For Quick Alerts
  ALLOW NOTIFICATIONS  
  For Daily Alerts

  ಮಯೂರಿ ಮದುವೆಯಲ್ಲಿ ಜೆ ಕೆ ತಂದೆ-ತಾಯಿ ಕನ್ಯಾದಾನ ಮಾಡಿದ್ದೇಕೆ?

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನಟಿ ಮಯೂರಿ ಈಗ ಮದುವೆಯಾಗಿ ಪತಿಯ ಜೊತೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಇತ್ತೀಚಿಗಷ್ಟೆ ನಟಿ ಮಯೂರಿ ಬಹುಕಾಲದ ಗೆಳೆಯ ಅರುಣ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ಲಾಕ್ ಡೌನ್ ಪರಿಣಾಮ ಮಯೂರಿ ಸರಳವಾಗಿ ಮದುವೆಯಾಗಿದ್ದಾರೆ.

  ಭಾರತೀಯ ಸೇನೆಗೆ ಊಟ ಬಡಿಸಿದ ಸುಶಾಂತ್ ಸಿಂಗ್ ರಜಪೂತ್ ವಿಡಿಯೋ ವೈರಲ್| Sushanth Singh Rajput | Filmibeat Kannada

  ಬೆಂಗಳೂರಿನ ಜೆಪಿನಗರದಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮಯೂರಿ ಮತ್ತು ಅರುಣ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರು, ಆಪ್ತರು ಮಾತ್ರ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ಜೋಡಿಗಳಿಗೆ ಶುಭಹಾರೈಸಿದ್ದಾರೆ. ಮಯೂರಿ ಮದುವೆಯಲ್ಲಿ ನಟಿ ಜೆಕೆ ತಂದೆ-ತಾಯಿ ಮಾಡಿರುವ ಸಹಾಯ ಈಗ ಬಹಿರಂಗವಾಗಿದೆ. ಮುಂದೆ ಓದಿ..

  ಫೋಟೋಗಳು: ಬಹುಕಾಲದ ಗೆಳೆಯ ಅರುಣ್ ಜೊತೆ ಹಸೆಮಣೆ ಏರಿದ ನಟಿ ಮಯೂರಿಫೋಟೋಗಳು: ಬಹುಕಾಲದ ಗೆಳೆಯ ಅರುಣ್ ಜೊತೆ ಹಸೆಮಣೆ ಏರಿದ ನಟಿ ಮಯೂರಿ

  ಮಯೂರಿ ಎಂದರೆ ಜೆಕೆ ಪೋಷಕರಿಗೆ ಇಷ್ಟ

  ಮಯೂರಿ ಎಂದರೆ ಜೆಕೆ ಪೋಷಕರಿಗೆ ಇಷ್ಟ

  ಮಯೂರಿ ಮದುವೆಯಲ್ಲಿ ಕನ್ಯಾದಾನ ಮಾಡಿದ್ದು, ನಟ ಜೆಕೆ ಅವರ ತಂದೆ-ತಾಯಿ. ಮಯೂರಿ ಮದುವೆ ನಂತರ ಈಗ ಈ ವಿಚಾರ ಬಹಿರಂಗವಾಗಿದೆ. ಜೆಕೆ ಅವರ ತಂದೆ-ತಾಯಿಗೆ ಮಯೂರಿ ಅಂದರೆ ತುಂಬಾ ಇಷ್ಟವಂತೆ. ಮಗಳಂತೆ ನೋಡಿಕೊಳ್ಳುತ್ತಿದ್ದ ಮಯೂರಿಯನ್ನು ಧಾರೆ ಎರೆದು ಕೊಟ್ಟಿದ್ದಾರೆ.

  ಜೆ ಕೆ ತಂದೆ-ತಾಯಿ ಕನ್ಯಾದಾನ ಮಾಡಿದ್ದೇಕೆ?

  ಜೆ ಕೆ ತಂದೆ-ತಾಯಿ ಕನ್ಯಾದಾನ ಮಾಡಿದ್ದೇಕೆ?

