BBK 11: ಬಿಗ್‌ಬಾಸ್ ಶೋನಲ್ಲಿ ಕಿಚ್ಚನಿಗೆ ಅವಮಾನ ಮಾಡಿದ್ಯಾರು? ಬಾದ್‌ಶಾ ನಿರ್ಧಾರಕ್ಕೆ ಕಾರಣವೇನು?

ಈ ಬಾರಿ ಬಿಗ್‌ಬಾಸ್ ಶೋ ಆರಂಭವಾದ ಎರಡೇ ವಾರಕ್ಕೆ ಸುದೀಪ್ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. ರಾತ್ರೋರಾತ್ರಿ ಟ್ವೀಟ್ ಮಾಡಿ ಇದೇ ನನ್ನ ಕೊನೆಯ ಬಿಗ್‌ಬಾಸ್ ಶೋ. ಇನ್ನು ಮುಂದೆ ನಿರೂಪಕನಾಗಿ ಮುಂದುವರೆಯಲ್ಲ ಎಂದುಬಿಟ್ಟಿದ್ದಾರೆ. ಸೀಸನ್ 11 ಶುರುವಾಗುವ ಮುನ್ನವೇ ಸುದೀಪ್ ನಿರೂಪಣೆಗೆ ಗುಡ್‌ಬೈ ಹೇಳುವ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಈಗ ಅದು ನಿಜವಾಗಿದೆ.

ಕನ್ನಡಿಗರಿಗೆ ಬಿಗ್‌ಬಾಸ್ ಅಂದ್ರೆ ಸುದೀಪ್, ಸುದೀಪ್ ಅಂದ್ರೆ ಬಿಗ್‌ಬಾಸ್. ಇದರಲ್ಲಿ ದೂಸ್ರಾ ಮಾತಿಲ್ಲ. ಬಿಗ್‌ಬಾಸ್ ಎನ್ನುವುದು ಶೋ ಹೆಸರು. ಅಲ್ಲಿ ಬಿಗ್‌ಬಾಸ್ ಎನ್ನುವವರು ಯಾರು ಇಲ್ಲ. ಆದರೆ ಅದೊಂದು ಧ್ವನಿ ಇಡೀ ಮನೆಯನ್ನು ನಿಯಂತ್ರಿಸುತ್ತಿರುತ್ತದೆ. ಮನೆಮಂದಿಗೆ ನಿಯಮಗಳನ್ನು ನಿರೂಪಿಸಿ ಆಟ ಆಡಿಸುತ್ತದೆ. ಆದರೆ ಎಷ್ಟೋ ಜನ ಕಿಚ್ಚನೇ ಬಿಗ್‌ಬಾಸ್ ಎಂದುಕೊಂಡಿದ್ದಾರೆ. ಅಷ್ಟರಮಟ್ಟಿಗೆ ಸುದೀಪ್ ಶೋವನ್ನು ಆವರಿಸಿಕೊಂಡಿದ್ದಾರೆ.

Actor Kiccha Sudeep Being Insulted On The bigg boss Set why he decide the quit the show

ಹಿಂದಿಯಲ್ಲಿ ಸಕ್ಸಸ್ ಕಂಡ ಬಿಗ್‌ಬಾಸ್ ಶೋವನ್ನು ಬಳಿಕ ಕನ್ನಡದಲ್ಲಿ ಮಾಡಲು ತೀರ್ಮಾನಿಸಲಾಗಿತ್ತು. ಆಗ ಸಲ್ಮಾನ್ ಖಾನ್ ರೀತಿ ತನ್ನ ವಾಕ್‌ಚಾತುರ್ಯದಿಂದ ಶೋ ನಡೆಸುವವರು ಯಾರು ಎಂದಾಗ ನೆನಪಾಗಿದ್ದು ಕಂಚಿನ ಕಂಠದ ನಟ ಕಿಚ್ಚ ಸುದೀಪ್. ನಿಜ ಹೇಳಬೇಕು ಅಂದ್ರೆ ಸುದೀಪ್ ತಮ್ಮ ನಿರೂಪಣೆಯಿಂದ ಸಲ್ಮಾನ್ ಖಾನ್‌ನ ಕೂಡ ನಿವಾಳಿಸಿ ಬಿಸಾಕಿದರು ಎಂದರೆ ತಪ್ಪಾಗಲ್ಲ. ಇಂತಿಪ್ಪ ಕಿಚ್ಚ ದಿಢೀರ್ ನಾನು ಶೋ ಬಿಡ್ತಾರೆ ಎನ್ನುವುದನ್ನು ವೀಕ್ಷಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ.

