twitter
    For Quick Alerts
    ALLOW NOTIFICATIONS  
    For Daily Alerts

    ಪಂಡರೀಬಾಯಿ ಜನ್ಮದಿನದ ಸವಿನೆನಪು: 'ಕಲಬೆರಕೆ ಚಿನ್ನಗಳ ಮುಂದೆ 24 ಕ್ಯಾರೆಟ್ ಚಿನ್ನ ಮಂಕಾಗಿದೆ' ಎಂದ ಜಗ್ಗೇಶ್

    |

    ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಗೀತಾ ಅಲಿಯಾಸ್ ಪಂಡರೀಬಾಯಿ ಯಾರಿಗೆತಾನೆ ಗೊತ್ತಿಲ್ಲ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಮನೆಮಾತಾದ ನಟಿ ಪಂಡರೀಬಾಯಿ. ಹಿರಿಯ ನಟಿ ಹುಟ್ಟುಹಬ್ಬ ಸಹ ಸೆಪ್ಟಂಬರ್ 18. ಡಾ. ವಿಷ್ಣುವರ್ಧನ್, ಉಪೇಂದ್ರ, ಶ್ರುತಿ ಹುಟ್ಟುಹಬ್ಬದ ಅದ್ದೂರಿತನದ ನಡುವೆ ಪಂಡರೀಬಾಯಿ ಜನ್ಮದಿನದ ನೆನಪು ಬಹುತೇಕರಿಗೆ ಇಲ್ಲ.

    ತಾಯಿಯ ಮಮತೆ, ಪ್ರೀತಿಯ ಧಾರೆ ಹರಿಸುವ ಅಮ್ಮನ ಪತ್ರವನ್ನು ಯಾರು ಮರೆಯಲು ಸಾಧ್ಯವಿಲ್ಲ. ಸ್ಯಾಂಡಲ್ ವುಡ್ ನ 'ಅಮ್ಮ' ಅಂತನೆ ಕರೆಸಿಕೊಳ್ಳುವ ಪಂಡರೀಬಾಯಿ ಅವರನ್ನು ನೆನಪಿಸಿಕೊಂಡಿದ್ದಾರೆ ನಟ ಜಗ್ಗೇಶ್. ಹಿರಿಯ ಕಲಾವಿದರು ಆ ಕಾಲದ 24 ಕ್ಯಾರೆಟ್ ಚಿನ್ನವಿದ್ದಂತೆ. ಅದರ ಬೆಲೆ ಇಂದಿನ ಕಲಬೆರಕೆ ಚಿನ್ನಗಳ ಮುಂದೆ ಮಂಕಾಗಿ ನೆಪಕ್ಕೆ ಕಾಣುತ್ತದೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ..

    ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ನಟ ಜಗ್ಗೇಶ್ ದೂರುಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ನಟ ಜಗ್ಗೇಶ್ ದೂರು

    ನಾಯಕಿಯಾಗಿ, ತಾಯಿಯಾಗಿ ನಟಿಸಿರುವ ಪಂಡರೀಬಾಯಿ

    ನಾಯಕಿಯಾಗಿ, ತಾಯಿಯಾಗಿ ನಟಿಸಿರುವ ಪಂಡರೀಬಾಯಿ

    ದಕ್ಷಿಣ ಭಾರತೀಯ ಸಿನಿಮಾರಂಗದ ಬಹುತೇಕ ಖ್ಯಾತ ನಟರಿಗೆ ನಾಯಕಿಯಾಗಿ, ತಾಯಿಯಾಗಿ ಪಂಡರೀಬಾಯಿ ನಟಿಸಿದ್ದಾರೆ. ರಂಗಭೂಮಿ ಕಲಾವಿದೆಯಾಗಿದ್ದ ಪಂಡರೀಬಾಯಿ ಹರಿಕಥೆ ಹೇಳುವ ಮೂಲಕ ಚಿಕ್ಕ ವಯಸ್ಸಿನಲ್ಲೇ ಎಲ್ಲರ ಮನಗೆದ್ದಿದ್ದರು. 13ನೇ ವಯಸ್ಸಿನಲ್ಲೇ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ ನಟಿ ಬಳಿಕ ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸುವ ಮೂಲಕ ಪ್ರಖ್ಯಾತಿಗಳಿಸಿದ್ದು ಇತಿಹಾಸ.

    6 ದಶಕ, 1500 ಸಿನಿಮಾಗಳು

    6 ದಶಕ, 1500 ಸಿನಿಮಾಗಳು

    ಸುಮಾರು 60 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಪಂಡರೀಬಾಯಿ 1500 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಾಯಿಯ ಪಾತ್ರದ ಮೂಲಕ ಪಂಡರೀಬಾಯಿ ಇಂದಿಗೂ ಚಿತ್ರಪ್ರೇಕ್ಷಕರಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.

