ಪುನೀತ ನಮನ: ಅಪ್ಪು ಬಗ್ಗೆ ನಟ ಜಗ್ಗೇಶ್ ಹೃದಯ ಹೇಳುತ್ತಿರುವುದೇನು?

ನಟ ಪುನೀತ್‌ ರಾಜ್‌ಕುಮಾರ್‌ ಅಗಲಿಕೆ ಎಲ್ಲರ ಮನಸ್ಸನ್ನು ಭಾರ ಮಾಡಿದೆ. ಅಪ್ಪು ಬಗ್ಗೆ ಎಷ್ಟು ಮಾತನಾಡಿದರು, ನೆನಪುಗಳನ್ನು ಹಂಚಿಕೊಂಡರು ಸಾಲದು. ಪುನೀತ್‌ ನಮನ ಕಾರ್ಯಕ್ರಮದಲ್ಲಿ ಪುನೀತ್‌ ನೆನೆದು ಪ್ರತಿಯೊಬ್ಬರು ಭಾವುಕರಾಗಿದ್ದಾರೆ.

"ನಾವು ಈ ದಿನ ಬರುತ್ತೆ ಎಂದುಕೊಂಡಿರಲಿಲ್ಲ. ಅದರಲ್ಲೂ ವಿಶೇಷವಾಗಿ ನನಗೆ ಇದು ತಲೆಗೆ ಹೋಗಿಲ್ಲ. ನಾವು ತಿಂಗಳಲ್ಲಿ ಹಲವು ಬಾರಿ ಮಾತನಾಡುತ್ತಿದೆವು. ಆಗಾಗ ಫೋನಿನಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿ ಕೊಳ್ಳುತ್ತಾ ಇದ್ದೇವು".

"ನನಗಾಗಿ ಸಂತೋಷ್‌ ಆನಂದ್ ರಾಮ್ ಸಿನಿಮಾ ಮಾಡಲು ಮುಂದಾದಾಗ, ಅಪ್ಪು ಆ ಕಥೆ ಕೇಳಲು ಇಚ್ಚಿಸಿದ್ದ. ನಮ್ಮನ್ನ ಮನೆಗೆ ಕರೆಸಿ ಚಿತ್ರ ಕಥೆ ಕೇಳಿದ್ದ. ಅವನಿಗೆ ಇದರ ಅವಶ್ಯಕತೆ ಇರಲಿಲ್ಲ. ಆದರೆ ಕತೆ ಕೇಳಿ ಅದರ ಬಗ್ಗೆ ನಮ್ಮೊಂದಿಗೆ ಚರ್ಚೆ ಮಾಡಿದ್ದ". ಎಂದರು ಜಗ್ಗೇಶ್.

ಅಪ್ಪು ನಗುವಿನಲ್ಲಿ ಮಗುವನ್ನು ಕಂಡಿದ್ದ ಜಗ್ಗೇಶ್!

ಅಪ್ಪು ನಗುವಿನಲ್ಲಿ ಮಗುವನ್ನು ಕಂಡಿದ್ದ ಜಗ್ಗೇಶ್!

"ಅಪ್ಪು ಅಗಲಿಕೆಗೆ 5 ದಿನ ಇರುವಾಗ ಪುನೀತ್ ರಾಜ್‌ಕುಮಾರ್ ಮಲ್ಲೇಶ್ವರಂಗೆ ಕಾರ್ಯಕ್ರಮ ಒಂದಕ್ಕೆ ಬಂದಿದ್ದರು, ಆಗ ನಾನು ಅಲ್ಲಿಗೆ ಹೋದೆ. ಅಲ್ಲಿ ಹೊರಟಾಗ ಪಾರ್ಕಿಂಗ್‌ನಿಂದ ಕಾರ್ ತೆಗೆಯುವಾಗ 5 ನಿಮಿಷ ನನಗೆ ಟಾಟಾ ಮಾಡಿಕೊಂಡು ಇದ್ದ. ಆಗ ನಾನು ಅಂದು ಕೊಂಡೆ ಮಗುವಿನಂತಹ ಮನಸ್ಸು. ಅವನು ಚಿಕ್ಕವನು ನಮ್ಮನ್ನು ಕಳಿಸಿ ಅವನು ಕೊಡ ಬೇಕಾಗಿತ್ತು. ಆದರೆ ನಾವು ಅವನನ್ನು ಕಳಿಸಿ ಕೊಡಬೇಕಾಗಿದೆ". ಈಗ ನಮಗೆ ನಾವೇ ಸಮಾಧಾನ ಮಾಡಿಕೊಳ್ಳಬೇಕು. ಎಂದರು ಜಗ್ಗೇಶ್

ಅಪ್ಪು ಬಗ್ಗೆ ಜಗ್ಗೇಶ್ ಹೃದಯ ಹೇಳುತ್ತಿರುವುದು ಏನು!

