'ಉಳಿದವರು ಕಂಡಂತೆ' ನಂತರ ಮತ್ತೆ ಒಂದೇ ಚಿತ್ರದಲ್ಲಿ ಕಿಶೋರ್, ರಿಷಬ್
ಒಂದು ಕಡೆ ಮಣ್ಣಿನ ಸತ್ಯ ತಿಳಿದು ವ್ಯವಸಾಯ ಮಾಡುತ್ತಿರುವ ಕಿಶೋರ್ ಇತ್ತ ಸಿನಿಮಾಗಳಲ್ಲಿ ಸಹ ಬಿಜಿ ಇದ್ದಾರೆ. ಕನ್ನಡದಲ್ಲಿ ಕಿಶೋರ್ ಮತ್ತೊಂದು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.
'ನಾಥುರಾಮ್' ಎಂಬ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟ ಕಿಶೋರ್ ನಟಿಸುತ್ತಿದ್ದಾರೆ. ವಿನು ಬಳಂಜ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ ಅವರು ಮೊದಲ ಬಾರಿಗೆ ಸಿನಿಮಾಗೆ ಕೈ ಹಾಕಿದ್ದಾರೆ.

ಈ ಚಿತ್ರದಲ್ಲಿ ದೊಡ್ಡ ತಾರ ಬಳಗವಿದೆ. ಕಿಶೋರ್, ರಿಷಬ್ ಶೆಟ್ಟಿ, ಅನಂತ್ ನಾಗ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಅಂದರೆ, ರಿಷಬ್ ಶೆಟ್ಟಿ ಮತ್ತು ಕಿಶೋರ್ 'ಉಳಿದವರು ಕಂಡಂತೆ' ಬಳಿಕ ಮತ್ತೆ ಒಂದಾಗಿದ್ದಾರೆ. ನಾಯಕಿಯ ಪಾತ್ರಕ್ಕೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

'ರಂಗಿತರಂಗ' ಸಿನಿಮಾಗೆ ಬಂಡವಾಳ ಹಾಕಿದ್ದ ಪ್ರಕಾಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಜೊತೆಗೆ 'ಅಲ್ಪವಿರಾಮ', 'ಉದ್ಘರ್ಷ' ಸಿನಿಮಾಗಳಲ್ಲಿ ಸಹ ಕಿಶೋರ್ ನಟಿಸುತ್ತಿದ್ದಾರೆ.
English summary
Actor Kishore playing important role 'Nathuram' kannada movie.


Click it and Unblock the Notifications