For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ತಾನು ಓದಿದ ಶಾಲೆಯನ್ನು ಉಳಿಸುವಂತೆ ನಟ ಕಿರಣ್ ಮನವಿ

  |

  'ಹಾಗೆ ಸುಮ್ಮನೆ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಟ ಕಿರಣ್ ಶ್ರೀನಿವಾಸ್ ತಾವು ಓದಿದ ಶಾಲೆಯನ್ನು ಉಳಿಸುವಂತೆ ಮನವಿ ಮಾಡಿದ್ದಾರೆ.

  ಬೆಂಗಳೂರು ಪ್ರೌಢಶಾಲೆ (ಬಿಎಚ್‌ಎಸ್)ಯು ವಿದ್ಯಾರ್ಥಿಗಳ ದಾಖಲಾತಿ ಇಲ್ಲದ ಕಾರಣ ಮುಚ್ಚುವ ಹಂತಕ್ಕೆ ಬಂದಿದ್ದು, ಶಾಲೆಯನ್ನು ಉಳಿಸುವಂತೆ ಕಿರಣ್ ಮನವಿ ಮಾಡಿದ್ದಾರೆ.

  'ನಾನು ಇಂದು ಈ ಹಂತಕ್ಕೆ ಬಂದು ನಿಂತಿರುವುದಕ್ಕೆ ಬಿಎಚ್‌ಎಸ್ ಶಾಲೆ ಕಾರಣ. ಆ ಶಾಲೆಯಲ್ಲಿಯೇ ನನ್ನ ಹಲವಾರು ಕನಸುಗಳು ಮೊದಲುಗೊಂಡವು. ನನ್ನ ವ್ಯಕ್ತಿತ್ವವನ್ನು ತಿದ್ದಿದ್ದು ಸಹ ಅದೇ ಶಾಲೆ ಹಾಗೂ ಅಲ್ಲಿನ ಶಿಕ್ಷಕರು' ಎಂದಿದ್ದಾರೆ ಕಿರಣ್.

  'ಈಗ ಎಂಟು ಮತ್ತು ಒಂಬತ್ತನೇ ತರಗತಿಗೆ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗುತ್ತಿಲ್ಲವಾದ್ದರಿಂದ ಶಾಲೆಯನ್ನು ಮುಚ್ಚುವ ಯೋಚನೆ ಮಾಡಲಾಗುತ್ತಿದೆ. ಇಂಥಹಾ ಒಂದು ಒಳ್ಳೆಯ ಶಾಲೆ ಮುಚ್ಚುವುದು ಸೂಕ್ತವಲ್ಲ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಬಿಎಚ್‌ಎಸ್ ಶಾಲೆಗೆ ಸೇರಿಸಿ ಎಂದಿದ್ದಾರೆ ಕಿರಣ್.

  'ಬಿಎಚ್‌ಎಸ್‌ನಲ್ಲಿ ಪಠ್ಯದ ಜೊತೆಗೆ ಇತರೆ ಕ್ರಿಯಾತ್ಮಕ, ಸೃಜನಶೀಲ ಚಟುವಟಿಕೆಗೂ ಸಾಕಷ್ಟು ಪ್ರಾಧಾನ್ಯತೆ ನೀಡುತ್ತಾರೆ ಹಾಗಾಗಿ ಈ ಶಾಲೆಗೆ ಮಕ್ಕಳನ್ನು ಸೇರಿಸಿ. ಹೌದು ನಾವೀಗ ಕೊರೊನಾ ಮಾರಿಯ ನಡುವೆ ಇದ್ದೇವೆ. ಆದರೆ ಯಾರೇ ನಿಮ್ಮ ಸ್ನೇಹಿತರು, ಸಂಬಂಧಿಗಳು ಮಕ್ಕಳನ್ನು ಎಂಟು, ಒಂಬತ್ತನೇ ತರಗತಿಗೆ ಸೇರಿಸುವ ಯೋಚನೆಯಲ್ಲಿದ್ದರೆ ಅವರಿಗೆ ಬಿಎಚ್ಎಸ್‌ ಶಾಲೆಯ ಬಗ್ಗೆ ಹೇಳಿ ಎಂದಿದ್ದಾರೆ ಕಿರಣ್.

  ಇನ್ಯಾವತ್ತೂ Salman Khan ಸಿನಿಮಾ ವಿಮರ್ಶೆ ಮಾಡೋದಿಲ್ಲ ಎಂದ‌ KRK | Filmibeat Kannada

  'ಹಾಗೇ ಸುಮ್ಮನೆ' ಸಿನಿಮಾದಲ್ಲಿ ನಟಿಸಿರುವ ಕಿರಣ್, ಕನ್ನಡ ಮಾತ್ರವಲ್ಲದೆ ಹಿಂದಿ ಸಿನಿಮಾಗಳು, ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.

  English summary
  Actor Kiran Srinivas requeste people to save BHS school Bengaluru in which Kiran also completed his schooling.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X