ಸ್ಯಾಂಡಲ್ ವುಡ್ ಕರ್ಣನಾಗಿ ಮಿಂಚಲಿರುವ ಕಿಶೋರ್

By Rajendra

ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ಕಿಶೋರ್ ಈಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. 'ತುಂಡೈಕ್ಳ ಸವಾಸ' ಚಿತ್ರದ ಬಳಿಕ ಕಿಶೋರ್ ಕನ್ನಡದಲ್ಲಿ ಅಭಿನಯಿಸುತ್ತಿರುವ ಚಿತ್ರವಿದು. ಈ ಬಾರಿ ಅವರು ದಾನ ವೀರ ಶೂರ 'ಕರ್ಣ'ನಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಈ ಹಿಂದೆ 'ಕರ್ಣ' (1986) ಎಂಬ ಚಿತ್ರದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯಿಸಿದ್ದರು. ಈಗ ಅದೇ ಶೀರ್ಷಿಕೆಯಲ್ಲಿ ಚಿತ್ರವನ್ನು ನಿರ್ಮಿಸುತ್ತಿರುವವರು ಜಿ ರಾಮಂದ್ರನ್. ಈಗಾಗಲೆ ಅವರು ಹೆಂಡ್ತೀರ ದರ್ಬಾರ್, ಸೂಪರ್ ಶಾಸ್ತ್ರಿ ಚಿತ್ರಗಳನ್ನು ತಮ್ಮ ಜಿಆರ್ ಗೋಲ್ಡ್ ಫಿಲಂಸ್ ಲಾಂಛನದಲ್ಲಿ ನಿರ್ಮಿಸಿದ್ದಾರೆ. [ವಿಮರ್ಶೆ: ಪತ್ರಿಕೆಗಳು ಕಂಡಂತೆ 'ಉಳಿದವರು ಕಂಡಂತೆ']

Actor Kishore
ಕರ್ಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ರವಿರಾಜ್. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಸಹ ಅವರೇ ಹೆಣೆದಿದ್ದಾರೆ. ಚಿತ್ರದ ನಾಯಕಿ ಹಾರ್ದಿಕಾ ಶೆಟ್ಟಿ. ಚಿತ್ರದ ನಿರ್ಮಾಪಕ ರಾಮಚಂದ್ರನ್ ಅವರು ಗಮನಾರ್ಹ ಪಾತ್ರವೊಂದನ್ನು ಪೋಷಿಸುತ್ತಿದ್ದಾರೆ.

ಛಾಯಾಗ್ರಹಣ ದಯಾಳ್ ಓಶೋ, ಕಲೆ ಕೃಷ್ಣಮಾಚಾರಿ, ಸಂಕಲನ ದೇವರಾಜ್, ಚಿತ್ರದ ಉಳಿದ ತಾರಾಗಣದಲ್ಲಿ ಶ್ರೀ ಚಂದ್ರು, ಶೋಭರಾಜ್, ಜಿ.ಆರ್ ಮುಂತಾದವರು ಇದ್ದಾರೆ. ಇನ್ನುಳಿದ ತಾರಾಗಣ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. (ಒನ್ಇಂಡಿಯಾ ಕನ್ನಡ)

More from Filmibeat

English summary
One of the much appreciated Kannada actor in Sandalwood Kishore signed yet another film. The film titled as Karna. Hardika Shetty is being paired opposite Kishore in this film. Producer G Ramachandran and directed by Raviraj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X