For Quick Alerts
  ALLOW NOTIFICATIONS  
  For Daily Alerts

  'ಕಿಚ್ಚೋತ್ಸವ 2015' ಆರಂಭ, ಅಭಿಮಾನಿಗಳಿಂದ ಸಂಭ್ರಮಾಚರಣೆ

  By Suneetha
  |

  ಕನ್ನಡ ಚಿತ್ರರಂಗದ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇಂದು (ಸೆಪ್ಟೆಂಬರ್ 2) 42ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

  ನಿನ್ನೆ ಮಧ್ಯರಾತ್ರಿಯಿಂದಲೇ ನಮ್ಮ ಬೆಂಗಳೂರಿನಲ್ಲಿ ಕಿಚ್ಚನ ಅಭಿಮಾನಿಗಳು ಜೆ.ಪಿ ನಗರದಲ್ಲಿರುವ ಸುದೀಪ್ ಅವರ ನಿವಾಸದ ಮುಂದೆ ಹುಟ್ಟುಹಬ್ಬದ ಆಚರಣೆ ಮಾಡಲು ಶುರು ಹಚ್ಚಿಕೊಂಡಿದ್ದರು.[ಬರ್ತಡೆ ಬಾಯ್ ಕಿಚ್ಚ ಸುದೀಪ್ ಗೆ ಹೊಸ ಬಿರುದು]

  ಈ ಮೊದಲೇ ಸಾಮಾಜಿಕ ಜಾಲಾತಾಣಗಳಾದ ಟ್ವಿಟ್ಟರ್ ಮತ್ತು ಫೇಸ್ ಬುಕ್ಕ್ ನಲ್ಲಿ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬರ್ತ್ ಡೇ ವಿಶ್ ಒಂಥರಾ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಜೊತೆಗೆ ಅಭಿಮಾನಿಗಳು ಹುಟ್ಟುಹಬ್ಬದ ಆಚರಣೆಗೆ ಫೇಸ್ ಬುಕ್ಕಿನಲ್ಲಿ ಕೌಂಟ್ ಡೌನ್ ಶುರು ಹಚ್ಚಿಕೊಂಡಿದ್ದಾರೆ.

  ಅಭಿಮಾನಿಗಳ ಇಂತಹ ಪ್ರೀತಿ, ಗೌರವ ಹಾಗೂ ಅಭಿಮಾನಕ್ಕೆ ಮನಸೋತ ಕಿಚ್ಚ ಸುದೀಪ್ ಅವರು ಟ್ವಿಟ್ಟರ್ ಮೂಲಕ ತುಂಬು ಹೃದಯದಿಂದ ಧನ್ಯವಾದ ಸಲ್ಲಿಸಿದ್ದಾರೆ.[ಕಿಚ್ಚನಿಗೆ 'ಕೋಟಿಗೊಬ್ಬ 2' ತಂಡದಿಂದ ಅಚ್ಚರಿಯ ಗಿಫ್ಟ್]

  ಇನ್ನೂ ಅಭಿಮಾನಿಗಳು ನಿನ್ನೆ ಮಧ್ಯರಾತ್ರಿಯಿಂದಲೇ ತಮ್ಮ ಪ್ರೀತಿಯ ಕಿಚ್ಚನ ಜನುಮದಿನವನ್ನು ಆಚರಿಸುವ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಸುದೀಪ್ ಅವರ ಮನೆಯ ಮುಂದೆ 'ಕಿಚ್ಚೋತ್ಸವ 2015' ಅಂತ ಒಂಥರಾ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದ್ದರು.[ಸುದೀಪ್ 'ಕೋಟಿಗೊಬ್ಬ 2' ಚಿತ್ರೀಕರಣ ಆರಂಭ]

  ಅಂದಹಾಗೆ ಚಂದನವನದ ಅಭಿನವ ಚಕ್ರವರ್ತಿ, ಅನ್ನದಾತರ ಅನ್ನದಾತ ಕಿಚ್ಚ ಸುದೀಪ್ ಅವರ 'ಕಿಚ್ಚೋತ್ಸವ 2015' ರ ಸಂಭ್ರಮ ನೋಡಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ..

  ಸಂಭ್ರಮದ 'ಕಿಚ್ಚೋತ್ಸವ 2015'

  ಸಂಭ್ರಮದ 'ಕಿಚ್ಚೋತ್ಸವ 2015'

  ಅಭಿಮಾನಿಗಳು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ 'ಕಿಚ್ಚೋತ್ಸವ 2015' ಮಾಡುವ ಮೂಲಕ ಇಡೀ ಹಬ್ಬದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಚಿತ್ರದಲ್ಲಿ ಮದುವೆ ಮನೆಯಂತೆ ಶೃಂಗಾರಗೊಂಡಿರುವ 'ಕಿಚ್ಚೋತ್ಸವ 2015' ವೇದಿಕೆ

  ಬರ್ತ್ ಡೇ ಸ್ಪೆಷಲ್ ಟೀ ಶರ್ಟ್

  ಬರ್ತ್ ಡೇ ಸ್ಪೆಷಲ್ ಟೀ ಶರ್ಟ್

  ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸ್ಪೆಷಲ್ ಆಗಿ ಟೀ- ಶರ್ಟ್ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 'ಕಿಚ್ಚ' ಎಂದು ಬರೆಯಲಾಗಿದೆ. ಇದು ಸದ್ಯಕ್ಕೆ ಮಾರುಕಟ್ಟೆಯಲ್ಲಿ ದೊರಕುತ್ತಿದೆ. ಬೇಕಾದವರು ಇಲ್ಲಿ ಕೊಟ್ಟಿರುವ ನಂಬರ್ ಗೆ ಫೋನ್ ಮಾಡಬಹುದು.

