ವ್ಯಾಘ್ರ ಗುಣವಿದ್ದ ಜಗ್ಗೇಶ್ ರನ್ನು ಬದಲಾಯಿಸಿದ್ದು ಈ ಪುಸ್ತಕವಂತೆ
ನಟ ಜಗ್ಗೇಶ್ ಈಗ ಯುವ ಜನರಿಗೆ ಒಂದು ಸಂದೇಶ ನೀಡಿದ್ದಾರೆ. ನೀವು ಒಂದು ಪುಸ್ತಕ ಓದಿ, ಈ ಪುಸ್ತಕ ಓದಿದರೆ ಖಂಡಿತ ಸಕ್ಸಸ್ ಆಗುತ್ತೀರಾ ಎಂದು ಜಗ್ಗೇಶ್ ಹೇಳುತ್ತಿದ್ದಾರೆ. ಅಂದಹಾಗೆ, ಆ ಪುಸ್ತಕ ಬೇರೆ ಯಾವುದು ಅಲ್ಲ ಹಿಂದೂಗಳ ಪವಿತ್ರ ಗ್ರಂಥ 'ಭಗವದ್ಗೀತೆ'.
ನಟ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ದಿನನಿತ್ಯ ಅನೇಕ ವಿಚಾರಗಳನ್ನು ಅಭಿಮಾನಿಗಳ ಜೊತೆಗೆ ನೇರವಾಗಿ ಹಂಚಿಕೊಳ್ಳುತ್ತಾರೆ. ಈಗ 'ಭಗವದ್ಗೀತೆ' ಪುಸ್ತಕದ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
''ನನ್ನ ಯುವ ಮಿತ್ರರಿಗೆ ಪ್ರೀತಿಯ ವಿನಂತಿ. ಸಮಯ ಸಿಕ್ಕಾಗ ದಯಮಾಡಿ 'ಭಗವದ್ಗೀತೆ' ಅರ್ಥೈಸಿಕೊಂಡು ಓದಲು ಯತ್ನಿಸಿ. promise ನೀವು ತುಂಬ success ಆಗುತ್ತೀರಿ. ವ್ಯಾಘ್ರ ಗುಣವಿದ್ದ ನನ್ನ ಬದಲಾಯಿಸಿದ್ದು ಇದೇ ಭಗವದ್ಗೀತೆ. ಸಾಕ್ಷಾತ್ ಕೃಷ್ಣನ ಮಾತು 5 ಸಾವಿರ ವರ್ಷದ ಹಿಂದೆ ನುಡಿದ ಶ್ರೇಷ್ಟ ದೇವರ ಮಾತು. ಬಲವಂತವಿಲ್ಲಾ ಸವಿದು ನೋಡಿ ವಿನಂತಿ..ಧನ್ಯವಾದ'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಸಿನಿಮಾಗಳ ಕೆಲಗಳ ಮಧ್ಯೆ ಪುಸ್ತಕ ಓದುವ ಹವ್ಯಾಸ ಇಟ್ಟುಕೊಂಡಿರುವ ಜಗ್ಗೇಶ್ 'ಭಗವದ್ಗೀತೆ'ಯನ್ನು ಓದಿದ್ದಾರೆ.


Click it and Unblock the Notifications











