»   » ಮಹೇಶ್ ಬಾಬು ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ

ಮಹೇಶ್ ಬಾಬು ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ

Posted By:
Subscribe to Filmibeat Kannada

ಬ್ಲಾಕ್ ಬಸ್ಟರ್ ಸಿನಿಮಾಗಳಿಂದ ಖ್ಯಾತಿ ಗಳಿಸಿರುವ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು, ತೆರೆಮೇಲೆ ಮಾತ್ರ ಮಾನವೀಯತೆ ಮೆರೆಯುವುದಿಲ್ಲ, ನಿಜ ಜೀವನದಲ್ಲೂ ಅಷ್ಟೇ ಭಾವುಕ ಜೀವಿ.

ತೆಲುಗು ಸಿನಿ ಅಂಗಳದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹೇಶ್ ಬಾಬು ಚಿತ್ರಜೀವನದ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ, ಮಹೇಶ್ ಬಾಬು ವಾಸ್ತವದಲ್ಲಿ ಹೇಗಿರುತ್ತಾರೆ? ಸಿಗುವ ಕಡಿಮೆ ಸಮಯದಲ್ಲಿ ಏನು ಮಾಡುತ್ತಾರೆ? ಅನ್ನುವ ಸತ್ಯ ಸಂಗತಿ ಯಾರಿಗೂ ಗೊತ್ತಿಲ್ಲ.

Actor Mahesh Babu spends 30% of his income on Charity

ಅಂತಹ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೀಗ ಬಯಲಾಗಿದೆ. ತಮಗೆ ಬರುವ ಸಂಭಾವನೆಯಲ್ಲಿ ವಿಕಲ ಚೇತನ ಮಕ್ಕಳಿಗೆ, ಅನಾಥ ಮಕ್ಕಳಿಗೆ ಮತ್ತು ವೃದ್ಧರಿಗೆ ಮಹೇಶ್ ಬಾಬು ಸದಾ ಸಹಾಯ ಮಾಡುತ್ತಾರೆ. [ವಿಕ್ರಮ್ ಸಂಭಾವನೆಯ ಅರ್ಧ ಮೊತ್ತ ಸೇರಿದ್ದು ಯಾರಿಗೆ?]

ಹೌದು, ತಮ್ಮ ಸಂಭಾವನೆಯ 30% ಭಾಗವನ್ನ ಸಮಾಜಮುಖಿ ಕಾರ್ಯಗಳಿಗೆ ಮೀಸಲಿಡುತ್ತಾರಂತೆ ಮಹೇಶ್ ಬಾಬು. ಅನೇಕ ಎನ್.ಜಿ.ಓ ಗಳಿಗೆ ಪತ್ನಿ ನಮ್ರತಾ ಕೂಡ ಸಹಾಯ ಹಸ್ತ ಚಾಚುತ್ತಿದ್ದಾರೆ. ಪತ್ನಿಗೆ ಕೈಜೋಡಿಸಿ, ವರ್ಷಕ್ಕೆ 15 ಕೋಟಿ ರೂಪಾಯಿ ಚಾರಿಟಿ ನೀಡುತ್ತಿದ್ದಾರೆ ಮಹೇಶ್. [ನಟ ಮಹೇಶ್ ಬಾಬು ಮನೆಯಲ್ಲಿ ಕಳ್ಳತನಕ್ಕೆ ಯತ್ನ]

Actor Mahesh Babu spends 30% of his income on Charity

ಆ ಮೂಲಕ ಅದೆಷ್ಟೋ ಎನ್.ಜಿ.ಓ ಗಳಿಗೆ ಧನ ಸಹಾಯ ಮಾಡುತ್ತಿದ್ದಾರೆ ಮಹೇಶ್ ಬಾಬು. ''ಎಲ್ಲಾ ಮಕ್ಕಳು ಒಂದೇ. ಪುಟಾಣಿ ಮಕ್ಕಳನ್ನ ನೋಡಿದಾಗ ನನ್ನ ಮಕ್ಕಳು ನೆನಪಾಗುತ್ತಾರೆ. ನನ್ನ ಕೈಯಲ್ಲಾಗಿದ್ದನ್ನ ನಾನು ಮಾಡುತ್ತಿದ್ದೇನೆ'' ಅಂತ ಎನ್.ಜಿ.ಓ ಒಂದಕ್ಕೆ ರಾಯಭಾರಿ ಆಗಿರುವ ಮಹೇಶ್ ಬಾಬು ಹೇಳಿಕೆ ನೀಡಿದ್ದಾರೆ.

ಕೋಟಿ ಕೋಟಿ ದುಡ್ಡು ಹರಿದು ಬರುತ್ತಿದ್ದಂತೆ ಅಮಲು ನೆತ್ತಿಗೇರಿಸಿಕೊಳ್ಳುವ ಅನೇಕರ ನಡುವೆ ಅನಾಥ ಮಕ್ಕಳಿಗೆ ಭವಿಷ್ಯ ಕಲ್ಪಿಸುತ್ತಿರುವ ಮಹೇಶ್ ಬಾಬು ನಿಜಕ್ಕೂ ರಿಯಲ್ 'ಹೀರೋ'. (ಏಜೆನ್ಸೀಸ್)

English summary
Tollywood Prince Mahesh Babu's 30% of the Income is reserved for the Charity Work. Mahesh Babu and his wife Namratha have come together to help underprivileged children.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada