For Quick Alerts
  ALLOW NOTIFICATIONS  
  For Daily Alerts

  ಅಭಿಮನ್ಯು ಕಾಶಿನಾಥ್ ಕಮ್ ಬ್ಯಾಕ್ ಸಿನಿಮಾ ಶುಭಾರಂಭ

  |

  7 ವರ್ಷದ ನಂತರ ನಟ ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ಹೊಸ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇತ್ತೀಚಿಗಷ್ಟೆ ಬಂದಿತ್ತು. ಇದೀಗ ಈ ಸಿನಿಮಾದ ಶುಭಾರಂಭವಾಗಿದೆ. ಸಿನಿಮಾದ ಸ್ಕ್ರಿಪ್ಟ್ ಪೂಜೆಯನ್ನು ಸರಳವಾಗಿ ಮಾಡಲಾಗಿದೆ.

  ಚಿತ್ರದ ಸ್ಕ್ರಿಪ್ಟ್ ಫೈನಲ್ ಆಗಿದ್ದು, ಅದರ ಪೂಜೆ ನಿನ್ನೆ (ಅಕ್ಟೋಬರ್ 20) ಬನಶಂಕರಿಯ ದೇವಸ್ಥಾನದಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಚಿತ್ರತಂಡ ಭಾಗಿಯಾಗಿದೆ. ಮುಂದಿನ ವಾರ ಸಿನಿಮಾದ ಟೈಟಲ್ ಘೋಷಣೆ ಮಾಡುವ ಪ್ಲಾನ್ ಇದೆಯಂತೆ. ದೊಡ್ಡ ಸ್ಟಾರ್ ನಟನಿಂದ ಟೈಟಲ್ ಅನೌನ್ಸ್ ಆಗಲಿದೆ.

  ತಂದೆ ಸಾವಿನ ಬಳಿಕ ಕಾಶೀನಾಥ್ ಪುತ್ರ ಅಭಿಮನ್ಯು ಹೊಸ ಹೆಜ್ಜೆತಂದೆ ಸಾವಿನ ಬಳಿಕ ಕಾಶೀನಾಥ್ ಪುತ್ರ ಅಭಿಮನ್ಯು ಹೊಸ ಹೆಜ್ಜೆ

  ಟೈಟಲ್ ಲಾಂಚ್, ಟೀಸರ್ ಲಾಂಚ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ನಂತರ ಸಿನಿಮಾ ಮುಹೂರ್ತ ನಡೆಯಲಿದೆ. ಮಡಕೇರಿಯಲ್ಲಿ ಸಿನಿಮಾದ ಫೋಟೋ ಶೂಟ್ ಮಾಡಲಿದ್ದಾರೆ. ಹೀರೋಯಿನ್ ಹಾಗೂ ಇತರ ಪಾತ್ರಗಳಿಗೆ ಆಡಿಷನ್ಸ್ ಮಾಡಲಾಗುತ್ತಿದೆ.

  ಅಂದಹಾಗೆ, ಈ ಸಿನಿಮಾವನ್ನು ಕಿರಣ್ ಸೂರ್ಯ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ದೇವಕಿ' ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕಿರಣ್ ಕೆಲಸ ಮಾಡಿದ್ದರು.ದರ್ಶನ ಆರ್ಟ್ ಬ್ಯಾನರ್ ನಲ್ಲಿ ನಂದೀಶ್ ಗೌಡ ಮತ್ತು ಜಿತಿನ್ ಜಿ ಪಟೇಲ್ ನಿರ್ಮಾಣ ಮಾಡುತ್ತಿದ್ದಾರೆ.

  Actor Kashinath Son Abhimanyu New Movie Script Pooja Done

  ಕಾಶೀನಾಥ್ ಕುಟುಂಬದ ಪರಿಸ್ಥಿತಿ ಈಗ ಹೇಗಿದೆ? : ಕಾಶೀ ಪುತ್ರನ ನೋವಿನ ನುಡಿಗಳಿವು!ಕಾಶೀನಾಥ್ ಕುಟುಂಬದ ಪರಿಸ್ಥಿತಿ ಈಗ ಹೇಗಿದೆ? : ಕಾಶೀ ಪುತ್ರನ ನೋವಿನ ನುಡಿಗಳಿವು!

  ಕಿರಣ್ ಸೂರ್ಯ ತಮ್ಮ ಕಥೆಗೆ ತಕ್ಕ ಹೀರೋ ಎಂಬ ಕಾರಣಕ್ಕೆ ಅಭಿಮನ್ಯು ಕಾಶೀನಾಥ್ ಅವರನ್ನು ಆಯ್ಕೆ ಮಾಡಿದರಂತೆ. ಸೋಷಿಯಲ್ ಮೀಡಿಯಾದಲ್ಲಿ ಕಾಶೀನಾಥ್ ಅವರ ಫೋಟೋ ನೋಡುವ ವೇಳೆ ಅವರ ಮಗನೇ ಚಿತ್ರದ ನಾಯಕನಾಗರೇ ಹೇಗೆ ಎನ್ನುವ ಐಡಿಯಾ ನಿರ್ದೇಶಕರಿಗೆ ಬಂದಿದೆ. ಚಿತ್ರದಲ್ಲಿ ಅಭಿಮನ್ಯು ಸ್ಪೆಷಲ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಸಿನಿಮಾವಾಗಿದೆ.

  English summary
  Kannada actor Kashinath son Abhimanyu new movie script pooja done.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X