  ಅಭಿಮಾನಿಗಳೊಂದಿಗೆ ಪ್ರೀತಿಯ ಕಿಚ್ಚ

  ಅಭಿಮಾನಿಗಳೊಂದಿಗೆ ಪ್ರೀತಿಯ ಕಿಚ್ಚ

  ನಮ್ಮ ಪ್ರೀತಿಯ ಕಿಚ್ಚ ಸುದೀಪ್ ಅವರು ನಿನ್ನೆ ಮಧ್ಯರಾತ್ರಿಯೇ ಗೆಳೆಯ ಚಿಕ್ಕಣ್ಣನ ಜೊತೆ ಸೇರಿ ನೂರಾರು ಅಭಿಮಾನಿಗಳೊಂದಿಗೆ ತಮ್ಮ 42ನೇ ಹುಟ್ಟುಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿಕೊಂಡರು.

  'ಕಿಚ್ಚೋತ್ಸವ 2015' ಕೌಂಟ್ ಡೌನ್ ಸ್ಟಾರ್ಟ್

  'ಕಿಚ್ಚೋತ್ಸವ 2015' ಕೌಂಟ್ ಡೌನ್ ಸ್ಟಾರ್ಟ್

  ಅಭಿಮಾನಿಗಳಿಗೆ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಮೇಲಿರುವ ಪ್ರೀತಿ, ಅಭಿಮಾನ ಎಷ್ಟಿದೆ ಅಂದ್ರೆ, ಅವರ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಲು ಕೌಂಟ್ ಡೌನ್ ಶುರು ಹಚ್ಚಿಕೊಂಡಿದ್ದಾರೆ ಅನ್ನೋದಕ್ಕೆ ಈ ಚಿತ್ರವೇ ಸಾಕ್ಷಿ.

  'ಕಿಚ್ಚೋತ್ಸವ 2015' ಕೌಂಟ್ ಡೌನ್-2

  'ಕಿಚ್ಚೋತ್ಸವ 2015' ಕೌಂಟ್ ಡೌನ್-2

  ನಿನ್ನೆಯಿಂದ ಅದ್ಯಾವಾಗ ಮಧ್ಯರಾತ್ರಿ 12 ಗಂಟೆ ಆಗುತ್ತೆ ಅಂತ ಅಭಿಮಾನಿಗಳು ಕೌಂಟ್ ಡೌನ್ ಮಾಡುವ ಮೂಲಕ ಹುಟ್ಟುಹಬ್ಬದ ಆಚರಣೆಗೆ ಕಾತರದಿಂದ ಕಾದಿದ್ದಾರೆ ಅನ್ನೋದನ್ನ ಈ ಚಿತ್ರ ನುಡಿಯುತ್ತಿದೆ

  ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಹೇಗಿದೆ ನೋಡಿ

  ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಹೇಗಿದೆ ನೋಡಿ

  ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಸ್ಪೆಷಲ್ ವಿಷಸ್ ಗಳು ನಿನ್ನೆ ಮಧ್ಯರಾತ್ರಿಯಿಂದಲೇ ಟ್ವಿಟ್ಟರ್ ನಲ್ಲಿ ಹೇಗೆ ಟ್ರೆಂಡ್ ಆಗಿದೆ ಅನ್ನೋದನ್ನ ಈ ಚಿತ್ರ ತೋರಿಸುತ್ತಿದೆ.

   ಕನ್ನಡ-ತಮಿಳು ಹೊಸ ಚಿತ್ರದ ಫಸ್ಟ್ ಲುಕ್ ಪೋಸ್ಟರ್

  ಕನ್ನಡ-ತಮಿಳು ಹೊಸ ಚಿತ್ರದ ಫಸ್ಟ್ ಲುಕ್ ಪೋಸ್ಟರ್

  ಸುದೀಪ್ ಅವರ ಹೊಸ ಚಿತ್ರದ ಶೂಟಿಂಗ ಸಾಗುತ್ತಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಝಲಕ್ ನೋಡಿ. ಜೊತೆಗೆ ಹುಟ್ಟುಹಬ್ಬದ ಸ್ಪೆಷಲ್ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಕೂಡ ಬಿಡುಗಡೆಯಾಗಿದೆ.

  ಟ್ವಿಟ್ಟರ್ ನಲ್ಲಿ ಸುದೀಪ್ ಧನ್ಯವಾದ

  "ನನ್ನ ಪ್ರೀತಿಯ ಗೆಳೆಯರಿಗೆ, ಅಭಿಮಾನಿಗಳೇ ನಿಮ್ಮ ಟ್ವೀಟ್ ಹಾಗೂ ಪ್ರೀತಿಯ ಶುಭಾಶಯಕ್ಕೆ ನನ್ನ ಹೃದಯಪೂರ್ವಕ ವಂದನೆಗಳು. ಮುಂಬೈನಲ್ಲಿ ಶೂಟಿಂಗ್ ಮುಗಿಸಿ, ಬೆಂಗಳೂರಿಗೆ ಹಿಂತಿರುಗುತ್ತೇನೆ. ಎಂದು ಸುದೀಪ್ ಅವರು ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ

  English summary
  Kichcha Sudeep turns 42 years today, September 2. His fans call the day as ‪#‎Kicchothsava 2015‬ and the mid night celebrations in front of Kichcha's residence in Namma Bengaluru has just begun. The birthday wishes started trending from past two days on social networking Facebook and Twitter. Overwhelmed by the love and care Sudeep has given a heartfelt thanks for this fans on Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X