For Quick Alerts
  ALLOW NOTIFICATIONS  
  For Daily Alerts

  ತನ್ನ ಹುಟ್ಟುಹಬ್ಬದಂದು ಅಕುಲ್ ಬಾಲಾಜಿಗೆ ಐಶಾರಾಮಿ ಬೈಕ್ ಉಡುಗೊರೆ ನೀಡಿದ ಸುದೀಪ್

  |

  ಇಂದು (ಸೆಪ್ಟೆಂಬರ್ 02) ನಟ ಸುದೀಪ್ ಹುಟ್ಟುಹಬ್ಬ. ಮೆಚ್ಚಿನ ನಟನ ಹುಟ್ಟುಹಬ್ಬ ದೊಡ್ಡ ಸಂಖ್ಯೆಯ ಅಭಿಮಾನಿಗಳು ಕಿಚ್ಚನ ಮನೆಯ ಬಳಿ ಸೇರಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಿದ್ದಾರೆ.

  ಹಲವು ಅಭಿಮಾನಿಗಳು ಕೇಕ್, ಉಡುಗೊರೆಗಳನ್ನು ತಂದು ಕಿಚ್ಚನಿಗೆ ನೀಡಿದ್ದಾರೆ. ಆದರೆ ಕಿಚ್ಚ ಮಾತ್ರ ತಮ್ಮ ಹುಟ್ಟುಹಬ್ಬದಂದು ನಟ ಅಕುಲ್ ಬಾಲಾಜಿಗೆ ಉಡುಗೊರೆಯೊಂದನ್ನು ನೀಡಿದ್ದಾರೆ.

  ಮತ್ತೆ ಧಾರಾವಾಹಿಗೆ ಮರಳಿದ ಅಕುಲ್ ಬಾಲಾಜಿ; ಯಾವ ಸೀರಿಯಲ್‌ನಲ್ಲಿ ನಟನೆ?ಮತ್ತೆ ಧಾರಾವಾಹಿಗೆ ಮರಳಿದ ಅಕುಲ್ ಬಾಲಾಜಿ; ಯಾವ ಸೀರಿಯಲ್‌ನಲ್ಲಿ ನಟನೆ?

  ನಟ, ನಿರೂಪಕ ಅಕುಲ್ ಬಾಲಾಜಿಗೆ ಸುದೀಪ್, ತಮ್ಮ ಹುಟ್ಟುಹಬ್ಬದ ದಿನದಂದೇ ದುಬಾರಿ ಬೈಕ್ ಒಂದನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ಕಿಚ್ಚ ತಮಗೆ ಉಡುಗೊರೆ ನೀಡಿದ ಬೈಕ್ ಜೊತೆ ನಿಂತು ಅಕುಲ್ ವಿಡಿಯೋ ಒಂದನ್ನು ಮಾಡಿ ಅಪ್‌ಲೋಡ್ ಮಾಡಿದ್ದಾರೆ.

  ''ನಿನ್ನೆ ಮೊನ್ನೆ ಗಣೇಶೋತ್ಸವ ಆಯ್ತಲ್ಲ ಹಾಗೆ ಇಂದು ಕಿಚ್ಚೋತ್ಸವ. ಅವರ ಹುಟ್ಟುಹಬ್ಬದಂದು ನಾವು ಅವರಿಗೆ ಉಡುಗೊರೆ ನೀಡುತ್ತೇವೆ. ಆದರೆ ಇಂದು ಅವರೇ ನನಗೆ ಉಡುಗೊರೆ ನೀಡಿದ್ದಾರೆ. ಅದುವೇ ಈ ಸುಂದರವಾದ ಬೈಕ್. ಈ ಬೈಕ್ ಉಡುಗೊರೆ ನೀಡಿದ್ದಕ್ಕೆ ನಾನು ಬಹಳ ಆಭಾರಿಯಾಗಿದ್ದೇನೆ'' ಎಂದಿದ್ದಾರೆ ಅಕುಲ್ ಬಾಲಾಜಿ. ವಿಡಿಯೋದಲ್ಲಿ ನಟ ಸುದೀಪ್ ಸಹ ಇದ್ದು, ಅಕುಲ್‌ ಅನ್ನು ತಬ್ಬಿಕೊಂಡು ಧನ್ಯವಾದ ಹೇಳಿದ್ದಾರೆ.

  ಬಿಎಂಡಬ್ಲುನ ಬೈಕ್ ಅನ್ನು ಕಿಚ್ಚ ಅಕುಲ್‌ ಬಾಲಾಜಿಗೆ ಉಡುಗೊರೆಯಾಗಿ ನೀಡಿದ್ದಾರೆ. ಬಿಎಂಡಬ್ಲು ಬೈಕ್‌ನ ಬೆಲೆ ಕನಿಷ್ಟ 3 ರಿಂದ ಐದು ಲಕ್ಷ ಎನ್ನಲಾಗುತ್ತದೆ. KA 05 KR 3666 ನೊಂದಣಿ ಸಂಖ್ಯೆಯ ಈ ಬೈಕ್ 2019 ರಲ್ಲಿ ದಕ್ಷಿಣ ಬೆಂಗಳೂರಿನಲ್ಲಿ ನೊಂದಣಿ ಆಗಿದ್ದು, ಬೈಕ್ ಪ್ರಸ್ತುತ ಅಕುಲ್ ಬಾಲಾಜಿ ಹೆಸರಿನಲ್ಲಿದೆ. ಈ ಬೈಕ್‌ಗೆ ಅಕುಲ್ ಬಾಲಾಜಿ ಎರಡನೇ ಮಾಲೀಕರಾಗಿರುವ ಬಗ್ಗೆಯೂ ವಾಹನ ವೆಬ್‌ಸೈಟ್‌ನಲ್ಲಿ ಮಾಹಿತಿ ಇದೆ.

  ನಟ ಸುದೀಪ್‌ಗೆ ಚಿತ್ರರಂಗದಲ್ಲಿ ಹಲವು ಗೆಳೆಯರಿದ್ದಾರೆ. ಹಲವರಿಗೆ ಆಗಾಗ್ಗೆ ಹೀಗೆ ಉಡುಗೊರೆಗಳನ್ನು ಕಿಚ್ಚ ನೀಡುತ್ತಲಿರುತ್ತಾರೆ. ತಮ್ಮ ಕಾರ್‌ ಡ್ರೈವರ್, ಬಾಡಿ ಗಾರ್ಡ್‌ ಇವರುಗಳಿಗೆಲ್ಲ ಕೆಲ ತಿಂಗಳ ಹಿಂದಷ್ಟೆ ದುಬಾರಿ ಉಡುಗೊರೆಗಳನ್ನು ನಟ ಸುದೀಪ್ ನೀಡಿದ್ದರು. ಈಗ ಅಕುಲ್‌ ಬಾಲಾಜಿಗೆ ನೀಡಿದ್ದಾರೆ.

  English summary
  Actor Kichcha Sudeep gifted BMW bike to actor and anchour Akul Balaji. Actor Akul balaji shared video with Kichcha Sudeep
  Friday, September 2, 2022, 16:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X