ಕೊನೆಗೂ ಕೂಡಿ ಬಂತು ಫ್ಯಾನ್ಸ್ ಕಾಯುತ್ತಿದ್ದ ಘಳಿಗೆ: ದರ್ಶನ್ ನಟನೆಯ 'ಕಾಟೇರ' ನೋಡಲಿದ್ದಾರೆ ಕಿಚ್ಚ ಸುದೀಪ್!
'ಕಾಟೇರ'...... ಈಗ ಎಲ್ಲಿ ನೋಡಿದರೂ ಕಾಟೇರನದ್ದೇ ಹವಾ. ಹೊಸ ವರ್ಷಕ್ಕೂ ಮುನ್ನ ಬಿಡುಗಡೆಯಾದ ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್‌ನ ಈ ಸಿನಿಮಾಕ್ಕೆ ಕನ್ನಡಿಗರು ಭರ್ಜರಿ ಸ್ವಾಗತ ನೀಡಿದ್ದಾರೆ. ಥಿಯೇಟರ್‌ಗಳಲ್ಲಿ ಫ್ಯಾಮಿಲಿ ಆಡಿಯನ್ಸ್ ಅನ್ನು ಕೂರಿಸಿ, ಡಿ ಬಾಸ್ ಫ್ಯಾನ್ಸ್ ಕಾಲರ್ ಎತ್ತಿ ನಡೆಯುವಂತೆ ಮಾಡಿದೆ 'ಕಾಟೇರ'.
ಕಾಟೇರ ಬಿಡುಗಡೆಯಾದ ಕೇವಲ ಏಳೇ ದಿನಕ್ಕೆ ದಾಖಲೆಯ ಗಳಿಕೆ ಕಂಡಿದೆ. 7ನೇ ದಿನ 9.52 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಮೊದಲ ವಾರವೇ ಸಿನಿಮಾ 104.58 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗುತ್ತಿದೆ. ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ 'ಕಾಟೇರ' ಸಿನಿಮಾ ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ. ಇದರ ಬೆನ್ನಲ್ಲೇ ಕನ್ನಡದ ಸ್ಟಾರ್ ನಟರ ಫ್ಯಾನ್ಸ್ ಬಯಸುತ್ತಿದ್ದ ಗುಡ್ ನ್ಯೂಸ್ ಹೊರಬಿದ್ದಿದೆ.

ದಚ್ಚು ಸಿನಿಮಾ ನೋಡ್ತಾರಂತೆ ಕಿಚ್ಚ!
ಸ್ಯಾಂಡಲ್‌ವುಡ್‌ನಲ್ಲಿ ಒಳ್ಳೆ ಗೆಳೆಯರಾಗಿದ್ದ ನಟ ದರ್ಶನ್ ಮತ್ತು ಕಿಚ್ಚ ಸುದೀಪ್ ನಡುವೆ ಕೆಲ ವರ್ಷಗಳಿಂದ ಭಿನ್ನಾಭಿಪ್ರಾಯವಿದೆ ಎನ್ನಲಾಗುತ್ತದೆ. ಇಬ್ಬರನ್ನು ಒಂದು ಮಾಡಲು ಹಲವು ಮಂದಿ ಪ್ರಯತ್ನ ಪಟ್ಟಿದ್ದಾರೆ. ಇದಕ್ಕೆ ಇತ್ತೀಚೆಗೆ ನಡೆದ ಸಂಸದೆ ಸುಮಲತಾ ಅಂಬರೀಷ್ ಅವರ ಹುಟ್ಟುಹಬ್ಬದ ಕಾರ್ಯಕ್ರಮ ಕೂಡ ಒಂದು. ಹಲವು ವರ್ಷಗಳ ನಂತರ ಇಬ್ಬರು ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಇದು ಚಿತ್ರರಂಗ ಮತ್ತು ಫ್ಯಾನ್ಸ್‌ಗೆ ಹೊಸ ಭರವಸೆ ನೀಡಿತ್ತು.
ಇದರ ಬೆನ್ನಲ್ಲೇ ನಟ ಕಿಚ್ಚ ಸುದೀಪ್ ಅವರು, ದರ್ಶನ್ ಅವರ 'ಕಾಟೇರ' ಸಿನಿಮಾ ನೋಡಲಿದ್ದಾರೆ ಎಂಬ ಮಾಹಿತಿ ಹೊರ ಬಂದಿದ್ದೆ. ಮೊನ್ನೆಯಷ್ಟೇ ಕಾಟೇರ ಸಿನಿಮಾದ ಸೆಲೆಬ್ರಿಟಿ ಶೂ ಆಯೋಜನೆ ಮಾಡಲಾಗಿತ್ತು. ಶೋಗೆ ಚಿತ್ರರಂಗದ ಹಲವು ಕಲಾವಿದರು ಬಂದು ಕಾಟೇರನ ಅಬ್ಬರ ಕಣ್ತುಂಬಿಕೊಂಡಿದ್ದರು. ಆದರೆ, ಸುದೀಪ್ ಬಂದಿರಲಿಲ್ಲ.

