾನ್ಯರಂತೆ ಶ್ರದ್ಧೆಯಿಂದ ಬದುಕುತ್ತಿದ್ದಾರೆ

ಸ್ಟಾರ್ ನಟನ ಮಕ್ಕಳಾಗಿದ್ದರೂ ಸಾಮಾನ್ಯರಂತೆ ಶ್ರದ್ಧೆಯಿಂದ ಬಾಳುತ್ತಿದ್ದಾರೆ ಎಂದು ಮಕ್ಕಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಜಗ್ಗೇಶ್ ಮಕ್ಕಳಾದ ಗುರುರಾಜ್ ಮತ್ತು ಯತಿರಾಜ್ ಇಬ್ಬರು ಚಿತ್ರರಂಗದಲ್ಲಿ ಅಷ್ಟು ಸಕ್ರಿಯರಾಗಿರದಿದ್ದರೂ ತಮ್ಮದೆ ಸ್ವಂತ ಬ್ಯುಸಿನೆಸ್ ನಡೆಸುವ ಮೂಲಕ ಜೀವನ ನಡೆಸುತ್ತಿದ್ದಾರೆ.

ರಾಮಲಕ್ಷ್ಮಣರಂತೆ ಇದ್ದಾರೆ

ರಾಮಲಕ್ಷ್ಮಣರಂತೆ ಇದ್ದಾರೆ

ಮಕ್ಕಳ ಯಶಸ್ಸು ಕಂಡು ಜಗ್ಗೇಶ್ ಸಂತೋಷ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಇಬ್ಬರು ಮಕ್ಕಳು ಖರೀದಿ ಮಾಡಿರುವ ಫ್ಲಾಟ್‌ನ ವಿಡಿಯೋವನ್ನು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇಬ್ಬರು ಮಕ್ಕಳು ಎಲ್ಲಾ ಬ್ಯುಸಿನೆಸ್‌ಗಳನ್ನು ಒಗ್ಗಟ್ಟಿನಿಂದ ಮಾಡಿ ರಾಮಲಕ್ಷ್ಮಣರಂತೆ ಬದುಕುತ್ತಿದ್ದಾರೆ ಎಂದು ಮಕ್ಕಳನ್ನು ಹಾಡಿ ಹೊಗಳಿದ್ದಾರೆ.

ಫ್ಲಾಟ್ ಖರೀದಿ ಬಗ್ಗೆ ಜಗ್ಗೇಶ್ ಮಾಹಿತಿ

'ನನ್ನ 2 ಮಕ್ಕಳ ಗುರುರಾಜ, ಯತಿರಾಜ ಹೊಸ flatಗಳು ಪೂರ್ಣವಾಗಿಸಿ ಅಪ್ಪನಿಗೆ ತೋರಿಸಿ ಸಂಭ್ರಮಿಸಿದರು. ತಂದೆಯಾಗಿ ಮಕ್ಕಳ ಯಶಸ್ಸು ಕಂಡು ಸಂತೋಷವಾಯಿತು. ಎಲ್ಲಾ business ಒಟ್ಟಿಗೆ ಒಗ್ಗಟ್ಟಿನಿಂದ ರಾಮಲಕ್ಷ್ಮರಂತೆ ಬಾಳುತ್ತಿರುವ ಸಹೋದರು. ನಟನ ಮಕ್ಕಳಾದರು ಸಾಮಾನ್ಯರಂತೆ ತಮ್ಮ ಕಾರ್ಯ ಶ್ರದ್ಧೆಯಿಂದ ಮಾಡಿ ಬದುಕುತ್ತಿದ್ದಾರೆ. ರಾಯರದಯೆ.' ಎಂದು ಬರೆದುಕೊಂಡಿದ್ದಾರೆ.

Recommended Video

Yuvarathnaa Haunted By Piracy ಟೆಲಿಗ್ರಾಮ್ ಗಳಲ್ಲಿ ಹರಿದಾಡುತ್ತಿದೆ ಯುವರತ್ನ ಸಿನಿಮಾ ಲಿಂಕ್ | Filmibeat
ತೋತಾಪುರಿ ಚಿತ್ರೀಕರಣ ಮುಗಿಸಿರುವ ಜಗ್ಗೇಶ್

ತೋತಾಪುರಿ ಚಿತ್ರೀಕರಣ ಮುಗಿಸಿರುವ ಜಗ್ಗೇಶ್

ಜಗ್ಗೇಶ್ ಸದ್ಯ ತೋತಾಪುರಿ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇತ್ತೀಚಿಗಷ್ಟೆ ಚಿತ್ರೀಕರಣ ಸಂಪೂರ್ಣವಾಗಿ ಮುಗಿಸಿದ ಬಗ್ಗೆ ಫೋಟೋಗಳನ್ನು ಹಂಚಿಕೊಂಡಿದ್ದರು. ತೋತಾಪುರಿ ಎರಡು ಭಾಗದಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಜಗ್ಗೇಶ್ ರಂಗನಾಯಕ ಸಿನಿಮಾ ಪ್ರಾರಂಭಿಸಬೇಕಿದೆ. ಯಾವಾಗ ಪ್ರಾರಂಭಿಸಲಿದ್ದಾರೆ ಎನ್ನುವುದು ಸದ್ಯದ ಕುತೂಹಲ. ಸಿನಿಮಾಗಳ ಜೊತೆಗೆ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ.

More from Filmibeat

English summary
Actor Jaggesh shares a Flat video of his children's purchased. Watch it here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X