Don't Miss!
- Automobiles
ಬೆಂಗಳೂರಿನಲ್ಲಿ ಪೇಯ್ಡ್ ಪಾರ್ಕಿಂಗ್ - ವಾಹನ ಸವಾರರಿಗೆ ಮತ್ತೆ ಶಾಕ್ ನೀಡಲಿದೆ ಬಿಬಿಎಂಪಿ..!
- Lifestyle
ಮನೆಯಲ್ಲಿ ಮಾಡುವ ಇಂಥಾ ಸಣ್ಣಪುಟ್ಟ ತಪ್ಪುಗಳಿಂದಲೇ ಬೆಂಕಿ ಅವಘಡಗಳು ಸಂಭವಿಸೋದು!
- News
ಮಹಾರಾಷ್ಟ್ರ ಬಿಜೆಪಿಯೊಳಗೆ ಗುರುತರ ಬದಲಾವಣೆ ಸಾಧ್ಯತೆ; ಫಡ್ನವಿಸ್ ಕೈ ಕಟ್ಟಿಹಾಕುವ ಯೋಜನೆ
- Sports
ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಲು ಈ 2 ತಂಡಗಳು ಇಷ್ಟು ಪಂದ್ಯ ಸೋಲಲೇಬೇಕು!
- Education
KSSIDC Recruitment 2022 : 7 ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಸಹಾಯಕ ಅಭಿಯಂತರರು ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒಪ್ಪೋ ರೆನೋ 8 ಫೋನ್ ಎಂಟ್ರಿಗೆ ದಿನಾಂಕ ನಿಗದಿ!..ಸ್ಟೋರೇಜ್ ಆಯ್ಕೆ ಎಷ್ಟು?
- Finance
ಜಿಯೋ ಗ್ರಾಹಕರಿಗೆ ಉಚಿತ ನೆಟ್ಫ್ಲಿಕ್ಸ್ ಆಫರ್: ಇಲ್ಲಿದೆ ವಿವರ
- Travel
ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು
ಜಗ್ಗೇಶ್ ಬರ್ತ್ಡೇ ಸಂಭ್ರಮಕ್ಕೆ ಬ್ರೇಕ್: ಟ್ವೀಟ್ನಲ್ಲೇ ಕಣ್ಣೀರು!
ಪುನೀತ್ ರಾಜ್ಕುಮಾರ್ ಅಗಲಿಯ ಬಳಿಕ ಸಿನಿಮಾರಂಗದಲ್ಲಿ ಒಂದಷ್ಟು ಬದಲಾಣೆಗಳು ಆಗಿವೆ. ಸಾಕಷ್ಟು ಸಂಭ್ರಮಾಚರಣೆಗಳು ಅಪ್ಪು ಇಲ್ಲ ಎನ್ನುವ ಕಾರಣಕ್ಕೆ ನಿಂತು ಹೋಗಿವೆ. ಸಾಕಷ್ಟು ಸಿನಿಮಾ ತಾರೆಯರು ಸದಾ ಅಪ್ಪು ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಅಪ್ಪು ಇಲ್ಲದ ನೋವಿನಿಂದ ಹಲವರು ತಮ್ಮ ಹುಟ್ಟುಹಬ್ಬದ ಸಂಭ್ರಮಕ್ಕೆ ಬ್ರೇಕ್ ಹಾಕಿದ್ದಾರೆ.
ಈಗ ಕನ್ನಡದ ಮತ್ತೊಬ್ಬ ನಟ ಅಪ್ಪು ನೆನಪಿನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ. ಅದು ಮತ್ಯಾರು ಅಲ್ಲ ನಟ ಜಗ್ಗೇಶ್. ಹೌದು ಜಗ್ಗೇಶ್ ಅವರ ತಮ್ಮ ಅಭಿಮಾನಿಗಳ ಜೊತೆಗೆ ಅದ್ಧೂರಿಯಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿದ್ದರು. ಆದರೆ ಈ ಬಾರಿ ಅಪ್ಪು ಇಲ್ಲ ಎನ್ನುವ ಕಹಿ ನೆನಪಿನೊಂದಿಗೆ ಬರ್ತ್ ಡೆ ಆಚರಣೆ ಮಾಡುತ್ತಿಲ್ಲ.
'ಎದ್ದೇಳು
ಮಂಜುನಾಥ
2':
ಚಿತ್ರದಲ್ಲಿ
ಜಗ್ಗೇಶ್ಗೆ
ಜಾಗವಿಲ್ಲ!
ಈ ವಿಚಾರವನ್ನು ಸ್ವತಃ ನಟ ಜಗ್ಗೇಶ್ ಅವರೇ ಸ್ಪಷ್ಟಪಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸುತ್ತಿಲ್ಲ ಎನ್ನುವುದನ್ನು ಬರೆದುಕೊಂಡಿದ್ದಾರೆ. ಜಗ್ಗೇಶ್ ಟ್ವೀಟ್ನಲ್ಲಿ ಏನಿದೆ ಎನ್ನುವುದನ್ನು ಮುಂದೆ ಓದಿ...
ಜೇಮ್ಸ್
ರಿಲೀಸ್ಗೂ
ಮುನ್ನ
ಮತ್ತೊಂದು
ಸರ್ಪ್ರೈಸ್!

