For Quick Alerts
  ALLOW NOTIFICATIONS  
  For Daily Alerts

  ಆರಾಧ್ಯ ದೈವ ರಾಜ್‌ಕುಮಾರ್ ಬಗ್ಗೆ ಜಗ್ಗೇಶ್ ಭಾವುಕ ಮಾತು

  |

  ಜಗ್ಗೇಶ್ ಮಾತಿಗೆ ಕೂತರೆ, ಹಾಸ್ಯ, ಭಾವುಕತೆ, ಅಧ್ಯಾತ್ಮ, ರಾಜಕೀಯ, ಪ್ರಚಲಿತ ವರ್ತಮಾನ, ಸಿನಿಮಾ ರಂಗದ ಹಿಂದು-ಮುಂದು ಎಲ್ಲದರ ಬಗ್ಗೆ ಚರ್ಚೆಯಾಗುತ್ತದೆ. ಅವರ ಆರಾಧ್ಯ ದೈವ ರಾಜ್‌ಕುಮಾರ್ ಬಗ್ಗೆ ಮಾತನಾಡದೆ ಜಗ್ಗೇಶ್ ಮಾತು ಮುಗಿಯದು.

  ಸಿನಿ ಜೀವನದ ಮೊದಲ ಡೈಲಾಗ್ ಹೊಡೆದ ಜಗ್ಗೇಶ್ | Jaggesh 40 years Cine Journey | Filmibeat Kannada

  ಜಗ್ಗೇಶ್ ಚಿತ್ರರಂಗಕ್ಕೆ ಬಂದು 40 ವರ್ಷ ಪೂರೈಸಿದ ಸಂತಸ ಹಂಚಿಕೊಳ್ಳಲೆಂದು ಜಗ್ಗೇಶ್ ಇಂದು ಮಾಧ್ಯಮಿತ್ರರೊಂದಿಗೆ ಸಂವಾದ ಹಮ್ಮಿಕೊಂಡಿದ್ದರು. ಸಂವಾದದಲ್ಲಿ ಜಗ್ಗೇಶ್ ಮಾತಿನ ಲಹರಿ ಅಲ್ಲಿ-ಇಲ್ಲಿ ಹರಿದು ಕೊನೆಗೆ ರಾಜ್‌ಕುಮಾರ್ ಅವರ ವಿಷಯಕ್ಕೆ ಬಂತು.

  'ನನ್ನ ಮೇಲೆ ರಾಜ್‌ಕುಮಾರ್ ಪ್ರಭಾವ ಹೆಚ್ಚಿದೆ. ನನ್ನ ಉಸಿರಲ್ಲಿಯೇ ರಾಜ್‌ಕುಮಾರ್ ಬೆರತು ಹೋಗಿದ್ದಾರೆ. ಅವರಿಂದ ನನ್ನ ಜೀವನದಲ್ಲಿ ಸಾಕಷ್ಟು ಪಾಠಗಳನ್ನು ನಾನು ಕಲಿತಿದ್ದೇನೆ' ಎಂದರು ಜಗ್ಗೇಶ್.

  'ನಾನು ಎಷ್ಟೋ ಬಾರಿ ಗಂಟೆಗಟ್ಟಲೆ ರಾಜ್ ಅವರ ಬಳಿ ಮಾತನಾಡಿದ್ದೇನೆ. ಬೆಳಿಗ್ಗೆ 5 ರಿಂದ ರಾತ್ರಿ 11 ರ ವರೆಗೆ ಮಾತನಾಡಿದ್ದಿದೆ, ಅದ್ಯಾವುದೂ ನನಗೆ ಸರಿಯಾಗಿ ಈಗ ನೆನಪಿಲ್ಲ, ಅವರ ಬಳಿ ಹೆಚ್ಚಿಗೆ ಮಾತನಾಡುತ್ತಿದ್ದುದು ರಾಯರ ಬಗ್ಗೆ' ಎಂದಿದ್ದಾರೆ ಜಗ್ಗೇಶ್.

  ನನಗೆ ಬದುಕಿನ ಹಲವು ಪಾಠಗಳನ್ನು ಡಾ.ರಾಜ್‌ಕುಮಾರ್ ಹೇಳಿಕೊಟ್ಟಿದ್ದಾರೆ. ರಾಜ್ ಕುಮಾರ್ ಹೇಳಿದ ಎಲ್ಲಾ ಮಾತುಗಳನ್ನೂ ಈಗಲೂ ಚಾಚೂ ತಪ್ಪದೆ ಪಾಲಿಸುತ್ತಿದ್ದೇನೆ, ಅಣ್ಣಾವ್ರು ಬೆಳಿಗ್ಗೆ ಎದ್ದು ಸಂಧ್ಯಾವಂದನೆ ಮಾಡುತ್ತಿದ್ದರು, ಇದು ಬಹಳ ಜನಕ್ಕೆ ಗೊತ್ತಿಲ್ಲ' ಎಂದು ಹೇಳಿದರು ನಟ ಜಗ್ಗೇಶ್.

  ಡಾ.ರಾಜ್‌ಕುಮಾರ್ ಬಗ್ಗೆ ಅತೀವ ಗೌರವ, ಪ್ರೀತಿ ಇಟ್ಟುಕೊಂಡಿದ್ದ ಜಗ್ಗೇಶ್, ಹಲವು ಬಾರಿ ರಾಜ್‌ಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ. 'ರಾಜ್ ಕುಮಾರ್ ಅವರನ್ನು ಸಂತನಂತೆ, ದೇವರಂತೆ ನೋಡುತ್ತಿದ್ದೇ ನಾನು' ಎಂದು ಮತ್ತೊಮ್ಮೆ ಗೌರವ ಭಾವ ಪ್ರದರ್ಶಿಸಿದರು ಜಗ್ಗೇಶ್.

  English summary
  Actor Jaggesh talked about Dr Rajkumar. He said Rajkumar was a great man, i learned lot of things in my life by Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X