ಭ್ರಷ್ಟ ಬೀಜಾಸುರ ಜೋಕರ್ ; ಚುನಾವಣೆಯಿದಲೇ ನಿಷೇಧಿಸಬೇಕಿದ್ದ ಒಕ್ಕೂಟ ಬಿಹಾರದಲ್ಲಿ ಅಧಿಕಾರಕ್ಕೆ ಬಂದಿದೆ- ಕಿಶೋರ್

ಚಿತ್ರರಂಗ ಮತ್ತು ರಾಜಕೀಯ ಎರಡು ಒಂದೇ ನಾಣ್ಯದ ಎರಡು ಮುಖ. ಅಲ್ಲಿದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿದ್ದವರು ಅಲ್ಲಿಯೂ ಬೆಳೆಯುತ್ತಾರೆ. ಇದಕ್ಕೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್ ವರೆಗೆ ಹತ್ತು ಹಲವು ಉದಾಹರಣೆ ಭಾರತೀಯ ಚಿತ್ರರಂಗದಲ್ಲಿವೆ. ಹಾಗಂಥ ಎಲ್ಲರೂ ಇಲ್ಲಿ ಬಹಿರಂಗವಾಗಿ ಚುನಾವಣೆಯ ಅಖಾಡಕ್ಕೆ ಧುಮುಕುವುದಿಲ್ಲ. ಬದಲಿಗೆ ಕೆಲವರು ...

ದೂರದಿಂದಲೇ ನಿಂತು ರಾಜಕೀಯ ವ್ಯವಸ್ಥೆಯ ಕುರಿತು ಪ್ರಶ್ನೆ ಮಾಡುತ್ತಾರೆ. ಅನ್ಯಾಯ-ಅಕ್ರಮ- ಭ್ರಷ್ಟಾಚಾರದ ಕುರಿತು ಪ್ರಶ್ನೆ ಮಾಡುತ್ತಾರೆ. ಸರ್ಕಾರದ ಲೋಪ ದೋಷ ಜಗಜ್ಜಾಹೀರಾದಾಗ ಕೆಂಡ ಕಾರುತ್ತಾರೆ. ತಮ್ಮ ರಾಜಕೀಯ ಸಿದ್ಧಾಂತ ಮತ್ತು ನಿಲುವುಗಳನ್ನು ಆಗಾಗ ಮಂಡಿಸುತ್ತಾರೆ. ಉದಾಹರಣೆಗೆ ಕಿಶೋರ್.

Actor Kishore Slams EC Brands NDA Bihar Win A Result of Corruption and Voter Fraud

ಹೌದು, ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಎಂದು ಕಾಲ್ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವ ತಾರೆಯರೇ ಚಿತ್ರರಂಗದಲ್ಲಿ ಹೆಚ್ಚಿದ್ದಾರೆ. ಇಲ್ಲಿ ಹೆಚ್ಚಿನವರಿಗೆ ಸಿನಿಮಾ ಕೂಡಾ ಅನ್ನಿಸಿದ್ದನ್ನು ಹೇಳುವ, ಆ ಮೂಲಕ ಜಾಗೃತಿ ಮೂಡಿಸುವ ಮಾಧ್ಯಮ ಅಂತಲೂ ಅನ್ನಿಸೋದಿಲ್ಲ.

ಆದರೆ ಕನ್ನಡ ಚಿತ್ರರಂಗದ ''ಹುಲಿ'' ಕಿಶೋರ್ ಇದಕ್ಕೆ ತದ್ವಿರುದ್ಧ. ಸಮಾಜದ ಆಗು-ಹೋಗುಗಳ ಬಗ್ಗೆ ಮೊದಲಿಂದ ಧ್ವನಿ ಎತ್ತುತ್ತಾ, ಕಳೆದ ಹತ್ತು ವರ್ಷಗಳಿಂದ ಬಲಪಂಥೀಯವರ ಕೆಂಗಣ್ಣಿಗೆ ಗುರಿಯಾಗ್ತಾನೇ ಬಂದ ಕಿಶೋರ್ ಸದ್ಯ ಬಿಹಾರದಲ್ಲಿನ ಫಲಿತಾಂಶ ಕುರಿತು ಪ್ರಶ್ನೆ ಮಾಡಿದ್ದಾರೆ.

ಬಿಹಾರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನ, ಮಹಿಳೆಯರಿಗೆ ವರ್ಗಾವಣೆ ಮಾಡಲಾಧ ಹಣ.. ಈ ಎಲ್ಲ ವಿಚಾರಗಳ ಕುರಿತು ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ. ಚುನಾವಣಾ ಆಯುಕ್ತರು ಹಂಚಿಕೊಂಡ ವಿಡಿಯೋ ಹಂಚಿಕೊಂಡು ಚುನಾವಣೆಯಿಂದಲೇ ಬ್ಯಾನ್‌ ಆಗಬೇಕಾದ ಒಕ್ಕೂಟವೊಂದು ಬಿಹಾರದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ. ಹಾಗಿದ್ದರೆ ಕಿಶೋರ್ ಹೇಳಿದ್ದೇನು..? ಅವರ ಮನದ ಮಾತೇನು..? ಎಂದು ತಿಳಿಯಲು ಮುಂದೆ ಓದಿ


ಕಿಶೋರ್ ಬರಹ

ಮತದಾರರ ಪಟ್ಟಿಯಿಂದ ಕಿತ್ತು ಹಾಕಲ್ಪಟ್ಟ ಪ್ರತಿಯೊಬ್ಬ ಮಾನ್ಯ ಮತದಾರನ ಮತವೂ ಪ್ರಜಾಪ್ರಭುತ್ವದ ಮಟ್ಟಿಗೆ ಒಬ್ಬ ನಾಗರಿಕನ ಕೊಲೆಗೆ ಸಮಾನ. ಹುಟ್ಟಿನಿಂದಲೇ ಭ್ರಷ್ಟಾಚಾರದ ಬೀಜ ಹೊತ್ತು ಬಂದ ಚುನಾವಣಾ ಆಯುಕ್ತನ ಪದವಿಯಿಂದ ಬೇರಿನ್ನೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ( ಆ ಪದವಿಯ ಆಯ್ಕೆ ಸಮಿತಿಯಿಂದ ಚೀಫ್ ಜಸ್ಟೀಸ್ರನ್ನು ಹೊಸ ಕಾಯ್ದೆ ತಂದು ಹೊರಗಿಟ್ಟಿದ್ದು) ಈ ದೇಶದಲ್ಲಿ ಪ್ರಜಾಪ್ರಭುತ್ವ ಒಂದು ಜೋಕ್.. ಇಂತಹ ಭ್ರಷ್ಟಬೀಜಾಸುರ ಜೋಕರ್‌ಗಳು ಮತದಾನ ಎಂಬ ಪ್ರಜಾಪ್ರಭುತ್ವದ ಅತ್ಯಂತ ಶಕ್ತಿಶಾಲಿ ಪ್ರಕ್ರಿಯೆಯ ಅತ್ಯುನ್ನತ ಸ್ಥಾನದಲ್ಲಿದ್ದಾಗ.... ಈ ವ್ಯಕ್ತಿ ಸಂಪೂರ್ಣವಾಗಿ ಭ್ರಷ್ಟ ಎಂದು ಸಾಬೀತುಪಡಿಸಲು ಮೇಲಿನ ಈ ಒಂದು ಹೇಳಿಕೆ ಸಾಕು. ಈ ವ್ಯಕ್ತಿಯ ಕಾರಣದಿಂದಾಗಿ, ಸರ್ಕಾರಿ ಹಣವನ್ನು ಬಳಸಿಕೊಂಡು ಜನರಿಗೆ ಲಂಚ ನೀಡಿ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಗಾಗಿ ಚುನಾವಣೆಯಿದಲೇ ನಿಷೇಧಿಸಲ್ಪಡಬೇಕಾಗಿದ್ದ ಒಕ್ಕೂಟವೊಂದು ಮತ್ತೆ ಅಧಿಕಾರಕ್ಕೆ ಬಂದಿದೆ. ಮಹಾಮಾನವ್ ಹೈ ತೋ ಸಬ್ ಕುಚ್ ಮುಮ್ಕಿನ್ ಹೈ

Actor Kishore Slams EC Brands NDA Bihar Win A Result of Corruption and Voter Fraud

ಹೀಗೆ ಕಿಶೋರ್ ತಮ್ಮ ಅಸಮಾಧಾನವನ್ನು ಸೋಶಿಯಲ್ ಮೀಡಿಯಾದಲ್ಲಿ ಹೊರ ಹಾಕಿದ್ದಾರೆ. ಎಂದಿನಂತೆ ಬಲಪಂಥೀಯರು ಕಿಶೋರ್ ಅವರ ಬೆನ್ನ ಹಿಂದೆ ಬಿದ್ದಿದ್ದಾರೆ. ಕಿಶೋರ್ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ. ಇನ್ನುಳಿದಂತೆ ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಸಮಾನ ಸಚಿವ ಸ್ಥಾನ ಹಂಚಿಕೆ ಸೂತ್ರದ ಮೇಲೆ ಸರ್ಕಾರ ರಚನೆಗೆ ಸಿದ್ಧತೆ ನಡೆಸುತ್ತಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ನವೆಂಬರ್ 19 ಅಥವಾ 20ರಂದು ನೂತನ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

More from Filmibeat

English summary
Murder of a citizen in terms of democracy." Actor Kishore slams the NDA's Bihar victory, alleging mass voter deletion and EC corruption after the poll outcome
Read more about: kishore politics filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X