ಮೊದಲ ತಮಿಳು ಚಿತ್ರದ ಸೆಟ್ಟಿನಲ್ಲಿ ನಟ ಕೋಮಲ್; 'ಗಿಚ್ಚಿಗಿಲಿಗಿಲಿ' ಪರಭಾಷೆಗೆ ಕಾಲಿಟ್ಟ ಮತ್ತೊಬ್ಬ ಕನ್ನಡ ನಟ

By ಅನಿತಾ ಬನಾರಿ

ನಟ ಕೋಮಲ್ ತಮ್ಮ ಹಾಸ್ಯ ಪ್ರಜ್ಞೆ ಹಾಗೂ ಅಭಿನಯಕ್ಕೆ ಹೆಸರುವಾಸಿ. ಮನೋಜ್ಞ ನಟನೆಯ ಮೂಲಕ ಸಿನಿಮಾ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸುತ್ತಿದ್ದ ಕೋಮಲ್ ಅವರ ಹಾಸ್ಯ ಕಂಡು ಮನಸೋಲದವರಿಲ್ಲ. ಇನ್ನು ಸಿನಿಮಾ ಮಾತ್ರವಲ್ಲದೇ ಕಿರುತೆರೆಗೂ ನಟ ಕೋಮಲ್ ಕಾಲಿಟ್ಟಿದ್ದರು. ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಹಾಸ್ಯ ಶೋ 'ಗಿಚ್ಚಿಗಿಲಿಗಿಲಿ ಸೀಸನ್ 3'ರ ಹೊಸ ತೀರ್ಪುಗಾರರಾಗಿಯೂ ಇವರು ಆಯ್ಕೆಯಾಗಿದ್ದರು.

'ಗಿಚ್ಚಿ ಗಿಲಿಗಿಲಿ' ರಿಯಾಲಿಟಿ ಶೋವಿನ ತೀರ್ಪುಗಾರರಲ್ಲಿ ಒಬ್ಬರಾಗಿ ಆಯ್ಕೆಯಾಗಿರುವ ಕೋಮಲ್ ಆ ಶೋವಿಗೆ ಒಂದು ಹೊಸ ಹುರುಪನ್ನು ತಂದಿದ್ದಾರೆ ಎಂದರೆ ತಪ್ಪಾಗಲ್ಲ. ತಮ್ಮ ಹಾಸ್ಯ ಪ್ರಜ್ಞೆ ಡೈಲಾಗ್ ಹಾಗೂ ಅನುಭವದ ಮಾತುಗಳೊಂದಿಗೆ ರಿಯಾಲಿಟಿ ಶೋನ ಸ್ಪರ್ಧಿಗಳನ್ನು ಹುರಿದುಂಬಿಸುತ್ತಿದ್ದಾರೆ.

Actor Komal Kumar first Tamil movie with Prabhu Ganesan shared video

ಇದೀಗ ನಟ ಕೋಮಲ್ ಕಾಲಿವುಡ್‌ಗೂ ಕಾಲಿಟ್ಟಿದ್ದು, ಕನ್ನಡಿಗರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಹೌದು, ಕನ್ನಡದ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಜನರ ಮನ ಗೆದ್ದಿರುವ ಕೋಮಲ್ ಇದೀಗ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ಕೋಮಲ್ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಒಂದು ವಿಡಿಯೋವನ್ನು ಅಪ್ಲೋಡ್ ಮಾಡುವ ಮೂಲಕ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ತಮಿಳಿನ ಲೆಜೆಂಡ್ ದಿವಂಗತ ಶಿವಾಜಿ ಗಣೇಶನ್ ಅವರ ಪುತ್ರ ಹಾಗೂ ಹಿರಿಯ ನಟ ಪ್ರಭು ಅವರೊಂದಿಗಿನ ಮಾತುಕತೆ ನಡೆಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೋಮಲ್ ಹಾಗೂ ಪ್ರಭು ಸುದೀರ್ಘ ಮಾತುಕತೆಯಲ್ಲಿ ತೊಡಗಿರುವುದು ಕಾಣುತ್ತದೆ. ಈ ವಿಡಿಯೋ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಮೊದಲ ತಮಿಳು ಸಿನಿಮಾ ಬಗ್ಗೆ ನಟ ಕೋಮಲ್ ರಿವೀಲ್ ಮಾಡಿದ್ದಾರೆ.

ವಿಡಿಯೋದಲ್ಲಿ ಕೋಮಲ್ ಅವರು ಹುಲಿ ಬಣ್ಣದ ಪಟ್ಟೆ ಪಟ್ಟೆ ಶರ್ಟ್ ಅನ್ನು ಹಾಕಿಕೊಂಡಿರುವುದಲ್ಲದೆ ಪಕ್ಕ ತಮಿಳು ನಟನಂತೆಯೇ ಕಾಣುತ್ತಿದ್ದಾರೆ. ಇನ್ನು ನಟ ಕೋಮಲ್ ಅವರು ತಮಿಳು ಚಿತ್ರರಂಗಕ್ಕೆ ಕಾಲಿಡುವುದನ್ನು 'ಉಂಡೆನಾಮ' ಸಿನಿಮಾ ಪ್ರಚಾರದ ವೇಳೆ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇದೀಗ ಆ ಸುಸಂದರ್ಭ ಬಂದಿದ್ದು ಅದನ್ನು ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ.

ತಮಿಳು ಸಿನಿಮಾ ಶೂಟಿಂಗ್ ಸ್ಪಾಟ್‌ನಲ್ಲಿ ತೆಗೆದಿರುವಂತಹ ಈ ವಿಡಿಯೋ ಇದೀಗ ಪ್ರೇಕ್ಷಕರಲ್ಲಿ ಅಭಿಮಾನಿಗಳಲ್ಲಿ ಬಹಳ ಕುತೂಹಲ ತೆರಳಿಸಿದೆ. ನಟ ಕೋಮಲ್ ಅವರಿಗೂ ಇದೊಂದು ಹೊಸ ಹೆಜ್ಜೆಯಾಗಿದೆ. ಅವರ ಮುಂದಿನ ಅಪ್‌ಡೇಟ್‌ಗಾಗಿ ಎಲ್ಲರೂ ಕಾಯುತ್ತಿದ್ದಾರೆ ಎಂದರೆ ತಪ್ಪಾಗಲ್ಲ.

More from Filmibeat

English summary
Actor Komal who charmed in Kannada Industry is now acting in a Tamil movie for the first time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X