ಅಪ್ಪು ಬಗ್ಗೆ ಜಗ್ಗೇಶ್ ಹೃದಯ ಹೇಳುತ್ತಿರುವುದು ಏನು!

ಇನ್ನೂ ಅಪ್ಪು ಬಗ್ಗೆ ಮಾತು ಮುಂದುವರೆಸಿದ ಜಗ್ಗೇಶ್ "ಅಪ್ಪು ಹೋದ ಮೇಲೆ ಇದ್ದ ಕೊಂಚ ಆಶಾಭಾವ ಕೂಡ ಕೆಳಗೆ ಹೋಗಿದೆ. ಸಾವು ದೇಹಕ್ಕೆ, ಆತ್ಮಕ್ಕಲ್ಲ. ಪುನೀತ್ ಎಲ್ಲು ಹೋಗಿಲ್ಲ, ಸತ್ತಿಲ್ಲ. ಆತ ಹಾಕಿದಂತಹ ರಾಜ್‌ಕುಮಾರ್ ಪುತ್ರ ಎನ್ನುವಂತಹ ಅಂಗಿ ಕಳಚಿದ್ದಾನೆ. ಅಪ್ಪು ಮತ್ತೇ ಹುಟ್ಟಿ ಬರುತ್ತಾನೆ. 25 ವರ್ಷಗಳ ನಂತರ ಒಬ್ಬ ಬರುತ್ತಾನೆ. ಸೂಪರ್ ಸ್ಟಾರ್ ಆಗುತ್ತಾನೆ. ಪೂರ್ಣಾಯುಶಿ ಆಗಿ ಬರುತ್ತಾನೆ. ಪುನೀತ್ ಮತ್ತೆ ಹುಟ್ಟಿ ಬರುತ್ತಾನೆ. ಇದು ನನ್ನ ಹೃದಯ ಹೇಳುತ್ತಿದೆ".

ಅಪ್ಪು ದೊಡ್ಡ ಸಂದೇಶ ಬಿಟ್ಟು ಹೋಗಿದ್ದಾನೆ!

ಅಪ್ಪು ದೊಡ್ಡ ಸಂದೇಶ ಬಿಟ್ಟು ಹೋಗಿದ್ದಾನೆ!

"ಅಪ್ಪುಗೆ ಶ್ರದ್ಧಾಂಜಲಿ ಹೇಳಲು ಮನಸಿಲ್ಲ. ಆತ ವಾಪಸ್ ಬರುತ್ತಾನೆ. ಆತ ಒಂದು ಸಂದೇಶ ಬಿಟ್ಟಿದ್ದಾನೆ. ಅವನಿ ಇದ್ದಾಗ ನಮಗೆ ಗೊತ್ತಾಗಲಿಲ್ಲ. ಹೋದ ಮೇಲೆ ಗೊತ್ತಾಗಿದೆ. ಅದು ಏನೆಂದರೆ ಇಲ್ಲಿ ಯಾವುದು ಶಾಶ್ವತ ಅಲ್ಲ. ದೇವರ ಕರೆ ಬಂದಾಗ ಎಲ್ಲರೂ ಎಲ್ಲವನ್ನೂ ಬಿಟ್ಟು ಹೋಗ ಬೇಕು. ಈ ಸಂದೇಶ ಬಿಟ್ಟು ಹೋಗಿದ್ದಾನೆ ಅಪ್ಪು. ಎಂದು ಪುನೀತ್ ರಾಜ್‌ಕುಮಾರ್ ಬಗೆಗಿನ ತಮ್ಮ ಮನದಾಳವನ್ನು ನಟ ಜಗ್ಗೇಶ್ ಹಂಚಿಕೊಂಡಿದ್ದಾರೆ.

More from Filmibeat

English summary
Actor Jaggesh Talk About Puneeth Rajkumar On Puneeth Namana Programme
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X