ರಾಘಣ್ಣನ ಮನೆಯಲ್ಲಿ ಜಗ್ಗೇಶ್: ಅಣ್ಣನ ಪ್ರೀತಿಯ ಆ ದಿನಗಳನ್ನು ನೆನಪಿಸಿತು ಎಂದ ನವರಸನಾಯಕ

ಹಿರಿಯ ನಟ ಜಗ್ಗೇಶ್, ನಟ ಮತ್ತು ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಇತ್ತೀಚಿಗಷ್ಟೆ ರಾಘಣ್ಣ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಚಿತ್ರೀಕರಣ ವೇಳೆ ಅಸ್ವಸ್ಥರಾಗಿದ್ದ ರಾಘಣ್ಣ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು.

ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಚೇತರಿಸಿಕೊಳ್ಳುತ್ತಿರುವ ರಾಘಣ್ಣ ಅವರ ಮನೆಗೆ ಜಗ್ಗೇಶ್ ಭೇಟಿ ನೀಡಿದ್ದರು. ನಟ ಜಗ್ಗೇಶ್, ರಾಜ್ ಕುಟುಂಬದ ಅಭಿಮಾನಿ. ಡಾ. ರಾಜ್ ಮೇಲೆ ಅಪಾರವಾದ ಗೌರವ ಇಟ್ಟುಕೊಂಡಿದ್ದಾರೆ. ಅಣ್ಣಾವ್ರ ಮೇಲಿನ ಪ್ರೀತಿಯನ್ನು ಆಗಾಗ ವ್ಯಕ್ತಪಡಿಸುತ್ತಿರುತ್ತಾರೆ.

ಇದೀಗ ರಾಘಣ್ಣ ಮನೆಗೆ ಬಂದಿರುವ ಜಗ್ಗೇಶ್ ಹಳೆಯ ದಿನಗಳನ್ನು ನನಪಿಸಿಕೊಂಡಿದ್ದಾರೆ. ರಾಘಣ್ಣ ಅವರ ಸಹೋದರರ ಭಾವ ಡಾ.ರಾಜ್ ನೆನಪನ್ನು ತಂದು ಕೊಟ್ಟಿತು ಎಂದು ಹೇಳಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಅವರ ಕುಟುಂಬದವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ಪಟ್ಟಿದ್ದಾರೆ.

Actor Jaggesh visits Raghavendra Rajkumars house

Recommended Video

ಪೊಗರು ಓಟಕ್ಕೆ ಬ್ರೇಕ್ ಹಾಕಲಿದ್ದಾರೆ ಬ್ರಾಹ್ಮಣರು | Filmibeat Kannada

ಈ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 'ಅಣ್ಣನ ಮನೆಗೆ ರಾಘಣ್ಣನ ಆರೋಗ್ಯ ವಿಚಾರಿಸಲು ಹೋದಕ್ಷಣ' ರಾಘಣ್ಣನ ಆತ್ಮೀಯ ಸಹೋದರ ಭಾವ ಅಣ್ಣನ ಪ್ರೀತಿಯ ಆ ದಿನಗಳು ನೆನಪಿಸಿತು. ನನ್ನ ಮನ ರಾಯರ ಪ್ರಾರ್ಥಿಸಿದ್ದು ಒಂದೆ ರಾಘಣ್ಣನಿಗೆ ಆಯುಷ್ಮಾನ್ ಭವ ಆರೋಗ್ಯಂ ಧೇಹಿಮೆ' ಎಂದು ಬರೆದುಕೊಂಡಿದ್ದಾರೆ. ರಾಘಣ್ಣ ಕುಟುಂಬದ ಜೊತೆ ಕ್ಲಿಕ್ಕಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ.

More from Filmibeat

English summary
Actor Jaggesh visits Raghavendra Rajkumar's house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X