ಸುದೀಪ್ ಪುತ್ರಿಯ ಹಾಡು ವೈರಲ್: ಸಾನ್ವಿಯ ಸುಮಧುರ ಕಂಠಕ್ಕೆ ನಟ ಜೆಕೆ ಫಿದಾ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಅವರ ಬಗ್ಗೆ ಎಲ್ಲರಿಗೂ ಗೊತ್ತಿರುವುದೆ. ಸಾನ್ವಿ ಕ್ಯಾಮರಾ ಮುಂದೆ ಅಥವಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತೀರ ವಿರಳ. ಆದರೆ ಸಾನ್ವಿ ಇತ್ತೀಚಿಗೆ ಹಾಡಿರುವ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೌದು, ಸಾನ್ವಿ ಅದ್ಭುತವಾಗಿ ಹಾಡುತ್ತಾರೆ ಎನ್ನುವ ಬಗ್ಗೆ ಎಷ್ಟೊ ಜನಕ್ಕೆ ಗೊತ್ತಿಲ್ಲ. ಇದೀಗ ಅವರು ಹಾಡಿರುವ ಹಾಡೊಂದು ವೈರಲ್ ಆಗಿದ್ದು, ಸಾನ್ವಿ ಹಾಡು ಕೇಳಿ ಅಚ್ಚರಿ ಪಡುತ್ತಿದ್ದಾರೆ. ಅಲ್ಲದೆ ಸಾನ್ವಿಯ ಮಧುರ ಕಂಠಕ್ಕೆ ನಟ ಜೆಕೆ ಸಹ ಫಿದಾ ಆಗಿದ್ದಾರೆ.

ಅಂದಹಾಗೆ ಸಾನ್ವಿ ಸುದೀಪ್ ಸದ್ಯ ಹೈದರಾಬಾದ್ ನಲ್ಲಿ ಓದುತ್ತಿದ್ದಾರೆ. 16 ವರ್ಷದ ಸಾನ್ವಿ ತನ್ನದೆ ಆದ ಯೂಟ್ಯೂಬ್ ಚಾನೆಲ್ ಅನ್ನು ಶುರುಮಾಡಿದ್ದಾರೆ. ಇಂಗ್ಲಿಷ್ ಹಾಡಿಗೆ ಧ್ವನಿ ನೀಡಿರುವ ಸಾನ್ವಿ ಈ ಹಾಡನ್ನು ತನ್ನದೆ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿದ್ದಾರೆ.

Actor Jai Kartik praises Sudeep Daughter Saanvis song.

ಅಮೆರಿಕದ ಖ್ಯಾತ ಗಾಯಕಿ ಆಂಡ್ರಾ ಡೇ ಅವರ 'ರೈಸ್ ಅಪ್...'ಗೀತೆಯನ್ನು ಹಾಡಿದ್ದಾರೆ. ತನ್ನ ಚಾನೆಲ್ ನಲ್ಲಿ ಶೇರ್ ಮಾಡಿರುವ ಈ ಹಾಡನ್ನು ಈಗಾಗಲೇ ವೀಕ್ಷಿಸಿದ್ದಾರೆ. ಸಾವಿರಕ್ಕು ಲೈಕ್ಸ್ ಹರಿದುಬಂದಿದೆ. ವಿಶೇಷ ಎಂದರೆ ಸಾನ್ವಿಯ ಕಂಠಕ್ಕೆ ನಟ ಜೆಕೆ ಸಹ ಫಿದಾ ಆಗಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಹನ್ನೊಂದು ವರ್ಷಗಳಿಂದ ಈ ಮಗುವನ್ನು ನೋಡುತ್ತಿದ್ದೇನೆ. ಇಷ್ಟು ವಿಶಿಷ್ಟವಾದ ಧ್ವನಿಯನ್ನು ತನ್ನದಾಗಿಸಿಕೊಳ್ಳುತ್ತಾನೆ ಎಂದು ಅಂದುಕೊಂಡಿರಲಿಲ್ಲ. ಸುಂದರವಾದ ಕಂಠವನ್ನು ದೇವರು ಉಡುಗೊರೆಯಾಗಿ ನೀಡಿದ್ದಾನೆ ಎನ್ನುವುದಕ್ಕಿಂತ ಶ್ರಮವೂ ಇದೆ. ಆಲ್ ದಿ ಬೆಸ್ಟ್ ಸಾನ್ವಿ ಡಿಯರ್' ಎಂದು ಹೇಳಿದ್ದಾರೆ.

ಸುದೀಪ್ ಮತ್ತು ಜೆಕೆ ಇಬ್ಬರು ಉತ್ತಮ ಸ್ನೇಹಿತರು. ಇಬ್ಬರ ನಡುವೆ ಉತ್ತಮವಾದ ಬಾಂಧವ್ಯವಿದೆ. ಜೆಕೆಗೆ ಆರಂಭದಲ್ಲಿ ಸುದೀಪ್ ತುಂಬಾ ಸಹಾಯ ಮಾಡಿದ್ದಾರೆ. ಇತ್ತೀಚಿಗೆ ಕಿಚ್ಚ, ಜೆಕೆ ನಟನೆಯ ಐರಾವನ್ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಸುದೀಪ್ ಅತಿಥಿಯಾಗಿ ಬಂದಿದ್ದರು.

More from Filmibeat

English summary
Kannada Actor Jai Kartik praises Sudeep Daughter Saanvi's song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X