'ಬಿಂದಿ, ಸಿಂಧೂರ, ಮಂಗಳಸೂತ್ರ' ಧರಿಸಿದ ವಿಜ್ಞಾನಿಗಳನ್ನು ಶ್ಲಾಘಿಸಿದ ನಟಿ ಕಂಗನಾ ರನೌತ್
ಚಂದ್ರಯಾನ-3 ಮಿಷನ್‌ನಲ್ಲಿ ಕೆಲಸ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) 'ಪ್ರಮುಖ ವಿಜ್ಞಾನಿ'ಗಳನ್ನು ಬಹುಭಾಷಾ ನಟಿ ಕಂಗನಾ ರನೌತ್ ಶ್ಲಾಘಿಸಿದ್ದಾರೆ. ಭಾನುವಾರ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಮಹಿಳಾ ವಿಜ್ಞಾನಿಗಳ ಗುಂಪಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇಸ್ರೋ ಮಹಿಳಾ ವಿಜ್ಞಾನಿಗಳ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ, ಅವರೆಲ್ಲರೂ ಕ್ಯಾಮೆರಾಗೆ ಪೋಸ್ ಕೊಟ್ಟು ಚಂದ್ರಯಾನದ ಯಶಸ್ಸನ್ನು ಸಂಭ್ರಮಿಸುತ್ತಿದ್ದಾರೆ. ಮಹಿಳಾ ಇಸ್ರೋ ವಿಜ್ಞಾನಿಗಳೆಲ್ಲರೂ ಸೀರೆಯಲ್ಲಿ ಇದ್ದು, ಹಣೆಗೆ ಬಿಂದಿ, ಕುಂಕುಮ ಹಚ್ಚಿದ್ದಾರೆ.

ಇದನ್ನೇ ಮುಖ್ಯವಾಗಿ ಪರಿಗಣಿಸಿರುವ ನಟಿ ಕಂಗನಾ, ಚಿತ್ರದ ಜೊತೆಗೆ, "ಭಾರತದ ಪ್ರಮುಖ ವಿಜ್ಞಾನಿಗಳು, ಇವರೆಲ್ಲರೂ ಬಿಂದಿ, ಸಿಂಧೂರ್ ಮತ್ತು ಮಂಗಳಸೂತ್ರ ಧರಿಸಿದ್ದಾರೆ. ಸರಳ ಜೀವನ ಮತ್ತು ಉನ್ನತ ಚಿಂತನೆಯ ಸಾರಾಂಶ ಭಾರತೀಯತೆಯ ನಿಜವಾದ ಸಾರ" ಎಂದು ಹೇಳಿದ್ದು, ರಾಷ್ಟ್ರ ಧ್ವಜದ ಎಮೋಜಿಗಳನ್ನು ಬಳಸಿದ್ದಾರೆ.
ಚಂದ್ರಯಾನ-3
ಭಾರತದ ಮಿಷನ್ ಚಂದ್ರಯಾನ-3 ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವವನ್ನು ಮುಟ್ಟಿದೆ. ದೇಶವನ್ನು ನಾಲ್ಕು ವಿಶೇಷ ದಾಖಲೆಗಳಿಗೆ ಈ ಸಾಧನೆನ ಎಡೆ ಮಾಡಿದೆ. ಗುರುತು ಹಾಕದ ಮೇಲ್ಮೈಯಲ್ಲಿ ಇಳಿದ ಮೊದಲ ದೇಶ ಭಾರತವಾಗಿದೆ. ದೋಷರಹಿತ 41 ದಿನಗಳ ಪ್ರಯಾಣದ ನಂತರ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡ್ ಆಗಿದೆ. ಅಮೆರಿಕಾ, ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಂತರ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡ ನಾಲ್ಕನೇ ದೇಶ ಭಾರತವಾಗಿದೆ.
ಚಂದ್ರಯಾನ-3ರ ನಾರಿ ಶಕ್ತಿ ಕುರಿತು ಪ್ರಧಾನಿ ಮೋದಿ ಮಾತು
ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಯಾನ-3 ಮಹಿಳಾ ಶಕ್ತಿಗೆ ಜೀವಂತ ಉದಾಹರಣೆಯಾಗಿದೆ ಎಂದು ಶ್ಲಾಘಿಸಿದ್ದರು. ಹಲವು ಮಹಿಳಾ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ನೇರವಾಗಿ ಈ ಮಿಷನ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದರು. ತಮ್ಮ ಮಾಸಿಕ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ, ಪ್ರಧಾನಿ ಮೋದಿ ಅವರು ಭಾರತದ ಹೆಣ್ಣುಮಕ್ಕಳು ಈಗ ಬಾಹ್ಯಾಕಾಶಕ್ಕೂ ಹಾರಲಿದ್ದಾರೆ ಎಂದು ಭರವಸೆ ನೀಡಿದ್ದರು.

ಕಂಗನಾ ರನೌತ್ ಅವರ ಮುಂಬರುವ ಚಿತ್ರಗಳು
ಪಿ ವಾಸು ಅವರ ನಿರ್ದೇಶನದ ಚಂದ್ರಮುಖಿ 2 ರಲ್ಲಿ ಕಂಗನಾ ರನೌತ್ ನಟ, ನಿರ್ದೇಶಕ ಲಾರೆನ್ಸ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ರಜನಿಕಾಂತ್ ಮತ್ತು ಜ್ಯೋತಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಸೂಪರ್ ಹಿಟ್ ತಮಿಳು ಹಾರರ್ ಚಂದ್ರಮುಖಿಯ ಸೀಕ್ವೆಲ್ ಆಗಿದೆ.
ಚಂದ್ರಮುಖಿ 2 ರಲ್ಲಿ, ಕಂಗನಾ ರನೌತ್ ತನ್ನ ಸೌಂದರ್ಯ ಮತ್ತು ನೃತ್ಯಕ್ಕೆ ಹೆಸರುವಾಸಿಯಾಗಿದ್ದ ನೃತ್ಯಗಾರ್ತಿಯ ಪಾತ್ರವನ್ನು ಮಾಡಲಿದ್ದಾರೆ. ಅವರ ಎದುರು ರಾಜನಾಗಿ ರಾಘವ ಲಾರೆನ್ಸ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಸಿನಿಮಾದ ಸ್ವಾಗತಾಂಜಲಿ ಹಾಡು ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಇದಾದ ನಂತರ ಕಂಗನಾ, ತೇಜಸ್ ಗಿಲ್ ಅವರ ಸುತ್ತ ಸುತ್ತುವ ತೇಜಸ್‌ನಲ್ಲಿ ಭಾರತೀಯ ವಾಯುಪಡೆಯ ಪೈಲಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸರ್ವೇಶ್ ಮೇವಾರ ಬರೆದು ನಿರ್ದೇಶಿಸಿರುವ ಈ ಚಿತ್ರವು ಅಕ್ಟೋಬರ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
ಇದರ ಹೊರತಾಗಿ, ಕಂಗನಾ ರನೌತ್ ಎಮರ್ಜೆನ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅವರು ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಮರ್ಜೆನ್ಸಿ ಆಕೆಯ ಮೊದಲ ನಿರ್ದೇಶನದ ಚಿತ್ರವಾಗಿದೆ. ಚಿತ್ರದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ವಿಶಾಕ್ ನಾಯರ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನವೆಂಬರ್ 24ಕ್ಕೆ ತೆರೆಗೆ ಬರಲಿದೆ.


Click it and Unblock the Notifications











