ತಂದೆ ಸಾವಿನ ಬಳಿಕ ಕಾಶೀನಾಥ್ ಪುತ್ರ ಅಭಿಮನ್ಯು ಹೊಸ ಹೆಜ್ಜೆ
Recommended Video
''ನಮ್ಮ ತಂದೆ ನನಗೆ ಹೇಳಿರುವುದು ಒಂದೇ. ಜೀವನದಲ್ಲಿ ಏನೋ ಒಂದು ಆಯ್ತು ಎನ್ನುವ ಕಾರಣಕ್ಕೆ ಕುಗ್ಗಿ ಹೋಗಬೇಡ. ಆ ರೀತಿ ಆಗಿ ಬಿಟ್ಟರೆ ಜೀವನದಲ್ಲಿ ಏನು ಮಾಡಲು ಸಾಧ್ಯವಿಲ್ಲ. ಹಿಂದೆ ಆಗಿದ್ದನ್ನು ಮರೆತು ಮುಂದೆ ಏನಾಗಬೇಕು ಎಂಬುದರ ಬಗ್ಗೆ ಯೋಜನೆ ಮಾಡು ಎಂದಿದ್ದರು.''
ಸರಿಯಾಗಿ ಒಂದು ವರ್ಷದ ಹಿಂದೆ ತಂದೆಯ ಸಾವಿನ ಬಳಿಕ ತಮ್ಮ ಕುಟುಂಬ ಸ್ಥಿತಿಯ ಬಗ್ಗೆ ಕಾಶೀನಾಥ್ ಪುತ್ರ ಅಭಿಮನ್ಯು 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ್ದರು. ಆ ಸಂದರ್ಶನದಲ್ಲಿ ತಮ್ಮ ತಂದೆ ಹೇಳಿದ್ದ ಈ ಮಾತುಗಳನ್ನು ನೆನಪು ಮಾಡಿಕೊಂಡಿದ್ದರು.
ಈಗ ಆ ಮಾತಿನ ರೀತಿ ಏನೇ ದುಃಖ, ನೋವು ಇದ್ದರೂ, ಎಲ್ಲವನ್ನು ಮರೆತು ಮುಂದೆ ಸಾಗುತ್ತಿದ್ದಾರೆ. 7 ವರ್ಷಗಳ ನಂತರ ಅಭಿಮನ್ಯು ಕಾಶೀನಾಥ್ ಹೊಸ ಸಿನಿಮಾ ಶುರು ಮಾಡುತ್ತಿದ್ದಾರೆ. ಹೀಗಾಗಿ, ಇದು ಅವರ ರೀ ಲಾಂಚ್ ಸಿನಿಮಾ ಎಂದೇ ಹೇಳಬಹುದಾಗಿದೆ.

ಅಭಿಮನ್ಯು ಕಾಶೀನಾಥ್ ಹೊಸ ಚಿತ್ರ
ನಟ ಕಾಶೀನಾಥ್ ಮಗ ಅಭಿಮನ್ಯು ಕಾಶೀನಾಥ್ ಹೊಸ ಸಿನಿಮಾ ಪ್ರಾರಂಭ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಕಿರಣ್ ಸೂರ್ಯ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ದೇವಕಿ' ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಇವರು, ಈಗ ಸ್ವಾತಂತ್ರ್ಯ ನಿರ್ದೇಶಕರಾಗಿದ್ದಾರೆ. ಸುದರ್ಶನ ಆರ್ಟ್ ಬ್ಯಾನರ್ ನಲ್ಲಿ ನಂದೀಶ್ ಗೌಡ ಮತ್ತು ಜಿತಿನ್ ಜಿ ಪಟೇಲ್ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದ ಟೈಟಲ್ ನಿರ್ಧಾರ ಆಗಿಲ್ಲ
ಸಿನಿಮಾದ ಬಗ್ಗೆ ವಿವರ ಹಂಚಿಕೊಂಡ ನಿರ್ದೇಶಕ ಕಿರಣ್ ಸೂರ್ಯ ಸಿನಿಮಾ ಶೀರ್ಷಿಕೆ ಇನ್ನು ನಿಗದಿ ಮಾಡಿಲ್ಲ ಎಂದರು. ದಸರಾ ಹಬ್ಬದ ವೇಳೆಗೆ ಒಬ್ಬ ಸ್ಟಾರ್ ರಿಂದ ಚಿತ್ರದ ಟೈಟಲ್ ಲಾಂಚ್ ಮಾಡಿಸುವ ಪ್ಲಾನ್ ಮಾಡಿದ್ದಾರಂತೆ. ಅಂದಹಾಗೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಸಿನಿಮಾವಾಗಿದೆ.

ಅಭಿಮನ್ಯು ಆಯ್ಕೆ ಹೇಗೆ?
ಸಿನಿಮಾದ ನಾಯಕ ಅಭಿಮನ್ಯು ಕಾಶೀನಾಥ್ ಬಗ್ಗೆ ಮಾತನಾಡಿದ ಕಿರಣ್ ಸೂರ್ಯ ತಮ್ಮ ಕಥೆಗೆ ತಕ್ಕ ಹೀರೋ ಎಂಬ ಕಾರಣಕ್ಕೆ ಆಯ್ಕೆ ಮಾಡಿದರಂತೆ. ಚಿತ್ರದಲ್ಲಿ ಅಭಿಮನ್ಯು ಸ್ಪೆಷಲ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸೋಷಿಯಲ್ ಮೀಡಿಯಾದಲ್ಲಿ ಕಾಶೀನಾಥ್ ಅವರ ಫೋಟೋ ನೋಡುವ ವೇಳೆ ಅವರ ಮಗನೇ ಚಿತ್ರದ ನಾಯಕನಾಗರೇ ಹೇಗೆ ಎನ್ನುವ ಐಡಿಯಾ ನಿರ್ದೇಶಕರಿಗೆ ಬಂದಿದೆ.

ಆಡಿಷನ್ ಮೂಲಕ ನಾಯಕಿ ಆಯ್ಕೆ
ನಾಯಕಿಯ ಆಯ್ಕೆ ಬಾಕಿ ಇದ್ದು, ಆಡಿಷನ್ ಮಾಡುವ ಪ್ಲಾನ್ ಇದೆಯಂತೆ. ಉಳಿದಂತೆ, ಗೌತಮ್ ಮನು ಕ್ಯಾಮರ್ ವರ್ಕ್, ಆರ್ ಎಸ್ ಗಣೇಶ್ ನಾರಾಯಣ್ ಮ್ಯೂಸಿಕ್, ರವಿಚಂದ್ರನ್ ಎಡಿಟಿಂಗ್ ಮಾಡುತ್ತಿದ್ದಾರೆ. ಏಳು ವರ್ಷದ ಹಿಂದೆ ಅಪ್ಪನ ನಿರ್ದೇಶನದಲ್ಲಿ '12 AM' ಎಂಬ ಚಿತ್ರ ಮಾಡಿದ್ದ ಅಭಿಮನ್ಯು ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