ಎಲ್ಲದಕ್ಕೂ ಒಂದು ಅಂತ್ಯ ಎನ್ನುವುದು ಇದ್ದೇ ಇರುತ್ತದೆ. ಸುದೀಪ್ ಕೂಡ ಈ ಹಿಂದೆಯೇ ಬೇರೆ ಯಾರನ್ನಾದರೂ ನಿರೂಪಕರಾಗಿ ಆಯ್ಕೆ ಮಾಡಿಕೊಂಡರೆ ಚೆನ್ನಾಗಿರುತ್ತದೆ. ಇದೇ ಸಲಹೆಯನ್ನು ನಾನು ಕಲರ್ಸ್ ಕನ್ನಡ ಅವರಿಗೂ ಕೊಟ್ಟಿದ್ದೇನೆ ಎಂದಿದ್ದರು. ಹೊಸ ಸೀಸನ್ ಆರಂಭಕ್ಕೂ ಮುನ್ನ ಅಥವಾ ಯಶಸ್ವಿಯಾಗಿ ಸೀಸನ್ ಮುಗಿದ ಬಳಿಕ ಸುದೀಪ್ ಇನ್ನು ಮುಂದೆ ಶೋ ನಿರೂಪಣೆ ಮಾಡಲ್ಲ, ಸಾಕು ಎಂದಿದ್ದರೆ ಪರವಾಗಿಲ್ಲ. ಆದರೆ ಹೊಸ ಸೀಸನ್ ಶುರುವಾದ ಎರಡೇ ದಿನಕ್ಕೆ ಇಂತಾದೊಂದು ಪೋಸ್ಟ್ ಮಾಡಿರುವುದು ಅಚ್ಚರಿ ಮೂಡಿಸಿದೆ.

"ಬಿಗ್‌ಬಾಸ್ ಸೀಸನ್ 11ಕ್ಕೆ ನೀವು ತೋರಿದ ಪ್ರೀತಿಗೆ ಧನ್ಯವಾದ. ಈ ಟಿಆರ್‌ಪಿ, ಕಾರ್ಯಕ್ರಮಕ್ಕೆ ಹಾಗೂ ನನ್ನ ಬಗ್ಗೆ ನಿಮ್ಮ ಪ್ರೀತಿ ಎಂಥದ್ದು ಎಂದು ಹೇಳುತ್ತದೆ. 11 ವರ್ಷಗಳ ಕಾಲ ಒಟ್ಟಿಗೆ ಸಾಗಿದ ಪ್ರಯಾಣ ಇದು. ಬಿಗ್‌ಬಾಸ್ ಕನ್ನಡ ಹೋಸ್ಟ್ ಆಗಿ ಇದು ನನ್ನ ಕೊನೆಯ ಸೀಸನ್. ನನ್ನ ನಿರ್ಧಾರವನ್ನು ನನ್ನ ಕಲರ್ಸ್ ಹಾಗೂ ಇಷ್ಟು ವರ್ಷಗಳಿಂದ ಬಿಗ್‌ಬಾಸ್ ​​ಅನ್ನು ನೋಡಿದ ಎಲ್ಲರೂ ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ. ಈ ಸೀಸನ್ ಯಶಸ್ವಿಗೊಳಿಸೋಣ. ಪ್ರೀತಿಯ ಅಪ್ಪುಗೆ" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ದಿಢೀರನೆ ಸುದೀಪ್ ಈ ನಿರ್ಧಾರಕ್ಕೆ ಕೈಗೊಂಡಿದ್ದು ಯಾಕೆ? ಎಂದು ಸಾಕಷ್ಟು ಜನ ತಲೆ ಕೆಡಿಸಿಕೊಂಡಿದ್ದಾರೆ. ಎಲ್ಲವೂ ಚೆನ್ನಾಗಿ ಇದ್ದಿದ್ದರೆ ಸುದೀಪ್ ಹೀಗೆ ರಾತ್ರಿ ಟ್ವೀಟ್ ಮಾಡುತ್ತಿರಲಿಲ್ಲ. ಅವರಿಗೆ ಬೇಸರ ಮೂಡಿಸುವಂಥದ್ದು ಏನೋ ಆಗಿರಬೇಕು ಎಂದು ಕೆಲವರು ತಲೆ ಕಡೆಸಿಕೊಂಡಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಮಾಡಿರುವ ಟ್ವೀಟ್ ಈ ಅನುಮಾನವನ್ನು ಹೆಚ್ಚಿಸಿದೆ.

"ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ನಿಮ್ಮ ಕಿತ್ತೋದ್ ಆಟಕ್ಕೆ ಸುದೀಪ್ ಬಿಗ್ ಬಾಸ್ ನಿರೂಪಣೆ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸೋಲ್ಲ, ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ, ಮೊದಲು ಬಿಗ್ ಬಾಸ್ ಬಿಡಿ ಇಲ್ಲ, ಬಿಗ್ ಬಾಸ್ ನಿಲ್ಲಬೇಕು. ಅಸಲಿ ವಿಷಯ ನಾಳೆ ಮಾತಾಡ್ತೀನಿ" ಎಂದು ರೂಪೇಶ್ ರಾಜಣ್ಣ ಬರೆದುಕೊಂಡಿದ್ದಾರೆ. ಸದ್ಯ ಈ ಟ್ವೀಟ್ ಭಾರೀ ವೈರಲ್ ಆಗ್ತಿದೆ.

More from Filmibeat

English summary
Reason behind Why Sudeep refuse to host Bigg Boss show from next season, Ex Bigg boss contestant Rupesh Rajanna tweet goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X