twitter
    For Quick Alerts
    ALLOW NOTIFICATIONS  
    For Daily Alerts

    46 ವರ್ಷದ ಹಿಂದೆ ರಾಜ್‌ಕುಮಾರ್ ಹೇಳಿದ್ದ ಮಾತು ನೆನಪಿಸಿಕೊಂಡ ಕಮಲ್ ಹಾಸನ್

    |

    ಕಮಲ್ ಹಾಸನ್ ನಟಿಸಿರುವ 'ವಿಕ್ರಂ' ಸಿನಿಮಾ ಇಂದು (ಜೂನ್ 03) ಬಿಡುಗಡೆ ಆಗಿ, ಬಹಳ ಒಳ್ಳೆಯ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಕಮಲ್ ಹಾಸನ್‌ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು, ಸಿನಿಮಾ ವಿಮರ್ಶಕರು.

    Recommended Video

    ಬೆಂಗಳೂರಿನ ಬಗ್ಗೆ ಸವಿ ಸವಿ ನೆನಪು ಹಂಚಿಕೊಂಡ ಕಮಲ್ ಹಾಸನ್ | Vikram #kamalhaasan

    'ವಿಕ್ರಂ' ಸಿನಿಮಾದ ಪ್ರಚಾರಕ್ಕಾಗಿ ನಿನ್ನೆಯಷ್ಟೆ ಬೆಂಗಳೂರಿಗೆ ಬಂದಿದ್ದರು ಕಮಲ್ ಹಾಸನ್. ಕರ್ನಾಟಕಕ್ಕೂ ಕಮಲ್‌ ಹಾಸನ್‌ಗೂ ಇರುವ ನಂಟು ಬಹಳ ಹಳೆಯದ್ದು, ಕೆಲವಾರು ಅತ್ಯುತ್ತಮ ಕನ್ನಡ ಸಿನಿಮಾಗಳಲ್ಲಿ ಕಮಲ್ ಹಾಸನ್ ನಟಿಸಿದ್ದಾರೆ.

    ಕಾರ್ನಾಡ್, ಕಾರಂತ್, ವಿಂಡ್ಸರ್‌ಮ್ಯಾನರ್, ಕೊಳ್ಳೆಗಾಲ: ಬೆಂಗಳೂರಲ್ಲಿ ಹಳೆಯ ನೆನಪುಗಳಿಗೆ ಜಾರಿದ ಕಮಲ್ಕಾರ್ನಾಡ್, ಕಾರಂತ್, ವಿಂಡ್ಸರ್‌ಮ್ಯಾನರ್, ಕೊಳ್ಳೆಗಾಲ: ಬೆಂಗಳೂರಲ್ಲಿ ಹಳೆಯ ನೆನಪುಗಳಿಗೆ ಜಾರಿದ ಕಮಲ್

    ಬೆಂಗಳೂರಿಗೆ ಬಂದಿದ್ದ ಕಮಲ್ ಹಾಸನ್ ಬೆಂಗಳೂರಿನೊಟ್ಟಿಗೆ ತಮಗೆ ಇರುವ ಅವಿನಾಭಾವ ನಂಟಿನ ಬಗ್ಗೆ ಮಾತನಾಡಿದರು. ಗಿರೀಶ್ ಕಾರ್ನಾಡ್, ಬಿವಿ ಕಾರಂತ, ಸುಚಿತ್ರ ಫಿಲಂ ಸೊಸೈಟಿ, ಕೊಳ್ಳೆಗಾಲದಲ್ಲಿ ಶೂಟಿಂಗ್, ಪರಾಗ್ ಹೋಟೆಲ್, ಕೆಂಪೆಗೌಡ ಸರ್ಕಲ್‌ನಲ್ಲಿ ಮಾಡುತ್ತಿದ್ದ ಜಾಗಿಂಗ್ ಎಲ್ಲವನ್ನೂ ನೆನಪಿಸಿಕೊಂಡ ಕಮಲ್ ಹಾಸನ್ ಡಾ.ರಾಜ್‌ಕುಮಾರ್ ತಮಗೆ 46 ವರ್ಷಗಳ ಹಿಂದೆ ಹೇಳಿದ್ದ ಮಾತುಗಳನ್ನೂ ನೆನಪು ಮಾಡಿಕೊಂಡರು.

