ತಮ್ಮ ಸಂಭಾವನೆ ಬಹಿರಂಗಪಡಿಸಿದ ಜಗ್ಗೇಶ್: ಟಿವಿಗೆ ಎಷ್ಟು? ಸಿನಿಮಾಕ್ಕೆ ಎಷ್ಟು?

ನಟ ಜಗ್ಗೇಶ್ ಕನ್ನಡ ಚಿತ್ರರಂಗದ ಹಿರಿಯ ನಟ, ಬೇಡಿಕೆಯಲ್ಲಿರುವ ನಟ ಜೊತೆಗೆ ಸಕ್ರಿಯ ರಾಜಕಾರಣಿಯೂ ಹೌದು. ಸಕ್ರಿಯ ರಾಜಕಾರಣದಲ್ಲಿದ್ದುಕೊಂಡೂ ಸಿನಿಮಾ, ಟಿವಿಗಳಲ್ಲಿ ಸಹ ತೊಡಗಿಕೊಂಡಿದ್ದಾರೆ.

ಬಹಳ ಕಷ್ಟದ ದಿನಗಳನ್ನು ಕಂಡು ಈ ಎತ್ತರಕ್ಕೆ ಬೆಳೆದಿರುವ ಜಗ್ಗೇಶ್‌ಗೆ ಇಂದು ಅವರದ್ದೇ ಆದ ಅಭಿಮಾನಿ ಬಳಗ ಇದೆ. ಅವರ ಸಿನಿಮಾಗಳಿಗಾಗಿ ಕಾಯುವ ಒಂದು ವರ್ಗವಿದೆ. ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್‌ ಅವರಿಗೆ ಸಿನಿಮಾಗಳಿಗೆ ಒಳ್ಳೆಯ ಸಂಭಾವನೆಯೂ ಧಕ್ಕುತ್ತದೆ.

ಜಗ್ಗೇಶ್ ಅವರ ಹೊಸ ಸಿನಿಮಾ 'ತೋತಾಪುರಿ' ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಕುರಿತು ಇಂದು ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಮಾಧ್ಯಮಗಳ ಜೊತೆ ಆಪ್ತವಾಗಿ, ಲೋಕಾಭಿರಾಮವಾಗಿ ಮಾತನಾಡುವ ಜಗ್ಗೇಶ್, ತಮ್ಮ ಸಂಭಾವನೆ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

ತಮ್ಮ ಸಂಭಾವನೆ ಎಷ್ಟೆಂದು ಹೇಳಿಕೊಂಡ ಜಗ್ಗೇಶ್

ತಮ್ಮ ಸಂಭಾವನೆ ಎಷ್ಟೆಂದು ಹೇಳಿಕೊಂಡ ಜಗ್ಗೇಶ್

ಸಿನಿಮಾದಲ್ಲಿ ನಟಿಸಿದರೆ ಎರಡು ಕೋಟಿ ಸಂಭಾವನೆ, ಟಿವಿಯಲ್ಲಿ ಕಾಣಿಸಿಕೊಂಡರೆ ಮೂರು ಕೋಟಿ ಕೊಡುತ್ತಾರೆ ಎಂದು ಸ್ವತಃ ಜಗ್ಗೇಶ್ ಹೇಳಿಕೊಂಡಿದ್ದಾರೆ. ''ಒಂದು ಸಿನಿಮಾ ಮಾಡಿದರೆ ಸಾಕು ಜೀವನ ಸಾಗುತ್ತದೆ. ಒಂದು ಸಿನಿಮಾಕ್ಕೆ ಎರಡು ಕೋಟಿ ಸಂಬಳ ಕೊಡ್ತಾರೆ, ಅದನ್ನು ಹೇಳಿಕೊಳ್ಳಲು ಭಯವೇನಿಲ್ಲ. ಟಿವಿಯಲ್ಲಿ ಮುಖ ತೋರಿಸಿದರೆ ಮೂರು ಕೋಟಿ ಕೊಡುತ್ತಾರೆ. ಅದನ್ನು ಹೇಳಿಕೊಳ್ಳಲು ಭಯವಿಲ್ಲ'' ಎಂದಿದ್ದಾರೆ ಜಗ್ಗೇಶ್.

ನಾವು ನಮ್ಮಷ್ಟಕ್ಕೆ ಆರಾಮವಾಗಿದ್ದೇವೆ: ಜಗ್ಗೇಶ್

ನಾವು ನಮ್ಮಷ್ಟಕ್ಕೆ ಆರಾಮವಾಗಿದ್ದೇವೆ: ಜಗ್ಗೇಶ್

''ನನಗಿರುವುದು ಒಬ್ಬ ಹೆಂಡತಿ ಇಬ್ಬರು ಮಕ್ಕಳು, ಅವರನ್ನು ಸಾಕಲು ನನಗೆ ಅಷ್ಟು ಸಾಕು. ನನಗೆ ಎಂಟು ಜನ ಹೆಂಡತಿಯರು ಡಜನ್ ಮಕ್ಕಳು ಎಲ್ಲ ಇಲ್ಲ. ನನಗೆ ಬರುವ ಸಂಬಳ ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಲು ಸಾಕು. ನಮ್ಮ ಕುಟುಂಬದವರು ನಾವು ಆನಂದವಾಗಿದ್ದೇವೆ. ಒಬ್ಬರ ತಂಟೆಗೆ ಹೋಗುವುದಿಲ್ಲ. ನನ್ನ ಮಕ್ಕಳಂತೂ ನನ್ನ ಹೆಸರನ್ನು ಎಲ್ಲಿಯೂ ಬಳಸಿಕೊಳ್ಳುವುದು ಸಹ ಇಲ್ಲ. ಒಟ್ಟಾರೆ ನಾವು ನಮ್ಮ ಪಾಡಿಗೆ ಆರಾಮವಾಗಿದ್ದೇವೆ'' ಎಂದಿದ್ದಾರೆ ಜಗ್ಗೇಶ್.

ಕಪಾಳಕ್ಕೆ ಹೊಡೆದು ನಟನೆ ಕಲಿಸಿದ್ದಾರೆ: ಜಗ್ಗೇಶ್

ಕಪಾಳಕ್ಕೆ ಹೊಡೆದು ನಟನೆ ಕಲಿಸಿದ್ದಾರೆ: ಜಗ್ಗೇಶ್

ಅದೇ ಕಾರ್ಯಕ್ರಮದಲ್ಲಿ ಆರಂಭದ ದಿನಗಳಲ್ಲಿ ತಾವು ಎದುರಿಸಿದ ಕಷ್ಟಗಳ ಬಗ್ಗೆಯೂ ಮಾತನಾಡಿರುವ ಜಗ್ಗೇಶ್, ''ಈಗ ಹೇಳುತ್ತಾರೆ ಜಗ್ಗೇಶ್ ಚೆನ್ನಾಗಿ ಆಕ್ಟ್ ಮಾಡುತ್ತಾರೆ ಎಂದು ನಿಜ ಏನೆಂದರೆ ಒಬ್ಬೊಬ್ಬ ನಿರ್ದೇಶಕನೂ ನನಗೆ ಕಪಾಳಕ್ಕೆ ಹೊಡೆದು ನಟಿಸುವುದನ್ನು ಹೇಳಿಕೊಟ್ಟಿದ್ದಾರೆ. ಒಂದು ಪಾತ್ರ ಮಾಡುವುದಕ್ಕೆ ಎಂಥೆಂತಾ ಮಾತುಗಳನ್ನು ಕೇಳಿದ್ದೇನೆಂದರೆ, ನಮ್ಮ ತಾಯಿ, ತಂಗಿ ನಮ್ಮ ಕುಟುಂಬವನ್ನೇ ಒತ್ತೆ ಇಟ್ಟಿದ್ದೇವೆ'' ಎಂದಿದ್ದಾರೆ.

ಶೂಟಿಂಗ್ ಎಂದರೆ ಕೈ-ಕಾಲು ನಡುಕ: ಜಗ್ಗೇಶ್

ಶೂಟಿಂಗ್ ಎಂದರೆ ಕೈ-ಕಾಲು ನಡುಕ: ಜಗ್ಗೇಶ್

''ನಮ್ಮನ್ನು ಅಂದು ಬೈದ ಆ ನಿರ್ದೇಶಕರ ಬಗ್ಗೆ ಇಂದು ಹೇಳುವ ಹಾಗಿಲ್ಲ. ಅವರಿಗೆಲ್ಲ ಇಂದು ವಯಸ್ಸಾಗಿದೆ. ಅವರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ. ಬೆಳಿಗ್ಗೆ ಶೂಟಿಂಗ್ ಎಂದರೆ ಭಯ ಆಗುತ್ತಿದ್ದು, ಎಡಗೈಲಿ ಜೀವ ಇಟ್ಟುಕೊಂಡು ಶೂಟಿಂಗ್‌ಗೆ ಹೋಗುತ್ತಿದ್ದೆವು. ಡೈಲಾಗ್ ಕೊಟ್ಟು ನಮ್ಮನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದರು. ಪ್ರೀತಿಯಿಂದ ಹೇಳಿಕೊಟ್ಟಿದ್ದು ಎಂದೂ ಇಲ್ಲ. ಶೂಟಿಂಗ್ ಎಂದರೆ ನಮಗೆ ಕೈ ಕಾಲು ನಡುಕ ಬಂದು ಬಿಡೋದು'' ಎಂದು ಹಳೆಯ ದಿನಗಳನ್ನು ಜಗ್ಗೇಶ್ ಮೆಲುಕು ಹಾಕಿದ್ದಾರೆ.

More from Filmibeat

English summary
Actor Jaggesh talks about his remuneration. He said he recive 2 crore rs for a movie and 3 crore rs for Tv show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X