twitter
    For Quick Alerts
    ALLOW NOTIFICATIONS  
    For Daily Alerts

    "ದುನಿಯಾ ವಿಜಯ್‌ ಮತ್ತು ನನ್ನನ್ನು ದುಡ್ಡು ಕೊಡದೆ ದುಡಿಸಿಕೊಂಡಿದ್ದಾರೆ"

    |

    ತಮ್ಮ ಮನೋಜ್ಞ ನಟನೆಯಿಂದ ಸ್ಯಾಂಲ್ ಡ್‌ವುಡ್‌ ಅಲ್ಲದೇ ಇತರ ಭಾಷೆಗಳಲ್ಲೂ ಮಿಂಚಿದ ನಟ ಕಿಶೋರ್‌. ಯಾವುದೇ ಪಾತ್ರ ಕೊಟ್ಟರೂ ನೂರಕ್ಕೆ ನೂರು ಜೀವ ತುಂಬುವ ಕಿಶೋರ್‌ ತಮ್ಮದೇ ಮಾತಿನ ಶೈಲಿಯಲ್ಲಿ ಸ್ಟೈಲ್‌ನಲ್ಲಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಸ್ಯಾಂಡಲ್‌ವುಡ್‌ ಸೇರಿದಂತೆ ಇತರ ಭಾಷೆಗಳಲ್ಲೂ ಬಹುಬೇಡಿಕೆ ನಟರಾಗಿರುವ ಕಿಶೋರ್‌ ಸದ್ಯ ವಿಭಿನ್ನವೆನಿಸುವ ಪಾತ್ರಗಳನ್ನಷ್ಟೇ ಆಯ್ದುಕೊಂಡು ನಟಿಸುತ್ತಿದ್ದಾರೆ.

    ನಾಯಕ ನಟನಾಗಿ, ವಿಲನ್‌ ಆಗಿ ತೆರೆ ಮಿಂಚಿದ್ದ ಕಿಶೋರ್‌, ಪೊಲೀಸ್‌ ಪಾತ್ರಕ್ಕಂತೂ ಮೆಚ್ಚದವರಿಲ್ಲ. ದುನಿಯಾ, ಹುಲಿ ಚಿತ್ರಗಳಲ್ಲಿ ಕಿಶೋರ್‌ ಪೊಲೀಸ್‌ ಪಾತ್ರವನ್ನು ಜನಕೊಂಡಾಡಿದ್ದು, ಇದೀಗ ಕಿಶೋರ್‌ ಮತ್ತದೇ ಖಡಕ್‌ ಲುಕ್‌ನಲ್ಲಿ ತೆರೆ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ. ಕನ್ನಡದ ಭರವಸೆಯ ನಿರ್ದೇಶಕ ರಿಷಬ್‌ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಕಾಂತಾರಾ' ಚಿತ್ರದಲ್ಲಿ ಕಿಶೋರ್‌ ಅರಣ್ಯಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಗುರುವಾರವೇ 'ಕಾಂತಾರ' 75 ಪ್ರೀಮಿಯರ್‌ ಶೋಗಳು ಫಿಕ್ಸ್: ರಮ್ಯಾ ಎಲ್ಲಿ, ಯಾವಾಗ ಸಿನಿಮಾ ನೋಡ್ತಾರೆ?ಗುರುವಾರವೇ 'ಕಾಂತಾರ' 75 ಪ್ರೀಮಿಯರ್‌ ಶೋಗಳು ಫಿಕ್ಸ್: ರಮ್ಯಾ ಎಲ್ಲಿ, ಯಾವಾಗ ಸಿನಿಮಾ ನೋಡ್ತಾರೆ?

    ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಕಾಂತಾರಾ' ಚಿತ್ರ ತೆರೆ ಕಾಣಲು ಸಜ್ಜಾಗಿದ್ದು, ಇದೇ ಸಪ್ಟೆಂಬರ್ 30ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸದ್ಯ ಚಿತ್ರತಂಡ ಕಾಂತಾರ ಪ್ರಚಾರದಲ್ಲಿ ತೊಡಗಿದ್ದು, ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ನಟ ಕಿಶೋರ್‌ ಅವರನ್ನು ಚಿತ್ರದ ನಿರ್ದೇಶಕ ನಾಯಕ ನಟ ರಿಷಬ್‌ ಶೆಟ್ಟಿ ಸಂದರ್ಶನ ನಡೆಸಿದ್ದಾರೆ. ಈ ವೇಳೆ ಕಿಶೋರ್‌ ತಮ್ಮ ನಟನೆಯ ಪ್ರಾರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    ತುಂಬಾ ಸಲ ನಮ್ಮನ್ನು ಅದೇ ರೀತಿ ಬಳಸಿಕೊಂಡಿದ್ದಾರೆ

    ತುಂಬಾ ಸಲ ನಮ್ಮನ್ನು ಅದೇ ರೀತಿ ಬಳಸಿಕೊಂಡಿದ್ದಾರೆ

    ದುನಿಯಾ ಶುರುವಾಗುವ ಮೊದಲು ನಾನು ವಿಜಯ್‌ ಗೆಳೆಯರಾಗಿದ್ದೆವು. 'ರಾಕ್ಷಸ' ಚಿತ್ರದಲ್ಲಿ ಕೊನೆಯಲ್ಲಿ ಒಂದು ಫೈಟ್‌ ಇತ್ತು. ಅದರ ಮೇಲೆ ಚಿತ್ರತಂಡ ಫೋಕಸ್‌ ಮಾಡಿತ್ತು. ತುಂಬಾ ಮುಖ್ಯವಾದ ಫೈಟ್‌ ಅಂತಾ ಟ್ರೈನ್‌ ಮಾಡಿಸಬೇಕಿತ್ತು. ಆದರೆ ಅವಾಗ ನಮ್ಮ ಬಳಿ ದುಡ್ಡಿರಲಿಲ್ಲ. ಬರಿ ನಟನೆಗೆ ಅವಕಾಶಗಳಷ್ಟೇ ಸಿಗುತಿತ್ತು. ಯಾರನ್ನು ಕೇಳಿದ್ರೂ ದುಡ್ಡು ಕೊಡುತ್ತಿರಲಿಲ್ಲ. ತುಂಬಾ ಸಲ ನಮ್ಮನ್ನು ಅದೇ ರೀತಿ ದುಡಿಸಿಕೊಂಡಿದ್ದಾರೆ. ಈ ಸಮಯದಲ್ಲಿ ವಿಜಯ್‌ ನನಗೆ ಆಪ್ತರಾದರು. ಅದಾದ ಬಳಿಕ 'ಕಲ್ಲರಳಿ ಹೂವಾಗಿ' ನಾವಿಬ್ಬರು ಒಟ್ಟಿಗೆ ಆ್ಯಕ್ಟ್‌ ಮಾಡುತ್ತಿದ್ದೆವು. ಆಗ ವಿಜಯ್‌ ನಾವೆಲ್ಲಾ ಫೆಂಡ್ಸ್‌ ಸೇರಿ ಈ ರೀತಿ ಸಿನಿಮಾ ಮಾಡುತ್ತಿದ್ದೇವೆ ಎಂದಿದ್ದರು. ಅಂದು ಅವರಾಗಿಯೇ ದುಡ್ಡು ಹಾಕಿ ಹೀರೋ ಆಗಿ ಸಿನಿಮಾ ಮಾಡಿದ್ದಕ್ಕೆ ಇಷ್ಟೆಲ್ಲಾ ಆಯ್ತು. 'ದುನಿಯಾ' ತುಂಬಾ ದೊಡ್ಡ ಹಿಟ್‌ ಆಯ್ತು. ಬಳಿಕ ಒಳ್ಳೊಳ್ಳೆ ಸಮಯಕ್ಕೆ ಒಳ್ಳೊಳ್ಳೆ ಅವಕಾಶಗಳು ಸಿಕ್ಕವು ಎಂದು ಕಿಶೋರ್‌ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    'ಕಾಂತಾರ' Vs 'ಪೊನ್ನಿಯಿನ್ ಸೆಲ್ವನ್': ರಿಷಬ್ ಶೆಟ್ಟಿ ಸಿನಿಮಾವನ್ನು ಮೀರಿಸ್ತಿದೆ ತಮಿಳು ಸಿನಿಮಾ ಟಿಕೆಟ್ ಬುಕ್ಕಿಂಗ್!'ಕಾಂತಾರ' Vs 'ಪೊನ್ನಿಯಿನ್ ಸೆಲ್ವನ್': ರಿಷಬ್ ಶೆಟ್ಟಿ ಸಿನಿಮಾವನ್ನು ಮೀರಿಸ್ತಿದೆ ತಮಿಳು ಸಿನಿಮಾ ಟಿಕೆಟ್ ಬುಕ್ಕಿಂಗ್!