    ಇನ್ನಾದರು ನಮ್ಮವರು, ನಮ್ಮವರಿಗೆ ಜೈ ಎನ್ನುವ: ಜಗ್ಗೇಶ್ ಟ್ವೀಟ್ ಮರ್ಮವೇನು?ಇನ್ನಾದರು ನಮ್ಮವರು, ನಮ್ಮವರಿಗೆ ಜೈ ಎನ್ನುವ: ಜಗ್ಗೇಶ್ ಟ್ವೀಟ್ ಮರ್ಮವೇನು?

    ಕೊನೆಯ ದಿನಗಳು ಕಷ್ಟಕರವಾಗಿತ್ತು

    ಕೊನೆಯ ದಿನಗಳು ಕಷ್ಟಕರವಾಗಿತ್ತು

    ಖ್ಯಾತ ನಟರಿಗೆ ತಾಯಿಯಾಗಿ ಬಹುತೇಕ ಸಿನಿಮಾಗಳಲ್ಲಿ ನಟಿಸಿರುವ ಪಂಡರೀಬಾಯಿ ಕೊನೆಯ ದಿನಗಳು ಯಾತನಾಮಯವಾಗಿತ್ತು. 50 ವರ್ಷದವರೆಗೂ ಒಂಟಿಯಾಗಿ ಜೀವನ ನಡೆಸಿದ ಪಂಡರೀಬಾಯಿ, 50ನೇ ವಯಸ್ಸಿನಲ್ಲಿ ಡಾ.ಪಿ.ಎಚ್.ರಾಮಾ ರಾವ್ ಅವರನ್ನು ಮದುವೆಯಾದರು. ಅಪಘಾತದಿಂದ ಪಂಡರೀಬಾಯಿ ಆರೋಗ್ಯ ಹದಗೆಟ್ಟಿತ್ತು. ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿ ಇರಲಿಲ್ಲ. ತಮಿಳುನಾಡು ಸರ್ಕಾರ ಆರ್ಥಿಕ ನೆರವನ್ನು ನೀಡಿತ್ತು. 2003 ಜನವರಿಯಲ್ಲಿ ಪಂಡರೀಬಾಯಿ ಕೊನೆಯುಸಿರೆಳೆದರು.

    ಸಂಯುಕ್ತಾ ಹೆಗಡೆ ಮೇಲೆ ಹಲ್ಲೆ: 'ಸಮಾಜದ ಡೊಂಕು ತಿದ್ದುವ ಮೊದಲು ನಾವು ಸರಿಯಿರಬೇಕು' ಎಂದ ಜಗ್ಗೇಶ್ಸಂಯುಕ್ತಾ ಹೆಗಡೆ ಮೇಲೆ ಹಲ್ಲೆ: 'ಸಮಾಜದ ಡೊಂಕು ತಿದ್ದುವ ಮೊದಲು ನಾವು ಸರಿಯಿರಬೇಕು' ಎಂದ ಜಗ್ಗೇಶ್

    Recommended Video

    ಫಸ್ಟ್ ಯಾವನ್ ಹೊಡಿತಾನೋ ಅವನೇ ಹೀರೊ | Filmibeat Kannada
    ಜಗ್ಗೇಶ್ ಹೇಳಿದ್ದೇನು?

    ಜಗ್ಗೇಶ್ ಹೇಳಿದ್ದೇನು?

    ಅಭಿನಯ ಸರಸ್ವತಿ ಪಂಡರೀಬಾಯಿ ಅವರ ಜನ್ಮದಿನ ಸವಿನೆನಪಿನಲ್ಲಿ ನಟ ಜಗ್ಗೇಶ್ ನೆನಪಿಸಿಕೊಂಡಿದ್ದು ಹೀಗೆ, " ಮನಸ್ಸುಗಳು ಮರೆತಿರಬಹುದು ಇತಿಹಾಸ ಇವರ ಮರೆಯಲು ಬಿಡಲ್ಲ. ಹಿರಿಯ ಕಲಾವಿದರು ಆ ಕಾಲದ 24 ಕ್ಯಾರೆಟ್ ಚಿನ್ನವಿದ್ದಂತೆ. ಅದರ ಬೆಲೆ ಇಂದಿನ ಕಲಬೆರಕೆ ಚಿನ್ನಗಳ ಮುಂದೆ ಮಂಕಾಗಿ ನೆಪಕ್ಕೆ ಕಾಣುತ್ತದೆ ಆದರೆ ಅಭಿಮಾನಿ ಹೃದಯದಲ್ಲಿ ಮಿನುಗುವ ತಾಕತ್ತು ಇಂದಿಗೂ ಇರುವುದು 24 ಕ್ಯಾರೆಟ್ ಮಾತ್ರ" ಎಂದು ಹೇಳಿದ್ದಾರೆ.

    English summary
    Actor Jaggesh Remembers the Late South Actress Pandari bai on Her Birth Anniversary.
    Saturday, September 19, 2020, 14:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X