For Quick Alerts
  ALLOW NOTIFICATIONS  
  For Daily Alerts

  ವಾಮ ಮಾರ್ಗದಲ್ಲಿ ಗೆದ್ದವರೇ ನಶೆಯ ದಾಸರಾಗಿದ್ದಾರೆ, ಅವರನ್ನು ಬೆತ್ತಲೆ ಮಾಡಿ: ನಟ ಜಗ್ಗೇಶ್

  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಯಲ್ಲಿ ಡ್ರಗ್ ಮಾಫಿಯಾದ ನಂಟು ಇದೆ ಎನ್ನುವ ಸುಳಿವು ಸಿಗುತ್ತಿದ್ದಂತೆ, ಇತ್ತ ಸ್ಯಾಂಡಲ್ ವುಡ್ ಗೂ ಡ್ರಗ್ ಮಾಫಿಯಾದ ಜೊತೆ ಸಂಪರ್ಕ ಇರುವುದು ಬಹಿರಂಗವಾಗಿದೆ. ಈ ಸಂಬಂಧ ಇತ್ತೀಚಿಗೆ ಬೆಂಗಳೂರಿನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ ಬಳಿಕ ಸ್ಯಾಂಡಲ್ ವುಡ್ ನ ಕೆಲವು ನಟಿ ನಟಿಯರು ಡ್ರಗ್ ವ್ಯಸನಿಗಳಾಗಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.

  ಡ್ರಗ್ಸ್ ಬಗ್ಗೆ ಕೇಳಿದ್ದಕ್ಕೆ ರಚಿತಾ ರಾಮ್ ಫುಲ್ ಗರಂ | Filmibeat Kannada

  ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಸ್ಯಾಂಡಲ್ ವುಡ್ ಗೂ ಡ್ರಗ್ ನಂಟಿದೆ ಎನ್ನುವುದನ್ನು ಹೇಳಿದ್ದಾರೆ. ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎನ್ನುವುದು ಗೊತ್ತಿದೆ, ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ನೀಡಲು ಸಿದ್ಧರಾಗಿರುವುದಾಗಿ ಹೇಳಿದ್ದಾರೆ. ಇದೀಗ ನಟ ಜಗ್ಗೇಶ್ ಸ್ಯಾಂಡಲ್ ವುಡ್ ನಶೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ವಾಮ ಮಾರ್ಗದಲ್ಲಿ ಗೆದ್ದಿರುತ್ತಾರೆ, ಅವರೇ ನಶೆಯ ದಾಸರಾಗಿರುತ್ತಾರೆ, ತಪ್ಪು ಮಾಡಿದವರನ್ನು ಬೆತ್ತಲೆ ಮಾಡಿ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

  ಸ್ಯಾಂಡಲ್ ವುಡ್ ಗೆ ಡ್ರಗ್ ನಂಟು: ಯುವ ನಟನ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್ಸ್ಯಾಂಡಲ್ ವುಡ್ ಗೆ ಡ್ರಗ್ ನಂಟು: ಯುವ ನಟನ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್

   ಉಪ್ಪು ತಿಂದವ ನೀರು ಕುಡಿಯಬೇಕು

  ಉಪ್ಪು ತಿಂದವ ನೀರು ಕುಡಿಯಬೇಕು

  "ಶ್ರೇಷ್ಠ ಮನು ಜನ್ಮ. ಅದು ನಶ್ವರ ಸತ್ಯ. ಆದರೂ ಆ ನಶ್ವರ ದೇಹ ನಶಿಸುವ ಮುನ್ನ ಸಾರ್ಥಕಪಡಿಸಿ ಬದುಕಬೇಕು. ನಶೆ ಹಾದರದ ಹಿಂದೆ ಬರಿ ಸಿನಿಮಾ ಅಲ್ಲಾ ಸಮಾಜವೇ ಆಕರ್ಷಿತವಾಗುತ್ತಿದೆ. ಯಾರು ಶ್ರಮಪಟ್ಟು ಜೀವನ ಗೆದ್ದಿರುತ್ತಾರೆ ಅವರ ಹೆಜ್ಜೆ ತಪ್ಪುದಾರಿ ತುಳಿಯದು. ಯಾರು ವಾಮ ಮಾರ್ಗದಲ್ಲಿ ಗೆದ್ದಿರುತ್ತಾರೆ ಅವರೇ ನಶೆ ಹಾದರದ ದಾಸರು. ಉಪ್ಪು ತಿಂದವ ನೀರು ಕುಡಿಯುವ" ಎಂದು ಹೇಳಿದ್ದಾರೆ.