ಜಗ್ಗೇಶ್- ಪುನೀತ್ ಹುಟ್ಟುಹಬ್ಬ ಒಂದೇ ದಿನ!
ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಮಾರ್ಚ್ 17ಕ್ಕೆ. ಅಂದೇ ಜಗ್ಗೇಶ್ ಹುಟ್ಟುಹಬ್ಬ ಕೂಡ ಇದೆ. ಇಬ್ಬರ ಹುಟ್ಟುಹಬ್ಬ ಒಂದೇ ದಿನ ಹಾಗಾಗಿ ಇಬ್ಬರು ಒಬ್ಬರಿಗೊಬ್ಬರು, ಕರೆ ಮಾಡಿ ಶುಭಕೋರುತ್ತಿದ್ದರು. ನಟ ಪುನೀತ್ ರಾಜ್ಕುಮಾರ್ ಜಗ್ಗೇಶ್ ಅವರಿಗೆ ಫೋನ್ ಮಾಡಿ ಸಿನಿಮಾ ಪ್ರತಿ ವರ್ಷ ತಪ್ಪದೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಿದ್ದರಂತೆ. ಆದರೆ ಇನ್ನು ಮುಂದೆ ಅದು ಎಂದೂ ಸಾಧ್ಯ ಆಗುವುದಿಲ್ಲ. ಯಾಕೆಂದರೆ ಅಪ್ಪುನೇ ಇಲ್ಲ. ಹಾಗಾಗಿ ಜಗ್ಗೇಶ್ ಭಾವುಕಗೊಂಡು ಟ್ವೀಟ್ ಮಾಡಿದ್ದಾರೆ.
|
ಪುನೀತ್ ಫೋನ್ ಎಂದು ಬರುವುದಿಲ್ಲ, ಜಗ್ಗೇಶ್ ಭಾವುಕ ಟ್ವೀಟ್!
ಜಗ್ಗೇಶ್ ಅವರು ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ. ಈ ವಿಚಾರವನ್ನು ಟ್ವೀಟ್ ಮಾಡಿರುವ ಅವರು "ಈ ಬಾರಿ ನನ್ನ 59ನೇ ಹುಟ್ಟುಹಬ್ಬ ಆಚರಿಸುವುದಿಲ್ಲಾ. ಮನಸ್ಸು ಇಲ್ಲಾ. ಕಾರಣ ಪ್ರತಿ ಮಾರ್ಚ್ 17 ಕ್ಕೆ ತಪ್ಪದೆ ಬರುತ್ತಿದ್ದ, ಪುನೀತ ಕರೆ ಅಣ್ಣ happy birthday ಎಂದು, ಮತ್ತೆ ಎಂದು ಬರದಂತಾಯಿತು. ಎಂದು ಬರೆದುಕೊಂಡು ಪುನೀತ್ ರಾಜ್ಕುಮಾರ್ ಜೊತೆಗೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ.

ದರ್ಶನ್, ದುನಿಯಾ ವಿಜಯ್, ಶ್ರೀ ಮುರಳಿ ಹುಟ್ಟುಹಬ್ಬಕ್ಕೆ ಬ್ರೇಕ್!
ಜಗ್ಗೇಶ್ ಹೊರತು ಪಡಿಸಿದರೆ ಕನ್ನಡದ ಹಲವು ತಾರೆಯರು ಅಪ್ಪುಗಾಗಿ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿಲ್ಲ. ಪುನೀತ್ ಅಕಾಲಿಕ ನಿಧನವಾಗಿರುವ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲ ಎಂದು ನಟ ದರ್ಶನ್ ತಮ್ಮ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿ ಅಭಿಮಾನಿಗಳಿಗೆ ಕರೆಕೊಟ್ಟಿದ್ದರು. ಅಂತೆಯೇ ನಟ ದುನಿಯಾ ವಿಜಯ್ ಕೂಡ ಇದೇ ಕಾರಣಕ್ಕೆ ಹುಟ್ಟುಹಬ್ಬದ ಸಂಭ್ರಮ ಬೇಡ ಎಂದಿದ್ದರು. ಹಾಗೆ ನಟ ಶ್ರೀಮುರುಳಿ ಮತ್ತು ಸೃಜನ್ ಲೋಕೇಶ್ ಕೂಡ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿದ್ದರು.

ಮಾರ್ಚ್ 17ಕ್ಕೆ ಪುನೀತ್ ರಾಜ್ಕುಮಾರ್ ಬರ್ತ್ ಡೇ ಅದ್ದೂರಿ ಆಚರಣೆ!
ಮಾರ್ಚ್ 17ರಂದು ಪುನೀತ್ರಾಜ್ಕುಮಾರ್ ಹುಟ್ಟುಹಬ್ಬ. ಜೊತೆಗೆ ಜೇಮ್ಸ್ ಸಿನಿಮಾ ರಿಲೀಸ್ ಆಗುತ್ತಿದೆ. ಹಾಗಾಗಿ ಅಂದು ಡಬಲ್ ಸಂಭ್ರಮ. ಈಗಾಗಲೇ ಅಭಿಮಾನಿಗಳು ಸಂಭ್ರಮಕ್ಕೆ ಸಜ್ಜಾಗಿದ್ದಾರೆ. ಮಾರ್ಚ್ 17 ಜೇಮ್ಸ್ ಜಾತ್ರೆ ಜೊತೆಗೆ ಅಪ್ಪು ಅವರನ್ನು ಮೆರೆಸಲು ಸಜ್ಜಾಗಿದ್ದಾರೆ. ಈಗಾಗಲೇ ಜೇಮ್ಸ್ ಚಿತ್ರಮಂದಿರಗಳ ಪಟ್ಟಿ ಕೂಡ ರಿವೀಲ್ ಆಗಿದೆ. ಇನ್ನೇನಿದ್ದರು ಜೇಮ್ಸ್ ಮೂಲಕ ಅಪ್ಪು ಅವರನ್ನು ಕಣ್ತುಂಬಿಕೊಳ್ಳುವುದೊಂದೇ ಬಾಕಿ.