ಮ್ಯಾಕ್ಸ್ ಶೂಟಿಂಗ್‌ನಲ್ಲಿ ಬ್ಯುಸಿ, ಬಿಡುವಾದ ತಕ್ಷಣ ಕಾಟೇರನ ದರ್ಶನ!
ನಟ ಕಿಚ್ಚ ಸುದೀಪ್ ಸದ್ಯ ಮ್ಯಾಕ್ಸ್ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣ ಒಂದೆರಡು ದಿನಗಳ ಹಿಂದಷ್ಟೇ ಮತ್ತೆ ಆರಂಭವಾಗಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಇದ್ದು, ತಕ್ಷಣ ಕಾಟೇರ ಸೆಲಬ್ರಿಟಿ ಶೋಗೆ ಬರಲು ಆಗಿಲ್ಲ. ಹೀಗಾಗಿ ಸಮಯವಾದ ತಕ್ಷಣ ಕಾಟೇರ ನೋಡುವುದಾಗಿ ತಿಳಿಸಿದ್ದಾರಂತೆ.
"ಕಾಟೇರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಖುದ್ದು ಕಿಚ್ಚ ಸುದೀಪದ ಅವರಿಗೆ ಕರೆ ಮಾಡಿ ಸೆಲಬ್ರಿಟಿ ಶೋಗೆ ಕರೆದಿದ್ದರು. ಆದರೆ, ಶೂಟಿಂಗ್ ಇರುವ ಕಾರಣ ಅವರು ಬಂದಿಲ್ಲ. ಈ ವಾರದಲ್ಲಿ ಆದಷ್ಟು ಬೇಗ 'ಕಾಟೇರ' ನೋಡುವುದಾಗಿ ಹೇಳಿದ್ದಾರೆ. ಅವರು ಬಂದ ತಕ್ಷಣ ತಿಳಿಸುವಂತೆ ರಾಕ್‌ಲೈನ್ ವೆಂಕಟೇಶ್ ಅವರು ಹೇಳಿದ್ದಾರೆ" ಎಂದು ಕಾಟೇರ ನಿರ್ದೇಶಕ ತರುಣ್ ಸುಧೀರ್ ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.
ಕಾಟೇರ
ನಟ ದರ್ಶನ್ ಮತ್ತು ಆರಾಧನಾ ರಾಮ್ ನಟನೆಯ ಕಾಟೇರ ಸಿನಿಮಾಕ್ಕೆ ಕೇವಲ ಒಂದು ವಾರದಲ್ಲಿ 52 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿರುವ ಅಂದಾಜಿದೆ. ಹೀಗಾಗಿ 'ಕಾಟೇರ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಕಾಟೇರ 72 ಮಲ್ಟಿಪ್ಲೆಕ್ಸ್‌ಗಳು ಹಾಗೂ 406 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಒಂದು ವಾರಕ್ಕೆ ಸಿನಿಮಾ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.


Click it and Unblock the Notifications