   ತಪ್ಪು ಮಾಡಿದವರ ಬೆತ್ತಲೆ ಮಾಡಿ

  ತಪ್ಪು ಮಾಡಿದವರ ಬೆತ್ತಲೆ ಮಾಡಿ

  "ಸರಿಯಾಗಿ ಬಾಳಿ ಬದುಕುವ ನಿರ್ಧಾರ ಮಾಡಿ, ಶ್ರಮಿಸುವವರು ಎಲ್ಲೇ ಇದ್ದರು ಶ್ರೇಷ್ಠವಾಗಿ ಉಳಿಯುತ್ತಾರೆ. ನಾನು ನನ್ನಿಷ್ಟ, ನನ್ನ ಬದುಕು ಎನ್ನುವವರ ಮಠಕ್ಕೆ ಸೇರಿಸಿದರು ನಶೆ ಹಾದರದ ಬಿಸಿ ಹಂಚಿನ ಮೇಲೆ ಸ್ವಲ್ಪ ಕಾಲ ಬದುಕಿ ವಿಕೃತ ಆನಂದ ಅನುಭವಿಸಿ ಸೀದು ಹೋಗುತ್ತಾರೆ. ಏಕ್ ಮಾರ್ ದೋ ತುಕ್ಡಾ. ತಪ್ಪು ಮಾಡಿದವರ ಬೆತ್ತಲೆ ಮಾಡಿ. ಆಗಲಾದರು ಜನಕ್ಕೆ ಅರಿವಾಗಲಿ" ಎಂದು ಟ್ವೀಟ್ ಮಾಡಿದ್ದಾರೆ.

  ಸ್ಯಾಂಡಲ್‌ವುಡ್‌ ಡ್ರಗ್ ನಂಟು ಇದೆ, ರಕ್ಷಣೆ ಕೊಟ್ಟರೆ ವಿವರ ಕೊಡ್ತೀನಿ: ಇಂದ್ರಜಿತ್ ಲಂಕೇಶ್ಸ್ಯಾಂಡಲ್‌ವುಡ್‌ ಡ್ರಗ್ ನಂಟು ಇದೆ, ರಕ್ಷಣೆ ಕೊಟ್ಟರೆ ವಿವರ ಕೊಡ್ತೀನಿ: ಇಂದ್ರಜಿತ್ ಲಂಕೇಶ್

   ಪಾರ್ಟಿಯ ಅನುಭವ ಬಿಚ್ಚಿಟ್ಟ ಜಗ್ಗೇಶ್

  ಪಾರ್ಟಿಯ ಅನುಭವ ಬಿಚ್ಚಿಟ್ಟ ಜಗ್ಗೇಶ್

  "ಬಲವಂತಕ್ಕೆ 2017ರಲ್ಲಿ ಒಬ್ಬ ರಾಜಕಾರಣಿ ಪಾರ್ಟಿಗೆ ಹೋಗಿದ್ದೆ. ಅರ್ಧ ಗಂಟೆಗೆ ಆ ಜಾಗ, ಅಲ್ಲಿದ್ದವರ ಆರ್ಭಟ, ಬಂದು ಸೇರಿದ ಅರ್ಧ ಉಡುಗೆ ಸುಂದರಿಯರು... ಅದನ್ನು ಕಂಡು ನಾನು ನನ್ನ ಆತ್ಮೀಯ ಯುವ ನಟ ಗ... ಹೇಳದೆ ಕೇಳದೆ ಲಿಫ್ಟು ಬಳಸದೆ 12 ಮಹಡಿ ಇಳಿದು ಓಡಿದೆವು. ಅದೇ ಕಡೆ, ಇಂದಿಗೂ ನನಗೆ ಯಾರು ಕರೆ ಮಾಡದಂತೆ ಮೊಬೈಲ್ ವರ್ಜಿಸಿದೆ. ಅಲ್ಲಿದ್ದವರು ಸಮಾಜದ ಎಲ್ಲ ಮುಖಗಳು" ಎಂದಿದ್ದಾರೆ.

   ಯುವ ನಟನ ಸಾವಿನ ಬಗ್ಗೆ ಇಂದ್ರಜಿತ್ ಪ್ರಶ್ನೆ

  ಯುವ ನಟನ ಸಾವಿನ ಬಗ್ಗೆ ಇಂದ್ರಜಿತ್ ಪ್ರಶ್ನೆ

  ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ನಿಧನ ಹೊಂದಿದ ಯುವ ನಟನ ಸಾವಿನ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರಶ್ನೆ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪುತ್ತಾರೆ ಎಂದರೆ ಏನು ಕಾರಣ?, ಆ ನಟನ ಸಾವಿನ ಬಳಿಕ ಮರಣೋತ್ತರ ಪರೀಕ್ಷೆ ಯಾಕೆ ಮಾಡಿಸಿಲ್ಲ? ಪರೀಕ್ಷೆ ಮಾಡಿಸಿದ್ದರೆ ಎಲ್ಲಾ ಬಯಲಾಗುತ್ತಿತ್ತು. ಮರಣೋತ್ತರ ಪರೀಕ್ಷೆ ನಡೆಸದಂತೆ ಪೊಲೀಸರಿಗೆ ರಾಜಕೀಯ ಒತ್ತಡವಿತ್ತು. ಯಾವ ರಾಜಕೀಯ ವ್ಯಕ್ತಿ ಒತ್ತಡ ಹಾಕಿದ್ದಾರೆ ಎನ್ನುವುದು ಗೊತ್ತಿದೆ" ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

  English summary
  Actor Jaggesh Speaks About Drug link In Sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X