Krishna G Rao Passes Away : 'ಕೆಜಿಎಫ್' ತಾತ ಕೃಷ್ಣ.ಜಿ ರಾವ್ ನಿಧನ
'ಕೆಜಿಎಫ್' ಸಿನಿಮಾದಲ್ಲಿ ತಾತನೊಬ್ಬನ ಜೀವ ಉಳಿಸಲು ರಾಕಿಭಾಯ್ ಸುತ್ತಿಗೆ ಎತ್ತಿಕೊಳ್ಳುತ್ತಾನೆ. ಆದರೆ ಇಂದು ನಿಜಕ್ಕೂ ಆ ತಾತನ ಜೀವ ಹಾರಿಹೋಗಿದೆ.
'ಕೆಜಿಎಫ್' ಹಾಗೂ 'ಕೆಜಿಎಫ್ 2' ಸಿನಿಮಾಗಳಲ್ಲಿ ನಟಿಸಿರುವ ಕೃಷ್ಣ.ಜಿ ರಾವ್ ಇಂದು ನಿಧನ ಹೊಂದಿದ್ದಾರೆ. ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು.
ಕಳೆದ ಬುಧವಾರ ರಾತ್ರಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಮನೆಯಲ್ಲಿ ಬಿದ್ದುಬಿಟ್ಟಿದ್ದರು. ಕೂಡಲೇ ಅವರ ಕುಟುಂಬ ಸದಸ್ಯರು ಅವರನ್ನು ಬೆಂಗಳೂರಿನ ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಗೆ ದಾಖಲಿಸಿದ್ದರು.

ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಕೃಷ್ಣ.ಜಿ ರಾವ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದೊಂದು ವಾರದಿಂದಲೂ ಚಿಕಿತ್ಸೆ ನಡೆಯುತ್ತಿತ್ತು. ಕೃಷ್ಣ.ಜಿ ರಾವ್ ಅವರನ್ನು ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ಕೊನೆಗೆ ಇಂದು ಚಿಕಿತ್ಸೆಗೆ ಸ್ಪಂದಿಸದೆ ಕೃಷ್ಣಾಜಿ ರಾವ್ ನಿಧನ ಹೊಂದಿದ್ದಾರೆ.
ಕೆಜಿಎಫ್ ಸಿನಿಮಾದ ಮೂಲಕ ಬಹಳ ವೈರಲ್ ಆಗಿದ್ದ ಕೃಷ್ಣ.ಜಿ ರಾವ್ ಗೆ ಆ ನಂತರ ಹಲವು ಸಿನಿಮಾಗಳಲ್ಲಿ ಅವಕಾಶ ಲಭಿಸಿತು. 'ನ್ಯಾನೊ ನಾರಾಯಣಪ್ಪ' ಹೆಸರಿನ ಸಿನಿಮಾಕ್ಕೆ ಇವರೇ ನಾಯಕ. ಸುಧಾರಾಣಿ, ಶಶಿಕುಮಾರ್ ನಟನೆಯ 'ವಿಧಿ 370' ಸಿನಿಮಾದಲ್ಲಿ ಕಾಶ್ಮೀರಿ ಪಂಡಿತನ ಪಾತ್ರದಲ್ಲಿ ಕೃಷ್ಣಾಜಿ ರಾವ್ ನಟಿಸಿದ್ದರು. ಆದರೆ ಇದೀಗ ಅವರು ಆಸ್ಪತ್ರೆ ಸೇರಿರುವ ಕಾರಣ ಈ ಸಿನಿಮಾಗಳ ಕತೆಯೇನು ಎಂಬುದು ಗೊತ್ತಿಲ್ಲ.


Click it and Unblock the Notifications