    46 ವರ್ಷದ ಹಿಂದೆ ಆಡಿದ್ದ ಮಾತು ನೆನಪು ಮಾಡಿಕೊಂಡ ಕಮಲ್

    46 ವರ್ಷದ ಹಿಂದೆ ಆಡಿದ್ದ ಮಾತು ನೆನಪು ಮಾಡಿಕೊಂಡ ಕಮಲ್

    ಕರ್ನಾಟಕದೊಂದಿಗಿನ ನಂಟಿನ ಬಗ್ಗೆ ಮಾತನಾಡುತ್ತಾ ರಾಜ್‌ಕುಮಾರ್ ಅವರನ್ನು ನೆನಪು ಮಾಡಿಕೊಂಡ ಕಮಲ್ ಹಾಸನ್, ''ನಾನು ಕೇವಲ 21 ವರ್ಷ ವಯಸ್ಸಿನವನಾಗಿದ್ದಾಗ ಒಬ್ಬ ಅದ್ಭುತ ನಟ ನನ್ನನ್ನು ಮನೆಗೆ ಕರೆಸಿದ್ದರು. 'ಬಹಳ ಚೆನ್ನಾಗಿ ನಟಿಸುತ್ತೀಯ' ಎಂದಿದ್ದರು. ಅವರೇ ಡಾ.ರಾಜ್‌ಕುಮಾರ್. ಅಂಥಹಾ ದೊಡ್ಡ ವ್ಯಕ್ತಿ ನನ್ನನ್ನು 'ನೀವು' ಎಂದು ಸಂಭೋದಿಸುತ್ತಿದ್ದರು'' ಎಂದು ನೆನಪು ಮಾಡಿಕೊಂಡರು ಕಮಲ್ ಹಾಸನ್.

    ''ನನ್ನ ಮೊದಲ ನಿರ್ಮಾಣ ಸಂಸ್ಥೆಯನ್ನು ಉದ್ಘಾಟಿಸಿದ್ದು ರಾಜ್‌ಕುಮಾರ್''

    ''ನನ್ನ ಮೊದಲ ನಿರ್ಮಾಣ ಸಂಸ್ಥೆಯನ್ನು ಉದ್ಘಾಟಿಸಿದ್ದು ರಾಜ್‌ಕುಮಾರ್''

    ''ನನ್ನ ಮೊದಲ ನಿರ್ಮಾಣ ಸಂಸ್ಥೆ 'ರಾಜಪಾರ್ವೈ' ಅನ್ನು ಉದ್ಘಾಟಿಸಿದ್ದು ಡಾ ರಾಜ್‌ಕುಮಾರ್. ನಾನು ಇಲ್ಲಿ 'ಪುಷ್ಪಕ ವಿಮಾನ' ಮಾಡಿದಾಗ ಮೊದಲ ದಿನ ಬಂದು ನನ್ನ ಬೆನ್ನುತಟ್ಟಿದ್ದು ಡಾ ರಾಜ್‌ಕುಮಾರ್. ಅವರೊಬ್ಬ ಅದ್ಭುತ ವ್ಯಕ್ತಿ. ಅಷ್ಟು ದೊಡ್ಡ ನಟರಾಗಿದ್ದರೂ ಎಂಥಹಾ ವಿನಯ ಅವರದ್ದು, ಈಗ ಅವಕಾಶ ಕೇಳಲು ಬಂದಿದ್ದಾರೇನೋ ಎಂಬಂತೆ ಬಾಗಿ ವಿನಯದಿಂದ ಮಾತನಾಡುತ್ತಿದ್ದರು. ನನಗೆ ಆಗ ಕೇವಲ 27 ವರ್ಷ ವಯಸ್ಸು, ಅವರ ಮನೆಗೆ ಹೋದರೆ, 'ಬನ್ನಿ, ಬನ್ನಿ' ಎಂದು ವಿನಯದಿಂದ ಆತ್ಮೀಯತೆಯಿಂದ ಕರೆಯುತ್ತಿದ್ದರು'' ಎಂದು ನೆನಪಿಸಿಕೊಂಡಿದ್ದಾರೆ ಕಮಲ್ ಹಾಸನ್.

    ''ತಮ್ಮ ಒಳ್ಳೆಯತನವನ್ನು ಮಕ್ಕಳಿಗೆ ನೀಡಿ ಹೋಗಿದ್ದಾರೆ''

    ''ತಮ್ಮ ಒಳ್ಳೆಯತನವನ್ನು ಮಕ್ಕಳಿಗೆ ನೀಡಿ ಹೋಗಿದ್ದಾರೆ''

    ''ರಾಜ್‌ಕುಮಾರ್ ಜೊತೆಗೆ ಹಲವು ಅದ್ಭುತ ಕ್ಷಣಗಳನ್ನು ನಾನು ಕಳೆದಿದ್ದೇನೆ. ಇತರ ನಟರನ್ನು ಹೇಗೆ ಗೌರವಿಸಬೇಕು ಎಂಬುದನ್ನು ನಾನು ಅವರಿಂದ ಕಲಿತಿದ್ದೇನೆ. ಎಲ್ಲದಕ್ಕಿಂತಲೂ ಮುಖ್ಯವಾದುದೆಂದರೆ ಅವರು ತಮ್ಮ ಆ ಗುಣವನ್ನು ಅವರ ಮಕ್ಕಳಿಗೆ ನೀಡಿ ಹೋಗಿದ್ದಾರೆ. ವಿನಯದಿಂದ ಇರುವುದಕ್ಕಿಂತಲೂ ದೊಡ್ಡತನವೆಂದರೆ ತಮ್ಮ ಆ ಒಳ್ಳೆಯತನವನ್ನು ತಮ್ಮ ಮಕ್ಕಳಿಗೆ ಕೊಟ್ಟು ಹೋಗಿದ್ದಾರೆ, ಅವರ ಮಕ್ಕಳು ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ'' ಎಂದಿದ್ದಾರೆ ಕಮಲ್ ಹಾಸನ್.

    ''ಪುನೀತ್ ಜೊತೆ ಸಿನಿಮಾ ಮಾಡುತ್ತಿದ್ದೆನೋ ಏನೋ?''

    ''ಪುನೀತ್ ಜೊತೆ ಸಿನಿಮಾ ಮಾಡುತ್ತಿದ್ದೆನೋ ಏನೋ?''

    ಪುನೀತ್ ರಾಜ್‌ಕುಮಾರ್ ಬಗ್ಗೆಯೂ ಮಾತನಾಡಿದ ಕಮಲ್ ಹಾಸನ್, ''ಪುನೀತ್ ಕಾಲವಾದ ಬಹಳ ದಿನಗಳ ಬಳಿಕ ನಾನು ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ್ದೆ. ಅಣ್ಣಾವ್ರ ಕುಟುಂಬ ಒಂದು ರೀತಿ ನಮ್ಮದೇ ಕುಟುಂಬದ ರೀತಿ. ಈ ಮಗು (ಅಪ್ಪು)ವನ್ನು ನೀವು ದೊಡ್ಡ ಸ್ಟಾರ್ ಮಾಡಿದಿರಿ. ಆದರೆ ಕೆಲವೊಮ್ಮೆ ಅನಿಸುತ್ತದೆ ದೇವರು ಬೇರೆಯದೇ ಏನೋ ಉದ್ದೇಶ ಹೊಂದಿದ್ದಾನೆ ಎಂದು. ಆದರೆ ಪುನೀತ್ ಬದುಕಿದ್ದಿದ್ದರೆ ಬಹುಷಃ ಅವರೊಟ್ಟಿಗೆ ನಾನು ಸಿನಿಮಾ ಮಾಡಿರುತ್ತಿದ್ದೆನೋ ಏನೋ?'' ಎಂದಿದ್ದಾರೆ ಕಮಲ್ ಹಾಸನ್. ಪುನೀತ್ ರಾಜ್‌ಕುಮಾರ್ ಅನ್ನು ಎತ್ತಿ ಆಡಿಸಿದವರಲ್ಲಿ ಕಮಲ್ ಹಾಸನ್ ಒಬ್ಬರು.

    English summary
    Actor Kamal Haasan remembers dr Rajkumar and Puneeth Rajkumar. He said I experienced many good times with Dr Rajkumar.
    Friday, June 3, 2022, 14:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X