  ನಟಿ ಮಯೂರಿ ಅವರಿಗೆ ತಂದೆ ಇಲ್ಲ. ಕಳೆದ ಕೆಲವು ವರ್ಷಗಳ ಹಿಂದೆ ತಂದೆ ನಿಧನರಾಗಿದ್ದಾರೆ. ಹಾಗಾಗಿ ಕನ್ಯಾದಾನ ಮಾಡುವವರು ಯಾರು ಇರಲಿಲ್ಲ. ಕುಟುಂಬದವರು ಹುಬ್ಬಳ್ಳಿಯಲ್ಲಿದ್ದಾರೆ. ಲಾಕ್ ಡೌನ್ ಇರುವುದರಿಂದ ಬೆಂಗಳೂರಿಗೆ ಬಂದು ಕನ್ಯಾದಾನ ಮಾಡಲು ಸಾದ್ಯವಾಗಿಲ್ಲ.

  ಜೆಕೆ ತಾಯಿ ಹೇಳಿದ್ದೇನು?

  ಜೆಕೆ ತಾಯಿ ಹೇಳಿದ್ದೇನು?

  ಕನ್ಯಾದಾನ ಮಾಡುವುದು ಯಾರು ಎಂದು ಮಯೂರಿ ಮತ್ತು ಅವರ ತಾಯಿ ಚಿಂತಿಸುತ್ತಿದ್ದರಂತೆ. ಇದೆ ವಿಚಾರವನ್ನು ನಟ ಜೆ.ಕೆ ಬಳಿ ಹೇಳಿಕೊಂಡಿದ್ದಾರೆ. ಮಯೂರಿ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದ ಜೆಕೆ ಪಕ್ಕದಲ್ಲಿಯೆ ಇದ್ದ ಅಮ್ಮನಿಗೆ ಫೋನ್ ಕೊಟ್ಟಿದ್ದಾರೆ. ಆಗ ಜೆಕೆ ಪೋಷಕರು ನಾವಿರುವಾಗ ಯಾಕೆ ಯೋಚಿಸುತ್ತೀರಿ. ನಾವೆ ಧಾರೆ ಎರೆದು ಕೊಡ್ತೀವಿ ಅಂತ ಹೇಳಿದ್ದಾರೆ. ಮಾತಿನಂತೆ ಜೆಕೆ ಅಪ್ಪ-ಅಮ್ಮ ಕನ್ಯಾದಾನ ಮಾಡಿಕೊಟ್ಟಿದ್ದಾರೆ.

  ಜಗತ್ತಿನ ಸುಂದರ ಮಹಿಳೆ ಎಂದು ಫೀಲ್ ಮಾಡಿಸಿದ ಪತಿಗೆ ಧನ್ಯವಾದ ತಿಳಿಸಿದ ಮಯೂರಿಜಗತ್ತಿನ ಸುಂದರ ಮಹಿಳೆ ಎಂದು ಫೀಲ್ ಮಾಡಿಸಿದ ಪತಿಗೆ ಧನ್ಯವಾದ ತಿಳಿಸಿದ ಮಯೂರಿ

  ರಾತ್ರಿ 3 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ ಮದುವೆ

  ರಾತ್ರಿ 3 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ ಮದುವೆ

  ಮಯೂರಿ ಮದುವೆ ಇದೆ ತಿಂಗಳು ಜೂನ್ 12ರಂದು ನೆರವೇರಿದೆ. ರಾತ್ರಿ 3ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ ಮಯೂರಿ ಗೆಳೆಯ ಅರುಣ್ ಜೊತೆ ಸಪ್ತಪದಿ ತುಳಿದಿದ್ದಾರೆ. ಜೆ.ಕೆ ಅವರ ತಂದೆ-ತಾಯಿ ರಾತ್ರಿ 11ಗಂಟೆಗೆ ಮಯೂರಿ ಮನೆಗೆ ಬಂದು ಎಲ್ಲಾ ಶಾಸ್ತ್ರಗಳಲ್ಲಿಯೂ ಭಾಗಿಯಾಗಿ ಕನ್ಯಾದಾನ ಮಾಡಿ ಕೊಟ್ಟಿದ್ದಾರೆ. ಮದುವೆಯಲ್ಲಿ ನಟ ಜೆಕೆ ಕೂಡ ಭಾಗಿಯಾಗಿ ನವ ಜೋಡಿಗೆ ಶುಭಹಾರೈಸಿದ್ದಾರೆ.

  English summary
  Actor JK's parents are done wedding rituals in Mayuri wedding. Actress Mayuri married to long time boyfriend Arun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X