twitter
    For Quick Alerts
    ALLOW NOTIFICATIONS  
    For Daily Alerts

    ಮೌನವಾಗಿರಲೋ, ವಲಸೆ ಬಂದವರಿಗಾಗಿ ನಾನು ಪಕ್ಕ ಸರಿಯಲೋ: ಜಗ್ಗೇಶ್

    |

    ನವರಸ ನಾಯಕ ಜಗ್ಗೇಶ್ ಉಹ ಚುನಾವಣೆಗೆ ಸ್ಪರ್ಧಿಸುವ ಆಸೆಯನ್ನು ಹೊರಹಾಕಿದ್ದಾರೆ. ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಆಗಿದೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆ ಮಾಜಿ ಶಾಸಕ ಮತ್ತು ನಟ ಜಗ್ಗೇಶ್ ಟಿಕೆಟ್ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಜಗ್ಗೇಶ್ "ಭೈಎಲೆಕ್ಷನ್ ಬಂತು. 2019 ಕಡೆ ಘಳಿಗೆ ಅಭ್ಯರ್ಥಿಯಾದ ನಾನು ex-Mla/MLC ಆಗಿ. @narendramodi @RSS4India ತನುಮನಧನ ಕಳೆದುಕೊಂಡು. 9 ದಿನದಲ್ಲಿ 60,400ಮತ ಪಡೆದ ಅಭ್ಯರ್ಥಿ ನಾನು. ಮೌನವಾಗಿರಲೋ. ವಲಸೆ ಬಂದವರಿಗಾಗಿ ನಾನು ಪಕ್ಕ ಸರಿಯಲೋ? ಇಲ್ಲಾ ಮೌನವಾಗಿ ತ್ಯಾಗಿಯಾಗಲೋ. ಕಾಡಿನಲ್ಲಿ ಕಳೆದುಹೋದ ಮಗುವಂತಾಗಿರುವೆ"ಎಂದು ಬರೆದುಕೊಂಡಿದ್ದಾರೆ.

    ಮುನಿಸು ಮರೆತು ಒಂದಾದ ಹಿಟ್ ಜೋಡಿ: ಏನಾದ್ರೂ ಹಿಂಟ್ ಸಿಗ್ತಾ?ಮುನಿಸು ಮರೆತು ಒಂದಾದ ಹಿಟ್ ಜೋಡಿ: ಏನಾದ್ರೂ ಹಿಂಟ್ ಸಿಗ್ತಾ?

    2018 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಗ್ಗೇಶ್ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಹೆಚ್ಚು ಪ್ರಚಾರ ಮಾಡದಿದ್ದರು ಜಗ್ಗೇಶ್ 59,308 ಮತಗಳನ್ನು ಪಡೆದು ಸೋತಿದ್ದರು. ಕಾಂಗ್ರೇಸ್ ನ ಎಸ್.ಟಿ ಸೋಮಶೇಖರ್ ಗೆಲುವು ದಾಖಲಿಸಿದ್ದರು.

    Actor Jaggesh Will Contest In Yeshwanthpur Constituency In By Election

    ಅಸಮಾಧಾನದಿಂದ ಎಸ್.ಟಿ ಸೋಮಶೇಖರ್ ರಾಜಿನಾಮೆ ನೀಡಿದ್ದಾರೆ. ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ಒಂದು ವೇಳೆ ಸುಪ್ರಿಂಕೋರ್ಟ್ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಿದರೆ ಎಸ್.ಟಿ ಸೋಮಶೇಖರ್ ಸ್ಪರ್ಧಿಸುತ್ತಾರೆ. ಇದರಿಂದ ಟಿಕೆಟ್ ತಪ್ಪುವ ಆತಂಕವನ್ನು ಹೊರಹಾಕಿದ್ದಾರೆ ಜಗ್ಗೇಶ್ ಎಂದು ಹೇಳಲಾಗುತ್ತಿದೆ.

    English summary
    Actor Jaggesh will contest in Yeshwanthpur constituency in by election 2019
    Sunday, September 22, 2019, 10:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X