    ಚೀಪರ್‌ ಆಯ್ಕೆಯಾಗಿ ನನ್ನನ್ನು ಆಯ್ಕೆ ಮಾಡಿದ್ರು

    ಚೀಪರ್‌ ಆಯ್ಕೆಯಾಗಿ ನನ್ನನ್ನು ಆಯ್ಕೆ ಮಾಡಿದ್ರು

    ಕನ್ನಡ ಹೊರತು ಪಡಿಸಿ ಬೇರೆ ಭಾಷೆಯಲ್ಲೂ ಕಿಶೋರ್‌ ನಟನೆಗೆ ಬೇಡಿಕೆ ಇದ್ದು, ಮೊದಲ ಚಿತ್ರಕ್ಕೆ ಆಯ್ಕೆಯಾದ ಬಗ್ಗೆ ಕಿಶೋರ್‌ ಹೇಳಿದ್ದಾರೆ. 'ಪೊಲ್ಲಾಧವನ್' ಸಿನಿಮಾ ವೆಟ್ರಿಮಾರನ್ ಕೂಡ ಹೊಸಬರೆ, ಆ ಚಿತ್ರದಲ್ಲಿ ಮೊದಲು ನನ್ನ ಪಾತ್ರಕ್ಕೆ ಮೊದಲ ಆಯ್ಕೆ ನಾನಾ ಪಾಟೇಕರ್ ಅವರಾಗಿದ್ದರು. ಪ್ರೊಡ್ಯೂಸರ್‌ಗೆ ಅವರನ್ನು ಕರೆತರಲಾಗಲಿಲ್ಲ ಅಂತಾ ಬದಲಿ ವ್ಯಕ್ತಿಯನ್ನು ಹುಡುಕುತ್ತಿದ್ದರು. ನಾನಾ ಪಾಟೇಕರ್ ಬದಲಿಗೆ ಚೀಪರ್‌ ಆಯ್ಕೆ ಹುಡುಕುತ್ತಿದ್ದರು. ಆಗ ನನ್ನನ್ನು ಸಿನಿಮಾಗೆ ಬಾ ಅಂತಾ ಕರೆದರು ಎಂದು ಹೇಳಿದರು.

