ಫೇಸ್ ಬುಕ್ ಗೆ ಎಂಟ್ರಿ ಕೊಟ್ಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್
ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಫೇಸ್ ಬುಕ್ ಗೆ ಎಂಟ್ರಿ ಕೊಟ್ಟಿದ್ದಾರೆ. ಸುದೀಪ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟೀವ್ ಆಗಿರುವ ನಟ. ಆದರೆ ಇದುವರೆಗೂ ಸುದೀಪ್ ಫೇಸ್ ಬುಕ್ ಖಾತೆ ತೆರೆದಿರಲಿಲ್ಲ. ಕಿಚ್ಚ ಹೆಚ್ಚಾಗಿ ಟ್ವಿಟ್ಟರ್ ಅನ್ನೇ ಬಳಸುತ್ತಿದ್ದರು. ಸಿನಿಮಾ ಪ್ರಮೋಷನ್, ಅಭಿಮಾನಿಗಳ ಜೊತೆ ಮಾತುಕತೆಗೆ ಟ್ವಿಟ್ಟರ್ ಅನ್ನೆ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದರು.
ಸುದೀಪ್ ಹತ್ತು ಹರ್ಷಗಳ ಹಿಂದೆಯೆ ಸುದೀಪ್ ಟ್ವಿಟ್ಟರ್ ಖಾತೆ ತೆರೆದಿದ್ದರು. ಸದ್ಯ 2.3 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಸಂಪಾದಿಸಿರುವ ಕಿಚ್ಚ ಈಗ ಫೇಸ್ ಬುಕ್ ಗೆ ಎಂಟ್ರಿ ಕೊಟ್ಟಿದ್ದಾರೆ. ಟ್ವಿಟ್ಟರ್ ಜೊತೆಗೆ ಇನ್ಸ್ಟಾಗ್ರಾಮ್ ನಲ್ಲಿಯೂ ಸುದೀಪ್ ಆಕ್ವೀಟ್ ಆಗಿದ್ದಾರೆ. ಆದರೀಗ ದಿಢೀರನೆ ಕಿಚ್ಚ ಫೇಸ್ ಬುಕ್ ಗೆ ಎಂಟ್ರಿಕೊಟ್ಟಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

ಫೇಸ್ ಬುಕ್ ಲೋಕಕ್ಕೆ ಕಿಚ್ಚನ ಎಂಟ್ರಿ
ಫೇಸ್ ಬುಕ್ ಗೆ ಎಂಟ್ರಿ ಕೊಟ್ಟಿರುವ ಸುದೀಪ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಫೇಸ್ ಬುಕ್ ಖಾತೆಯ ಲಿಂಕ್ ಅನ್ನು ಶೇರ್ ಮಾಡಿದ್ದಾರೆ. ಸುದೀಪ್ ಫೇಸ್ ಬುಕ್ ಗೆ ಕಾಲಿಡುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಫಾಲೋ ಮಾಡುತ್ತಿದ್ದಾರೆ. ಸಾವಿರಗಟ್ಟಲೆ ಲೈಕ್ಸ್ ಹರಿದು ಬಂದಿದೆ.

ಫೇಸ್ ಬುಕ್ ಪೇಜ್ ನಲ್ಲಿ ಕಿಚ್ಚನ ಹೆಸರು
ವಿಶೇಷ ಅಂದರೆ ಸುದೀಪ್ ಫೇಸ್ ಬುಕ್ ಖಾತೆ ಹೆಸರು 'I am K' ಎಂದು ಇದೆ. ಕೆ ಅಂದರೆ ಎಲ್ಲರಿಗೂ ಗೊತ್ತಿರವ ಹಾಗೆ ಕಿಚ್ಚ ಸುದೀಪ್. ಇನ್ನು ಕವರ್ ಫೋಟೋ ಬಾದ್ ಷಾ ಕಿಚ್ಚ ಸುದೀಪ್ ಎಂದು ಇದೆ. ನಮಸ್ಕರಿಸುತ್ತಿರುವ ಪೋಟೋವನ್ನು ಡಿಪಿ ಹಾಕಿದ್ದಾರೆ. ಕಿಚ್ಚ ಸುದೀಪ್ ಹೆಸರಿನಲ್ಲಿ ಟ್ವಿಟ್ಟರ್ ಮತ್ತು ಇನ್ಸ್ಟಾ ಗ್ರಾಮ್ ಪೇಜ್ ಇದೆ.

