ಅಪ್ಪನಾಗುತ್ತಿರುವ ಸಂತಸದಲ್ಲಿ ಲೂಸ್ ಮಾದ ಯೋಗಿ

ಲೂಸ್ ಮಾದ ಖ್ಯಾತಿಯ ನಟ ಯೋಗಿ ಗುಡ್ ನ್ಯೂಸ್ ನೀಡಿದ್ದಾರೆ. ಯೋಗಿ ನೀಡಿರುವ ಈ ಸಿಹಿ ಸುದ್ದಿ ಸಿನಿಮಾ ವಿಚಾರಕ್ಕೆ ಸಂಬಂಧಿಸಿದ್ದಲ್ಲ. ಇದು ಅವರ ವೈಯಕ್ತಿಕ ಜೀವನದ ಅತಿ ಖುಷಿಯ ಕ್ಷಣ. ಹೌದು, ಯೋಗಿ ಈಗ ತಂದೆಯಾಗುತ್ತಿದ್ದಾರೆ. ಈ ಖುಷಿಯ ವಿಚಾರವನ್ನು ಅವರ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

2017ರಲ್ಲಿ ಬಹುಕಾಲದ ಗೆಳತಿ ಸಾಹಿತ್ಯ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಯೋಗಿ. ಎರಡು ವರ್ಷದ ನಂತರ ಈಗ ಸಂತಸದ ಸುದ್ದಿಯನ್ನು ನೀಡಿದ್ದಾರೆ. 'ನಿನ್ನಂತೆ ಇರುವ ಪುಟ್ಟ 'ಸಾಹಿತ್ಯ' ಅತಿ ಶೀಘ್ರದಲ್ಲೇ ನಮ್ಮ ಮನೆಗೆ ಆಗಮಿಸಲಿದೆ' ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪುಟ್ಟ ಮಗುವಿನ ಬಟ್ಟೆಯನ್ನು ಮೈಮೇಲೆ ಹಾಕಿಕೊಂಡಿರುವ ಪತ್ನಿ ಸಾಹಿತ್ಯ ಅವರ ಫೋಟೋವನ್ನ ಯೋಗಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಸಿಹಿ ಸುದ್ದಿ ಕೇಳಿ ಥ್ರಿಲ್ ಆಗಿರುವ ಅಭಿಮಾನಿಗಳು ಯೋಗಿ ದಂಪತಿಗೆ ಶುಭಾಶಯ ಕೋರುತ್ತಿದ್ದಾರೆ.

Actor loose mada yogi wife sahitya is pregnant

ಅಂದ್ಹಾಗೆ, 'ದುನಿಯಾ-2' ಮತ್ತು 'ಲಂಬೋದರ' ಸಿನಿಮಾಗಳ ನಂತರ ಯೋಗಿ ಅಭಿನಯದ ಚಿತ್ರ ಇನ್ನು ರಿಲೀಸ್ ಆಗಿಲ್ಲ. ಯೋಗಿ ಹೊಸ ಪ್ರಾಜೆಕ್ಟ್ ಬಗ್ಗೆ ಸದ್ಯಕ್ಕೆ ಕುತೂಹಲ ಮೂಡಿದ್ದು, ಈ ಖುಷಿಯಲ್ಲಿ ಹೊಸ ಸಿನಿಮಾ ಘೋಷಣೆ ಮಾಡಿದ್ರು ಅಚ್ಚರಿಯಿಲ್ಲ.

More from Filmibeat

English summary
Kannada Actor loose mada yogi wife sahitya is pregnant. he shared this good news with his fans in instagram. yogesh and sahitya married on 2017.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X