    ನನಗೆ ಕೆಲಸ ಕೊಟ್ಟ ಪ್ರತಿಯೊಬ್ಬರಿಗೂ ಧನ್ಯವಾದ

    ನನಗೆ ಕೆಲಸ ಕೊಟ್ಟ ಪ್ರತಿಯೊಬ್ಬರಿಗೂ ಧನ್ಯವಾದ

    ಒಂದೊಂದೆ ಚಿತ್ರಗಳು ಕಳೆಯುತ್ತಿದ್ದಂತೆ ನನಗೆ ಸರಿಯಾದ ಸಮಯದಲ್ಲಿ ಸರಿಯಾದ ಅವಕಾಶಗಳು ಸಿಕ್ಕವು. ಸಿನಿಮಾಗಳಲ್ಲಿ ನನಗೆ ಕೆಲಸ ಮಾಡಲು ಅವಕಾಶ ಕೊಟ್ಟ ಪ್ರತಿಯೊಬ್ಬರಿಗೂ ಧನ್ಯವಾದ ಹೇಳು ಇಷ್ಟಪಡುತ್ತೇನೆ. ಯಾಕೆಂದರೆ ಇಂದು ಅವರಿಂದಲೇ ನಮಗೆ ಜನ ಸಿಕ್ಕಿರುವುದು. ಇನ್ನು ನಮ್ಮ ಜೊತಗೆ ಕೆಲಸ ಮಾಡಿದವರು ದೊಡ್ಡ ಸ್ಟಾರ್‌ ಆಗಿರುವುದು ನನಗೆ ಖುಷಿಯ ವಿಚಾರ. ದುನಿಯಾ ವಿಜಯ್‌ ಇವತ್ತು ಸ್ಟಾರ್‌ ಆಗಿರುವುದು ದೊಡ್ಡ ಖುಷಿ ಯಾಕೆಂದರೆ, ಯೋಗ್ಯತೆಗೆ ತಕ್ಕ ಪ್ರತಿಫಲ ಸಿಕ್ಕಿದೆ ಅಂತಾ ನನಗೆ ಅನಿಸುತ್ತದೆ ಎಂದರು.

    ರಿಷಬ್‌ ಶೆಟ್ಟಿ ಕತೆಗೆ ನಟ ಕಿಶೋರ್‌ ಮೆಚ್ಚುಗೆ

    ರಿಷಬ್‌ ಶೆಟ್ಟಿ ಕತೆಗೆ ನಟ ಕಿಶೋರ್‌ ಮೆಚ್ಚುಗೆ

    ಮನುಷ್ಯ ಮತ್ತು ಪ್ರಕೃತಿಯ ಬಗ್ಗೆ ಹೇಳಲು ಹೊರಟಿರುವುದು ನಿಮ್ಮ ಕತೆಯಲ್ಲಿ ಮೊದಲು ನನಗೆ ಇಷ್ಟವಾಯ್ತು. ಕಾಡಿನಲ್ಲೇ ಬದುಕಿರುವ ಸುಮಾರು ಸಮುದಾಯಗಳಿವೆ. ಕಾಡಿಗೆ ತೊಂದರೆ ಕೊಡುತ್ತಿದ್ದಾರೆ ಅಂತಾ ಹೇಳಿ ಅವರನ್ನೆಲ್ಲಾ ಸರ್ಕಾರ ಹೊರಗಡೆ ಹಾಕಿದೆ. ಕಾಡು ಜನರನ್ನು ಕಾಡಿನಿಂದ ಹೊರಗೆ ಹಾಕಿ ವ್ಯವಸಾಯ ಮಾಡಿ ಅಂತಾರೆ. ಆದ್ರೆ ಅವರಿಗೆ ವ್ಯವಸಾಯ ಮಾಡುವುದೇ ಗೊತ್ತಿಲ್ಲ. ಅವರ ಜೀವನ ಶೈಲಿಯಲ್ಲಿ ಇಲ್ಲವೇ ಇಲ್ಲ ಅದು. ಕಾಡು ಹಾಗೂ ಮನುಷ್ಯರ ನಡುವೆ ಸಂಘರ್ಷ ಸಹಜ. ಆದರೆ ಈ ಚಿತ್ರದಲ್ಲಿ ಆ ಲೆವೆಲ್ ಅನ್ನೂ ಮೀರಿ ಕಾಡಿನ ಹೆಸರಿನಲ್ಲಿ ಇಬ್ಬರೂ ನಾನು ಎಂಬ ಅಹಂಕಾರದಲ್ಲಿ ಆಗುವಂತಹ ಅನಾಹುತಗಳನ್ನು ತೋರಿಸಲಾಗಿದೆ ಎಂದರು.

    English summary
    Sandalwood Actor Kishore opens up on his starting struggle days with director Rishab Shetty,
    Wednesday, September 28, 2022, 17:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X