ಅಭಿಮಾನಿಗಳ ಸಂತಸ
ಸುದೀಪ್ ಫೇಸ್ ಬುಕ್ ಎಂಟ್ರಿ ಕೊಟ್ಟಿರುವ ಬಗ್ಗೆ ಅಭಿಮಾನಿಗಳು ಮತ್ತಷ್ಟು ಸಂತಸ ಪಡುತ್ತಿದ್ದಾರೆ. ಫೇಸ್ ಬುಕ್ ನಲ್ಲಿ ಕಿಚ್ಚನಿಗೆ ಸ್ವಾಗತ ಕೋರುತ್ತಿದ್ದಾರೆ. ಇನ್ಮುಂದೆ ಕಿಚ್ಚ ಫೇಸ್ ಬುಕ್ ನಲ್ಲಿಯೂ ಸಿಗಲಿದ್ದಾರೆ. ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುವ ಜೊತೆಗೆ ಫೇಸ್ ಬುಕ್ ನಲ್ಲಿಯೂ ಸುದೀಪ್ ಅಭಿಮಾನಿಗಳ ಜೊತೆ ಮಾತುಕತೆಗೆ ಇಳಿಯಲಿದ್ದಾರೆ.

ಗೆಳೆಯನಿಂದ ಕಿಚ್ಚ ಟ್ವಿಟ್ಟರ್ ಗೆ ಎಂಟ್ರಿ
ಸುದೀಪ್ ಗೆ ಟ್ವಿಟ್ಟರ್ ಬಗ್ಗೆ ಹೇಳಿಕೊಟ್ಟಿದ್ದು ಗೆಳೆಯ ರಿತೇಶ್ ದೇಶ್ ಮುಖ್ ಹೇಳಿಕೊಟ್ಟಿದ್ದರಂತೆ. ಅವರ ಮೂಲಕವೆ ಸುದೀಪ್ ಟ್ವಿಟ್ಟರ್ ಖಾತೆ ತೆರೆದಿದ್ದರಂತೆ. 'ನಿನ್ನ ಟ್ವಿಟ್ಟರ್ ಖಾತೆ ಏನು''....? ಎಂದು ರಿತೇಶ್ ಕೇಳುತ್ತಿದ್ದಂತೆ ಸುದೀಪ್ ಚಿಕಿತರಾದರಂತೆ. ಏನಿದು ಟ್ವಿಟ್ಟರ್ ಎಂದು ಯೋಚಿಸಿತ್ತಾ ಕೂತರಂತೆ. ಕೊನೆಗೂ ''ಟ್ವಿಟ್ಟರ್ ಖಾತೆನಾ...! ಹಾಗಂದರೇನು?'' ಎಂದು ರತೇಶ್ ಅವರನ್ನು ಸುದೀಪ್ ಕೇಳಿದ್ದರಂತೆ. ಆಗ ಟ್ವಿಟ್ಟರ್ ಬಗ್ಗೆ ಹೇಳಿ ಟ್ವಿಟ್ಟರ್ ಲೋಕಕ್ಕೆ ಪರಿಚಯಿಸಿದ್ದರಂತೆ. ಟ್ವಿಟ್ಟರ್ ಗೆ ಬಂದು 10 ವರ್ಷಗಳ ಬಳಿಕ ಫೇಸ್ ಬುಕ್ ಗೆ ಎಂಟ್ರಿ ಕೊಟ್ಟಿದ್ದಾರೆ.


Click it and Unblock the Notifications











